ಚಿನ್ನ ಉತ್ಪಾದನೆಯಲ್ಲಿ ಅಗ್ರಸ್ಥಾನದಲ್ಲಿರುವ ಹಟ್ಟಿ ಚಿನ್ನದ ಗಣಿಯಲ್ಲಿ ( HGML Recruitment 2024) ಒಟ್ಟು 168 ಹುದ್ದೆಗಳು ಖಾಲಿಯಿದ್ದು, ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಐಟಿಐ, ಡಿಪ್ಲೋಮಾ ಮತ್ತು ಪದವಿ ತೇರ್ಗಡೆಯಾದವರು ಅರ್ಜಿ ಸಲ್ಲಿಸಬಹುದಾಗಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗಳಿಗೆ ಅನುಗುಣವಾಗಿ 20,920 ರೂಪಾಯಿಯಿಂದ 48,020 ರೂಪಾಯಿ ಮಾಸಿಕ ವೇತನ ( Salary ) ನಿಗದಿಯಾಗಿದೆ.
( HGML Recruitment 2024 ) ಅಸಿಸ್ಟಂಟ್ ಫಾರ್‌ಮನ್, ಐಟಿಐ ಫಿಟ್ಟರ್, ಲ್ಯಾಬ್ ಅಸಿಸ್ಟಂಟ್ ಸೇರಿದಂತೆ ಸುಮಾರು 168 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಮೇ 3, 2024 ಕೊನೆಯದಿನವಾಗಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಗರಿಷ್ಠ ವಯಸ್ಸು 35 ವರ್ಷ ಎಂದು ಅಧಿಸೂಚನೆಯಲ್ಲಿ ಮಾಹಿತಿ ನೀಡಲಾಗಿದೆ. ಕಂಪ್ಯೂಟರ್ ಆಧಾರಿತ ಪರೀಕ್ಷೆ ಹಾಗು ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
ಇಲಾಖೆ | Hutti Gold Mines Company Limited |
ಒಟ್ಟು ಹುದ್ದೆಗಳು | 168 |
ವಿದ್ಯಾರ್ಹತೆ | ಐಟಿಐ, ಡಿಪ್ಲೋಮಾ ಮತ್ತು ಪದವಿ |
ವೇತನ | 20,920 ರೂಪಾಯಿಯಿಂದ 48,020 ರೂಪಾಯಿ |
( Hutti Gold Mines Company Limited) ಅಸಿಸ್ಟೆಂಟ್ ಫಾರ್‌ಮನ್ (ಗಣಿ) 16 ಹುದ್ದೆ, ಅಸಿಸ್ಟೆಂಟ್ ಫಾರ್‌ಮನ್ (ಮೆಟಲರ್ಜಿ)- 7 ಹುದ್ದೆಗಳಿದ್ದು, ಇವುಗಳಿಗೆ ಡಿಪ್ಲೋಮಾ ವಿದ್ಯಾರ್ಹತೆ ನಿಗದಿಯಾಗಿದೆ. ಲ್ಯಾಬ್ ಅಸಿಸ್ಟೆಂಟ್- 1 ಹುದ್ದೆ ಮತ್ತು ಅಸಿಸ್ಟೆಂಟ್ ಫಾರ್‌ಮನ್ (ಜಿಯಾಲಜಿ)- 3 ಹುದ್ದೆ ಖಾಲಿಯಿದ್ದು, ಬಿಎಸ್‌ಇ ಆದವರು ಅರ್ಜಿ ಸಲ್ಲಿಸಬಹುದಾಗಿದೆ.
ಐಟಿಐ ಫಿಟ್ಟರ್ (ಗಣಿಗಾರಿಕೆ)- 56 ಹುದ್ದೆ, ಐಟಿಐ ಫಿಟ್ಟರ್ (ಸರ್ವೆ)- 2 ಹುದ್ದೆ, ಐಟಿಐ ಫಿಟ್ಟರ್ (ಮೆಟಲ್)- 26 ಹುದ್ದೆಗಳಿದ್ದು, ಐಟಿಐ ಎಲೆಕ್ಟ್ರಿಕಲ್- 4 ಹುದ್ದೆಗಳಿದ್ದು, ಐಟಿಐ ಆದವರು ಅರ್ಜಿ ಸಲ್ಲಿಸಬಹುದಾಗಿದೆ. ಸೆಕ್ಯುರಿಟಿ ಗಾರ್ಡ್- 24 ಹುದ್ದೆಗೆ ನೇಮಕಾತಿ ನಡೆಯಲಿದ್ದು, ದ್ವಿತೀಯ ಪಿಯುಸಿ ಆದವರು ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ | ಮೇ 3, 2024 |
ಅಧಿಸೂಚನೆ 1 | ಇಲ್ಲಿ ಕ್ಲಿಕ್ ಮಾಡಿ |
ಅಧಿಸೂಚನೆ 2 | ಇಲ್ಲಿ ಕ್ಲಿಕ್ ಮಾಡಿ |
ಅರ್ಜಿ ಸಲ್ಲಿಸುವ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
ಸಾಮಾನ್ಯ ಅಭ್ಯರ್ಥಿಗಳು 600 ರೂಪಾಯಿ, ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳು 300 ರೂಪಾಯಿ ಮತ್ತು ಎಸ್‌ಸಿ / ಎಸ್‌ಟಿ / ಮಾಜಿ ಸೈನಿಕರು / ಪಿಡಬ್ಲ್ಯುಡಿ ಅಭ್ಯರ್ಥಿಗಳು 100 ರೂಪಾಯಿಯನ್ನು ಆನ್‌ಲೈನ್ ಮೂಲಕ ಪಾವತಿಸಿ, ಅರ್ಜಿ ಸಲ್ಲಿಸಬಹುದು.
ಇನ್ನು ಹೆಚ್ಚಿನ ಉದ್ಯೋಗಾವಕಾಶದ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಸಂದೇಶ್ ಎನ್ ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್