ಗೋವುಗಳನ್ನು ಕದಿಯಲು ಬಂದ ಆರೋಪಿಗಳನ್ನು ಸೆರೆಹಿಡಿದು ಪೊಲೀಸರಿಗೊಪ್ಪಿಸಿದ ಸಾರ್ವಜನಿಕರು

ಹೊನ್ನಾವರ: ಕೊಟ್ಟಿಗೆಯಲ್ಲಿದ್ದ ಗೋವುಗಳನ್ನು ಕದಿಯಲು ಬಂದ ಇಬ್ಬರು ಆರೋಪಿಗಳನ್ನು ಸ್ಥಳೀಯರು ಸೆರೆಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ಹೊನ್ನಾವರದಲ್ಲಿ ನಡೆದಿದೆ. ತಾಲೂಕಿನ ಹಿರೇಬೈಲ್ ಬಟ್ಟಲಗದ್ದೆ ನಿವಾಸಿ ಚಂದ್ರಶೇಖರ್ ಗೋವಿಂದ್ ನಾಯ್ಕ ಅವರಿಗೆ ಸೇರಿದ ಒಂದು ಆಕಳು,ಒಂದು ಎತ್ತನ್ನು ರಾತ್ರಿ ಹತ್ತು ಗಂಟೆ ಸುಮಾರಿಗೆ ಖದೀಮರು ಬೊಲೆರೋ ವಾಹನದಲ್ಲಿ ಆಕಳನ್ನು ಹತ್ತಿಸಿ ಕಳ್ಳತನ ಮಾಡಲು ಯತ್ನಿಸಿದ್ದರು. ಈ ವೇಳೆ ಚಂದ್ರಶೇಖರ್ ಅವರು ಕಳ್ಳರ ಕೃತ್ಯ ಕಂಡು,ಮಕ್ಕಳಿಗು ತಿಳಿಸಿದ್ದಾರೆ. ಕಳ್ಳರನ್ನು ತಡೆಯಲು ಮುಂದಾದಾಗ ಪ್ರತಿರೋಧ ಒಡ್ಡಿ ಆಕಳನ್ನು ಸ್ಥಳದಲ್ಲಿಯೇ ಬಿಟ್ಟು ಎಸ್ಕೇಪ್ ಆಗಲು ಪ್ರಯತ್ನಿಸಿದ್ದಾರೆ.

ಇಲ್ಲಿದೆ ಉದ್ಯೋಗಾವಕಾಶ: ಇದನ್ನೂ ಓದಿ: RPF Recruitment 2024: 4208 ಹುದ್ದೆಗಳಿಗೆ ನೇಮಕಾತಿ: SSLC ಆದವರು Apply ಮಾಡಿ

ಈ ವೇಳೆ ಚಂದ್ರಶೇಖರ್ ಕುಟುಂಬಸ್ಥರು ಜೋರಾಗಿ ಕೂಗಿಕೊಂಡು ಅವರತ್ತ ಓಡಿದ್ದು,ಅಕ್ಕಪಕ್ಕದವರಿಗೆ ತಿಳಿದಿದೆ. ಸ್ಥಳೀಯರಾದ ಸುರೇಶ್ ಮಾಬ್ಲೇಶ್ವರ ನಾಯ್ಕ,ವಿಕಾಸ ಮಾರುತಿ ನಾಯ್ಕ ಆರೋಪಿಗಳ ಬೆನ್ನಟ್ಟಿದ್ದಾರೆ. ಈ ವೇಳೆ ಖದೀಮರು ಆಯತಪ್ಪಿ ನೆಲಕ್ಕೆ ಬಿದ್ದಿದ್ದಾರೆ. ಗೋಕಳ್ಳರನನ್ನು ಸೆರೆಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ.ಆರೋಪಿಗಳಾದ ಸಿದ್ದಾಪುರ ಹಲಸಗಾರದ ನಿವಾಸಿ ಗೌರೀಶ ಮಂಜುನಾಥನಾಯ್ಕ,ಕುಮಟಾ ಉಳ್ಳುರುಮಠದ ನಿವಾಸಿ ಲಕ್ಷ್ಮಣ ಗೋಯಾ ಮರಾಠಿ ಎಂದು ಗುರುತಿಸಲಾಗಿದೆ. ಈ ಕುರಿತು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ

Exit mobile version