ಕುಮಟಾ : ತಾಲೂಕಿನ ಹೆಗಡೆ ಗ್ರಾಮ ಮತ್ತು ಮಿರ್ಜಾನ ಗ್ರಾಮದ ಮಧ್ಯ ಅಘನಾಶಿನಿ ನದಿ ಹಾದುಹೋಗಿದ್ದು, ಹಗಡೆ ತಾರಿಬಾಗಿಲಿನಿಂದ ಮಿರ್ಜಾನ್ ತಾರಿಬಾಗಿಲಿಗೆ ಬಹುಕೋಟಿ ವೆಚ್ಚದಲ್ಲಿ ಬ್ರಿಡ್ಜ್ ನಿರ್ಮಾಣಮಾಡುವ ಕಾರ್ಯ ಕಳೆದ ಕೆಲ ತಿಂಗಳುಗಳ ಹಿಂದೆ ಪ್ರಾರಂಭವಾಗಿತ್ತು. ಶೇಕಡಾ 50 ರಷ್ಟು ಬ್ರಿಡ್ಜ್ ನಿರ್ಮಾಣದ ಕಾರ್ಯ ಪೂರ್ಣಗೊಂಡಿದ್ದು, ಆದರೆ ಇಂದು ಏಕಾ ಏಕಿ ನಿರ್ಮಿಸಲಾಗಿದ್ದ ಬ್ರಿಡ್ಜ್ ಕುಸಿದುಬಿದ್ದಿದೆ. ನಿರ್ಮಾಣ ಹಂತದಲ್ಲಿಯೇ ಈ ಒಂದು ಸೇತುವೆಯು ಕುಸಿದು ಬಿದ್ದಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಸೇತುವೆ ಕುಸಿದು ಬಿದ್ದು ಸೇತುವೆಯ ಕೆಳಬಾಗದಲ್ಲಿದ್ದ ಕ್ರೇನ್ ಸಂಪೂರ್ಣವಾಗಿ ಜಕಮ್ ಆಗಿದೆ. ಅದೃಷ್ಟವಷಾತ್ ಯಾವುದೇ ಪ್ರಾಣಹಾನಿ ಸಂಬವಿಸಿಲ್ಲ. ಸಾರ್ವಜನಿಕರಿಗೆ ಅನುಕೂಲವಾಗಲಿ ಎಂದು ಅಘನಾಶಿನಿ ನದಿಗೆ ಅಡ್ಡಲಾಗಿ ನಿರ್ಮಿಸಿದ ಈ ಒಂದು ಬ್ರಿಡ್ಜ್ ನಿರ್ಮಾಣ ಹಂತದಲ್ಲಿಯೇ ಕುಸಿದು ಬಿದ್ದಿರುವುದು ಹಲವಾರು ಪ್ರಶ್ನೆಗಳಿಗುಯ ಕಾರಣವಾಗಿದೆ.
ಅವೈಜ್ಞಾನಿಕ ಹಾಗೂ ಕಳಪೆ ಕಾಮಗಾರಿಯಿಂದಲೇ ಈ ಘಟನೆ ಸಂಭವಿಸಿದೆ ಎಂಬುದು ಸ್ಥಳೀಯರ ಆರೋಪವಾಗಿದ್ದು, ಸಂಬoದ ಪಟ್ಟ ಗುತ್ತಿಗೆದಾರರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಜಿಲ್ಲಾಧಿಕಾರಿಗಳು, ಪಿ.ಡಬ್ಲುö್ಯ ಡಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕೂಡಲೇ ಗಮನಹರಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಘಟನೆ ಕುರಿತು ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ.
ವಿಸ್ಮಯ ನ್ಯೂಸ್, ಯೋಗೀಶ್ ಮಡಿವಾಳ, ಕುಮಟಾ