ಶಿರಸಿ: ಜೇನುದಾಳಿ ನಡೆಸಿದ ಪರಿಣಾಮ ಶಾಸಕ ಭೀಮಣ್ಣ ನಾಯ್ಕ ಗಾಯಗೊಂಡು ಆಸ್ಪತ್ರೆ ಸೇರಿದ ಘಟನೆ ನಡೆದಿದೆ. ಬರ ಪರಿಸ್ಥಿತಿ ಸಂಬoಧ ಕೆಂಗ್ರೆ ಹೊಳೆಯ ನೀರಿನ ಮಟ್ಟ ವೀಕ್ಷಣೆಗೆ ಹೋದ ಸ್ಥಳೀಯ ಶಾಸಕ ಭೀಮಣ್ಣ ನಾಯ್ಕ್ ಮತ್ತು ನಗರಸಭಾ ಪೌರಾಯುಕ್ತ ಕಾಂತರಾಜ ಸೇರಿದಂತೆ ನಾಲ್ವರ ಮೇಲೆ ಜೇನು ನೊಣಗಳು ಏಕಾಏಕಿ ದಾಳಿ ನಡೆಸಿವೆ. ಚಿಕಿತ್ಸೆಗಾಗಿ ಟಿ ಎಸ್ ಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಯಾವುದೇ ಹೆಚ್ಚಿನ ಅಪಾಯ ಆಗಿಲ್ಲ ಎಂದು ಮೂಲಗಳಿಂದ ತಿಳಿದು ಬಂದಿದೆ. ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಾಸಕ ಭೀಮಣ್ಣ ನಾಯ್ಕರು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು ಪ್ರಾಥಮಿಕ ಚಿಕಿತ್ಸೆ ಬಳಿಕ ಅವರು ಮನೆಗೆ ತೆರಳಲಿದ್ದಾರೆಂದು ನಗರಸಭೆ ಸದಸ್ಯ ಪ್ರದೀಪ ಶೆಟ್ಟಿ ತಿಳಿಸಿದ್ದಾರೆ. ಘಟನೆ ಕುರಿತು ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ.
ವಿಸ್ಮಯ ನ್ಯೂಸ್, ಸಿದ್ದಾಪುರ