ಎಲ್ಲಾ ಸಾವಿನ ಪ್ರಕರಣದಲ್ಲಿ ಗಂಟಲು ದ್ರವದ ಪರೀಕ್ಷೆಯ ಅವಶ್ಯಕತೆ ಇದ್ಯಾ?
ಸಹಾಯಕ ಆಯುಕ್ತರು ಹೇಳಿದ್ದೇನು?
ಭಟ್ಕಳ : ಕೋವಿಡ್- 19ನ ಬಗೆಗಿನ ಸರಕಾರದ ಮಾರ್ಗಸೂಚಿಗಳ ಬಗ್ಗೆ ಪತ್ರಕರ್ತರೊಂದಿಗೆ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಹಾಯಕ ಆಯುಕ್ತರು ಒಬ್ಬ ಕೋವಿಡ್ ಸೋಂಕಿತನಿಗೆ ಸರಕಾರದಿಂದ ಯಾವುದೇ ನಿಗದಿತ ಹಣ ಬಿಡುಗಡೆಯಾಗುವ ವ್ಯವಸ್ಥೆ ಇಲ್ಲವೆಂದು ತಿಳಿಸಿದ್ದಾರೆ. ಸರಕಾರದಿಂದ ಕೋವಿಡ್ ಸೋಂಕಿತನಿಗೆ ನಿಗದಿತ ಹಣ ಬಿಡುಗಡೆ ಆಗಿದೆ, ಅದರಂತೆ ಆಯಾ ತಾಲೂಕಾಡಳಿತವೂ ಗಂಟಲ ದ್ರವ ಪರೀಕ್ಷೆ ಮಾಡಿಸಿ ಪಾಸಿಟಿವ್ ಪ್ರಮಾಣ ತೋರಿಸುತ್ತಿದೆ ಎಂಬ ಬಗ್ಗೆ ಜನರಲ್ಲಿ ಅಭಿಪ್ರಾಯ ಇದ್ದಿರುವ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಹಾಯಕ ಆಯುಕ್ತ ಭರತ್ ಎಸ್. ಪಾಸಿಟಿವ್ ಪ್ರಕರಣ ಜಾಸ್ತಿ ಆಗಿದ್ದಲ್ಲಿ ಜಿಲ್ಲಾಡಳಿತ ನಮಗೆ ಯಾಕೆ ಪ್ರಕರಣ ಏರಿಕೆ ಆಗಿದೆ? ನಿಯಂತ್ರಣ ಯಾಕೆ ಆಸಾಧ್ಯ ಎಂಬ ಬಗ್ಗೆ ಪ್ರಶ್ನಿಸಿ ಎಚ್ಚರಿಸಲಿದ್ದು, ಎಷ್ಟೇ ಜನರಿಗೆ ಪಾಸಿಟಿವ್ ಬಂದಿದ್ದವರು ಅವರನ್ನು ಆರೈಕೆ ಮಾಡಿ ಚಿಕಿತ್ಸೆ ನೀಡುವಷ್ಟು ಸರಕಾರದಲ್ಲಿ ಹಣವಿದೆ. ಹಾಗೂ ಭಟ್ಕಳದ ಸರಕಾರಿ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿತನ ಚಿಕಿತ್ಸೆಗೆ ಅಗತ್ಯ ಪರಿಕರಗಳು, ಐ.ಸಿ.ಯು., ವೆಂಟಿಲೇಟರ್ ಸಹಿತ ಎಲ್ಲಾ ವ್ಯವಸ್ಥೆ ಇದೆ ಎಂದು ತಿಳಿಸಿದರು.
ಶಾಸಕರಿಗೆ ಸರಕಾರಿ ಆಸ್ಪತ್ರೆಯಲ್ಲಿ ಸಿಗದ ಚಿಕಿತ್ಸೆ ಜನಸಾಮಾನ್ಯರಿಗೆ ಹೇಗೆ?
ಈ ಪ್ರಶ್ನೆಗೆ ಉತ್ತರಿಸಿದ ಸಹಾಯಕ ಆಯುಕ್ತ ಎಸ್.ಭರತ್ ಇದು ಅವರವರ ವೈಯಕ್ತಿಕ ನಿರ್ಧಾರದ ಮೇಲೆ ಇರಲಿದೆ. ಆದರೆ ಈ ಬಗ್ಗೆ ಸಾಮಾನ್ಯವಾಗಿ ಹೇಳಬೇಕಾದರೆ ಯಾವುದೇ ಕಾಯಿಲೆ ಅಥವಾ ಕೋವಿಡ ವಿಚಾರದಲ್ಲಿ ಅವರಿಗೆ ಬೇಕಾದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳಬಹುದಾಗಿದೆ ಹಾಗು ಮನೆಯಲ್ಲಿ ಹೋಮ್ ಐಸೋಲೇಶನನಲ್ಲಿಯು ಸಹ ಇರಬಹುದಾದ ಬಗ್ಗೆ ಸರಕಾರದ ಮಾರ್ಗಸೂಚಿ ಆದೇಶ ನೀಡಿದೆ. ಭಟ್ಕಳ ಸರಕಾರಿ ಆಸ್ಪತ್ರೆಯಲ್ಲಿ ಎಲ್ಲಾ ವ್ಯವಸ್ಥೆ ಇದ್ದು ಇನ್ನು ಏನಾದರು ಬೇರೆ ವ್ಯವಸ್ಥೆ ಅಥವಾ ಚಿಕಿತ್ಸೆ ಅವಶ್ಯಕತೆ ಇದ್ದಲ್ಲಿ ಕಾರವಾರದ ಸರಕಾರಿ ಆಸ್ಪತ್ರೆಗೆ ರವಾನಿಸಲಿದ್ದೇವೆ ಎಂದು ತಿಳಿಸಿದರು.
ಎಲ್ಲಾ ಸಾವಿಗೆ ಗಂಟಲು ದ್ರವ ಅವಶ್ಯಕತೆ ಇಲ್ಲ:
ಭಟ್ಕಳದಲ್ಲಿ ಸದ್ಯ 12 ಸಾವಿನ ಪ್ರಕರಣಗಳು ಕೋವಿಡನಿಂದಾಗಿದ್ದು, ಕಳೆದ ಒಂದು ವಾರದ ಹಿಂದೆ 4 ಮಂದಿ ಮೃತಪಟ್ಟಿದ್ದಾರೆ. ಯಾವುದೇ ರೋಗ ಲಕ್ಷಣ ಇಲ್ಲದೇ ಮ್ರತಪಟ್ಟಿದ್ದರೆ ಕೋವಿಡ್ ಪರೀಕ್ಷೆ ಮಾಡಿಸುವ ಅವಶ್ಯಕತೆ ಇಲ್ಲ. ಜ್ವರ ಇದ್ದು ಮ್ರತಪಟ್ಟಿದ್ದಲ್ಲಿ ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ಮಾಡಿ ಸರಕಾರದ ಆದೇಶದಂತೆ ಅಂತ್ಯಕ್ರಿಯೆ ಮಾಡಬಹುದು .ಅದು ಸಹ ಪಿಪಿಇ ಕಿಟ್ ಜೊತೆಗೆ ನಿಗದಿತ ಕುಟುಂಬಸ್ಥರಲ್ಲಿ ಅಂತ್ಯಕ್ರಿಯೆ ಮಾಡಬಹುದು. ಇಲ್ಲವಾದಲ್ಲಿ ತಾಲುಕಾಢಳಿತ ಅಂತ್ಯಕ್ರಿಯೆ ಮಾಡಲಿದೆ ಎಂದರು.
ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ
ನಿಮ್ಮ ಬಾಳಸಂಗಾತಿ ಆಯ್ಕೆಗೊಂದು ಸುವರ್ಣಾವಕಾಶ
ಮದುವೆಯಾಗಲು ಹುಡುಗಿ ಸಿಕ್ಕಿಲ್ಲ ಎಂಬ ಚಿಂತೆ ಬಿಡಿ
ಈ ಕೂಡಲೇ ನಮ್ಮನ್ನು ಸಂಪರ್ಕಿಸಿ
ದಿ ಭದ್ರಾ ವಧು-ವರರ ಮಾಹಿತಿ ಕೇಂದ್ರ
ಸರ್ವಧರ್ಮ ಜನರಿಗೆ ಉತ್ತಮ ಸಂಬoಧ ತೋರಿಸಲಾಗುವುದು
ಎರಡನೇಯ ಸಂಬoಧವನ್ನು ತೋರಿಸಲಾಗುವುದು
ಮೊಬೈಲ್: 7848833568