ಗೋಕರ್ಣ ದೇಗುಲದ ಪೂಜಾಧಿಕಾರಕ್ಕೆ ಸಂಬoಧಿಸಿದoತೆ ಮಹತ್ವದ ತೀರ್ಪು ಪ್ರಕಟ

ರಾಮಚಂದ್ರಾಪುರಮಠ ಮಾಡಿದ್ದ ಮೇಲ್ಮನವಿ ಮಾನ್ಯ
ಜಿಲ್ಲಾ ನ್ಯಾಯಾಲಯದ ಆದೇಶವನ್ನು ವಜಾ

ಗೋಕರ್ಣ : ಪುರಾಣ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಗೋಕರ್ಣ ಮಹಾಬಲೇಶ್ವರ ದೇವಾಲಯದ ಪೂಜಾಧಿಕಾರಕ್ಕೆ ಸಂಬoಧಿಸಿದoತೆ ಉಚ್ಚನ್ಯಾಯಾಲಯವು ಮಹತ್ವದ ಆದೇಶವನ್ನು ಪ್ರಕಟಿಸಿದೆ. ಪೂಜಾಧಿಕಾರಕ್ಕೆ ಸಂಬoಧಿಸಿದoತೆ ಈ ಹಿಂದೆ ರಾಮಚಂದ್ರಾಪುರಮಠ ಮಾಡಿದ್ದ ಮೇಲ್ಮನವಿಯನ್ನು ಮಾನ್ಯಮಾಡಿದ್ದು, ಪ್ರತಿವಾದಿಗಳು ತಮಗೆ ಪೂಜಾಧಿಕಾರ ನೀಡುವಂತೆ ಮಾಡಿದ್ದ ಮನವಿಗಳನ್ನು ತಿರಸ್ಕರಿಸಿದೆ. ರಾಮಚಂದ್ರಾಪುರಮಠದ ಆಡಳಿತವು ರೂಪಿಸಿರುವ ನಿಯಮಗಳನ್ನು ಪಾಲಿಸಲು ಬದ್ಧರಾಗದ ತಮಗೆ ಪೂಜಾಧಿಕಾರ ಹಾಗೂ ದಕ್ಷಿಣೆ ಸ್ವೀಕರಿಸಲು ಅವಕಾಶವನ್ನು ಕಲ್ಪಿಸಬೇಕಾಗಿ 24 ಮಂದಿ ಅರ್ಜಿಯನ್ನು ಸಲ್ಲಿಸಿದ್ದರು.


ಆಡಳಿತದ ನಿಬಂಧನೆಗೆ ಒಳಪಡದೇ ಇದ್ದವರಿಗೆ ಪೂಜಾಧಿಕಾರವನ್ನು ನೀಡಿದರೆ ಸಮಸ್ಯೆ ಉಂಟಾಗಲಿದೆ. ಅಲ್ಲದೆ, ಈಗಾಗಲೇ ನಿಬಂಧನೆಗಳಿಗೆ ಒಳಪಟ್ಟು ಹಲವಾರು ವರ್ಷಗಳಿಂದ ಪೂಜೆ ಮಾಡಿಸುತ್ತಿರುವ ಅರ್ಚಕರುಗಳಿಗೆ ಅನ್ಯಾಯ ಮಾಡಿದಂತಾಗುತ್ತದೆ ಎಂದು ದೇವಾಲಯದ ಆಡಳಿತವು ಪ್ರತಿವಾದವನ್ನು ಮಂಡಿಸಿತ್ತು. ಉಚ್ಛನ್ಯಾಯಾಲಯವು ರಾಮಚಂದ್ರಾಪುರಮಠ ಹಾಗೂ ಉಪಾದಿವಂತ ಮಂಡಲ ಮಾಡಿದ್ದ ಮನವಿಯನ್ನು ಪುರಸ್ಕರಿಸಿದ್ದು, ಜಿಲ್ಲಾ ನ್ಯಾಯಾಲಯದ ಆದೇಶವನ್ನು ವಜಾಗೊಳಿಸಿದೆ.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Exit mobile version