ಯಲ್ಲಾಪುರ: ಕಾಡಿನಿಂದ ನಾಡಿಗೆ ಆಹಾರವನ್ನರಿಸಿ ಬಂದಿದ್ದ ಜಿಂಕೆಯೊoದು ಊರಿನಲ್ಲಿ ಸಾಕಿದ ನಾಯಿಗಳ ದಾಳಿಗೆ ತುತ್ತಾಗಿ ಗ್ರಾಮಸ್ಥರಿಂದ ಬಚಾವಾದ ಘಟನೆ ತಾಲೂಕಿನ ಕುಂದರಗಿ ಗ್ರಾಮ ಪಂಚಾಯತ ವ್ಯಾಪ್ತಿಯ ಭರತನಹಳ್ಳಿಯಲ್ಲಿ ನಡೆದಿದೆ. ಮೈ ಮೇಲೆ ಚುಕ್ಕೆ ಹಾಗೂ ಕೋಡು ಹೊಂದಿರುವ ಜಿಂಕೆಯು ಬೆಳಗಿನ ಜಾವ ಭರತನಹಳ್ಳಿಗೆ ಆಹಾರವನ್ನರಸಿ ಬಂದಿದ್ದು, ಇದೇ ವೇಳೆ ಸಾಕು ನಾಯಿಗಳು ಅದನ್ನು ಕಂಡು ಬೆನ್ನತ್ತಿ ತೀವ್ರವಾಗಿ ಗಾಯಪಡಿಸಿದೆ.
ಈ ಕುರಿತು ಕುಂದರಗಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಲಾಗಿತ್ತು. ಬಳಿಕ ಸ್ಥಳಕ್ಕಾಗಮಿಸಿ ಅಧಿಕಾರಿಗಳು, ಗ್ರಾಮಸ್ಥರ ಸಹಕಾರದೊಂದಿಗೆ ಅಪಾಯಕ್ಕೊಳಗಾಗಿದ್ದ ಜಿಂಕೆಯನ್ನು ಪಾರುಮಾಡುವ ದಿಸೆಯಲ್ಲಿ ಮಂಚಿಕೇರಿ ಪಶು ಆಸ್ಪತ್ರೆಗೆ ಜಿಂಕೆಯನ್ನು ಕರೆದೊಯ್ದು, ಅಗತ್ಯ ಚಿಕಿತ್ಸೆ ಕೊಡಿಸಿ, ನಂತರ ಜಿಂಕೆಯನ್ನು ಕಾಡಿಗೆ ಬಿಡಲಾಗಿದೆ.
ವಿಸ್ಮಯ ನ್ಯೂಸ್, ಯಲ್ಲಾಪುರ