ವಿಶ್ವೇಶ್ವರ ಹೆಗಡೆ ಕಾಗೇರಿ ಸಂಸದರಾಗಲಿ ಎಂಬ ಸಂಕಲ್ಪ: ಕರಿಕಾನ ಪರಮೇಶ್ವರಿ ದೇವಿಯ ಸನ್ನಿದಿಯಲ್ಲಿ ಚಂಡಿಕಾ ಹವನ

ಹೊನ್ನಾವರ: ಕೆನರಾ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ವಿಶ್ವೇಶ್ವರ ಹೆಗಡೆ ಕಾಗೇರಿ ಸಂಸದರಾಗಲಿ ಎಂದು ಪ್ರಾರ್ಥಿಸಿ ಹೊನ್ನಾವರ ತಾಲೂಕಿನ ಪುರಾಣ ಪ್ರಸಿದ್ದ ದೇವಿ ಕ್ಷೇತ್ರದಲ್ಲಿ ಒಂದಾದ ಶ್ರೀ ಕರಿಕಾನ ಪರಮೇಶ್ವರಿ ದೇವಿಯ ಸನ್ನಿದಿಯಲ್ಲಿ ಶ್ರೀಕುಮಾರ ಸಮೋಹ ಸಂಸ್ಥೆಯ ಅಧ್ಯಕ್ಷ ವೆಂಕ್ರಟಮಣ ಹೆಗಡೆ ಕವಲಕ್ಕಿ ಇವರ ಮುಂದಾಳತ್ವದಲ್ಲಿ ಪಕ್ಷದ ಪ್ರಮುಖರು, ಕಾರ್ಯಕರ್ತರು ಚಂಡಿಕಾ ಹವನ ನೇರವೇರಿಸಿದರು.

ಕೆನರಾ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ವಿಶ್ವೇಶ್ವರ ಹೆಗಡೆ ಕಾಗೇರಿ ಸಂಸದರಾಗಲಿ. ದೇಶದ ಪ್ರಧಾನಿಯಾಗಿರುವ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಲಿ ಬಿಜೆಪಿ ಬಹುಮತ ಪಡೆಯುವ ಅಧಿಕಾರದ ಚುಕ್ಕಾಣಿ ಹಿಡಿಯಲಿ ಎಂದು ಸಂಕಲ್ಪಿಸಿ, ಚಂಡಿಕಾ ಹವನ ನಡೆಯಿತು. ಈ ಸಂದರ್ಭದಲ್ಲಿ ಶಾಸಕ ದಿನಕರ ಶೆಟ್ಟಿ ಮಾತನಾಡಿ ಸರಳತೆಯಿಂದ ಕೂಡಿದ ಅಪರೂಪದ ರಾಜಕಾರಣಿಯಾದ ಕಾಗೇರಿಯವರು ನಮ್ಮ ಕ್ಷೇತ್ರದ ಸಂಸದ ಸ್ಥಾನಕ್ಕೆ ಪಕ್ಷದಿಂದ ಸ್ಪರ್ಧೆ ಮಾಡುತ್ತಿದ್ದಾರೆ. ಇವರು ಪ್ರಚಂಡ ಬಹುಮತದಿಂದ ಗೆಲುವು ಸಾಧಿಸಲಿದ್ದಾರೆ. ಅವರ ಅಭಿಮಾನಿಗಳು ಈ ದಿನ ಚಂಡಿ ಹವನದ ಮೂಲಕ ವಿಶೇಷವಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ ಎಂದರು.

ಚAಡಿಕಾ ಹವನದ ಮುಂದಾಳತ್ವ ವಹಿಸಿದ್ದ ವೆಂಕ್ರಟಮಣ ಹೆಗಡೆ ಕವಲಕ್ಕಿ ಮಾತನಾಡಿ ಕಾಗೇರಿಯವರು ಈ ಜಿಲ್ಲೆಯಿಂದ ಸಂಸತ್ ಸದಸ್ಯ ಸ್ಥಾನಕ್ಕೆ ಸ್ಪರ್ಧೆ ಮಾಡುತ್ತಿದ್ದು ಅವರ ಗೆಲುವಿಗಾಗಿ ವಿಶೇಷ ಪೂಜೆ ಸಲ್ಲಿಸಲಾಗಿದೆ. ಏಪ್ರಿಲ್ 17 ರಂದು ತಾಲೂಕಿಗೆ ಪ್ರಚಾರಕ್ಕೆ ಆಗಮಿಸುತ್ತಿದ್ದು, ಈ ವೇಳೆ ಪ್ರಸಾದ ವಿತರಿಸಿ ಪ್ರಚಾರ ನಡೆಸಲಿದ್ದಾರೆ ಎಂದರು. ಜಿ.ಜಿ.ಶಂಕರ ಮಾತನಾಡಿ ಬಿಜೆಪಿ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದ್ದು, 400ಕ್ಕೂ ಹೆಚ್ಚು ಸ್ಥಾನದಲ್ಲಿ ಗೆಲ್ಲುವ ಸಾಧಿಸುವ ಮೂಲಕ ದಿಗ್ವಿಜಯ ಬಾರಿಸಲಿದೆ. ದೇಶದಲ್ಲಿ ಸನಾತನ ಆಚರಣೆಗೆ ಬಿಜೆಪಿ ಒತ್ತು ನೀಡಿದೆ. ಬಹುವರ್ಷದ ಕನಸಾಗಿದ್ದ ರಾಮಮಂದಿರ ಲೋಕಾರ್ಪಣೆಯಾಗಿದೆ ಇನ್ನು ಹಲವು ಕಾರ್ಯವಾಗಬೇಕಿದ್ದು, ಈ ಬಾರಿ ಅದು ನೇರವೇರಲಿದೆ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಹೊನ್ನಾವರ ಮಂಡಲಧ್ಯಕ್ಷ ಮಂಜುನಾಥ ನಾಯ್ಕ, ಮುಖಂಡರಾದ ಶಿವಾನಂದ ಹೆಗಡೆ ಕಡತೋಕಾ, ಜಿ.ಜಿ.ಶಂಕರ, ಯೋಗಿಶ ಮೇಸ್ತ, ಸುರೇಶ ಹೊನ್ನಾವರ, ಆರ್.ಜಿ.ಹೆಗಡೆ, ಜಿ.ಜಿ.ಭಟ್, ಆರ್.ಎಮ್.ಹೆಗಡೆ , ಎಂ.ಎಸ್.ಹೆಗಡೆ ಕಣ್ಣಿ, ನಾರಾಯಣ ಹೆಗಡೆ, ಸೂರ್ಯನಾರಾಯಣ ಹೆಗಡೆ, ನಾಗೇಶ ನಾಯ್ಕ, ಸುಭಾಸ ಗೌಡ, ವಿ.ಎನ್.ಹೆಗಡೆ, ಜಿ.ವಿ.ಹೆಗಡೆ, ಶಂಭು ಹೆಗಡೆ ಸಂತಾನ್ ಮತ್ತಿತರರು ಇದ್ದರು

ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ

Exit mobile version