ಸೇತುವೆ ಕುಸಿಯಲು ನಿಜವಾದ ಕಾರಣ ಏನು? ಅಧಿಕಾರಿಗಳು ಹೇಳೋದು ಏನು?

ಕುಮಟಾ: ನಿರ್ಮಾಣ ಹಂತದಲ್ಲಿದ್ದ ಬಹು ಕೋಟಿ ವೆಚ್ಚದ ಸೇತುವೆಯೊಂದು ಮುರಿದು ಬಿದ್ದ ಘಟನೆ ಕುಮಟಾ ತಾಲೂಕಿನ ಹೆಗಡೆ ಹಾಗೂ ಮಿರ್ಜಾನ್ ಗ್ರಾಮದಲ್ಲಿ ಹಾದುಹೋದ ಅಘನಾಶಿನಿ ನದಿಯಲ್ಲಿ ನಡೆದಿತ್ತು. ಕುಮಟಾ ಮಾರ್ಗವಾಗಿ ಮಿರ್ಜಾನ್ ತೆರಲು 14 ಕಿ.ಮೀ ಕ್ರಮಿಸಬೇಕು. ಬದಲಾಗಿ ಕುಮಟಾದಿಂದ ಹೆಗಡೆ ತಾರಿಬಾಗಿಲು ಮಾರ್ಗವಾಗಿ ಮಿರ್ಜಾನ್ ತೆರಳಲು ಕೇವಲ 5 ರಿಂದ 6 ಕಿ.ಮೀ ಮಾತ್ರ ಕ್ರಮಿಸಿದರೆ ಸಾಕು.

ಈ ನಿಟ್ಟಿನಲ್ಲಿ ಹೆಗಡೆಯ ತಾರಿಬಾಗಿಲು ಹಾಗೂ ಮಿರ್ಜಾನ್ ತಾರಿಬಾಗಿಲಿನ ಮದ್ಯೆ ಹಾದುಹೋಗಿರುವ ಅನಾಶಿನಿ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಿಸುವ ಯೋಜನೆ ಕಾರ್ಯರೂಪಕ್ಕೆ ತಂದು ರಾಜ್ಯದಲ್ಲಿ ಬಿ.ಜೆ.ಪಿ ಸರ್ಕಾರ ಆಡಳಿದಲ್ಲಿದ್ದ ಸಂದರ್ಭದಲ್ಲಿಯೇ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಆದರೆ ಕಾಮಗಾರಿ ಶೇ 50 ರಷ್ಟು ಮುಗಿದಿರುವ ಸಂದರ್ಭದಲ್ಲಿ ಏಕಾಏಕಿ ನಿರ್ಮಾಣ ಹಂತದ ಸೇತುವ ಮುರಿದು ಬಿದ್ದಿದೆ ಎಂಬ ಸುದ್ಧಿ ಭಾರಿ ಸದ್ದು ಮಾಡುವ ಜೊತೆಗೆ ಸಾರ್ವಜನಿಕರಲ್ಲಿಯೂ ಆತಂಕ ಮೂಡಿಸಿದೆ.

ಸೇತುವೆ ಕುಸಿದು ಬಿದ್ದ ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯರು ಕಂಗಾಲಾಗಿದ್ದು, ನಿರ್ಮಾಣ ಹಂತದ ಸೇತುವೆ ಮುರಿದಿರುವುದಕ್ಕೆ ಅವೈಜ್ಞಾನಿಕ ಕಾಮಗಾರಿಯೇ ಮುಖ್ಯ ಕಾರಣ. ಸೇತುವೆಯು ಪೂರ್ಣಗೊಂಡ ಬಳಿಕ ಲಕ್ಷಾಂತರ ವಾಹನಗಳು ಓಡಾಡುತ್ತವೆ. ಹೀಗಿರುವಾಗ ನಿರ್ಮಾಣ ಹಂತದಲ್ಲಿಯೇ ಕುಸಿದಿರುವುದು ಅತ್ಯಂತ ಅಪಾಯಕಾರಿ. ಕೂಡಲೇ ಈ ಬಗ್ಗೆ ಸಂಬoದ ಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಕ್ರಮ ಕೈಗೊಳ್ಳಬೆಕೆಂಬ ಆಗ್ರಸಿದ್ದಾರೆ. ಸೇತುವೆ ಕುರಿದು ಬಿದ್ದಿರುವ ಪರಿಣಾಮ ಕಾಮಗಾರಿ ನಡೆಸುತ್ತಿದ್ದ ಗುತ್ತಿಗೆದಾರರಿಗೆ ಸಂಬoದಿಸಿದ ಒಂದು ಕ್ರೇನ್, 1 ಹಿಟಾಚಿ ಹಾಗೂ ಅಲ್ಲಿನ ಕಾಮಗಾರಿಯ ಸುಪ್ರವೈಸರ್‌ನ ಬೈಕ್ ಸಂಪೂರ್ಣ ನುಜ್ಜು ಗುಜ್ಜಾಗಿದೆ. ಅದೃಷ್ಟವಷಾತ್ ಯಾವುದೇ ಪ್ರಾಣ ಹಾನಿ ಸಂಬವಿಸಿಲ್ಲ.

ಇನ್ನು ಈ ಘಟನೆಗೆ ಸಂಬoದಿಸಿದoತೆ ಸ್ಥಳ ಪರಿಶೀಲನೆಗೆ ಬಂದಿದ್ದ ಪಿ.ಡಬ್ಲೂö್ಯ.ಡಿ ಇದರ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಮೋಹನ ನಾಯ್ಕ ಅವರು ನಮ್ಮ ವಿಸ್ಮಯ ಟಿ.ವಿ ಯೊಂದಿಗೆ ಮಾತನಾಡಿ, ಕ್ರೆನ್ ನಲ್ಲಿ ಕೆಲಸಮಾಡುವ ವೇಳೆ ಪಿಲ್ಲರ್‌ಗಳ ಮೇಲೆ 4 ದಿನಗಳ ಹಿಂದೆ ಇಟ್ಟಂತಹ ಆರ್.ಸಿ.ಸಿ ಗರ್ಡರ್‌ಗೆ ನಿನ್ನೆ ಕಾಮಗಾರಿಯ ವೇಳೆ ಇಟ್ಟಂತಹ ಗರ್ಡರ್ ತಗುಲಿ 3 ಗರ್ಡರ್ ಸಹ ಕೆಳಗೆ ಬಿದ್ದಿದೆ. ಕಾಮಗಾರಿಯ ವೇಳೆ ಆದ ಸಣ್ಣ ತಪ್ಪಿನಿಂದ ಈ ದುರ್ಘಟನೆ ಸಂಭವಿಸಿದೆ. ಕಾಮಗಾರಿಯ ಗುಣಮಟ್ಟದ ಪರೀಕ್ಷೆಯನ್ನು ನಮ್ಮ ಮೇಲಾಧಿಕಾರಿಗಳು ಮಾಡುತ್ತಾರೆ ಎಂಬಿತ್ಯಾದಗಳ ಕುರಿತಾಗಿ ಮಾಹಿತಿ ನೀಡಿದರು.

ಒಟ್ಟಿನಲ್ಲಿ ಈ ಘಟನೆಯು ಸ್ಥಳೀಯರಲ್ಲಿ ಭಯ ಮೂಡಿಸಿರುವುದಂತು ನಿಜ ಎನ್ನಬಹುದಾಗಿದೆ. ಕಾಮಗಾರಿ ಹಂತದ ಸೇತುವೆ ಕುಸಿತದ ಈ ಅವಘಡ ಭಾರಿ ಅನಾಹುವುವನ್ನೆ ತಂದೊಡ್ಡುವ ಸಾಧ್ಯಗಳಿತ್ತು. ಅದೃಷ್ಟವಷಾತ್ ಯಾವುದೇ ಪ್ರಾಣ ಹಾನಿ ಸಂಬವಿಸಿಲ್ಲ. ಆಗಿರುವ ಘಟನೆಯ ಬಗ್ಗೆ ಸೂಕ್ತ ಕ್ರಮ ಹಾಗೂ ಮುಂಬರುವ ದಿನಗಳಲ್ಲಿ ಇಂತಹ ಘಟನೆ ಮರುಕಳಿಸದೇ ಇರುವ ಬಗ್ಗೆ ಮುಂಜಾಗೃತೆ ವಹಿಸಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.

ವಿಸ್ಮಯ ನ್ಯೂಸ್, ಯೋಗೇಶ ಮಡಿವಾಳ.

Exit mobile version