Follow Us On

WhatsApp Group
Focus News
Trending

ಹೊನ್ನಾವರ ಮೂಲದ ಬ್ಯಾಂಕ್ ಮ್ಯಾನೇಜರ್ ಮೇಲೆ ಮಾರಣಾಂತಿಕ ಹಲ್ಲೆ: ಕಾರಣ ನಿಗೂಢ

ಹೊನ್ನಾವರ: ಬಾಗಲಕೋಟದಲ್ಲಿ ಕೆವಿಜಿ ಬ್ಯಾಂಕ್ ರೀಜನಲ್ ಮ್ಯಾನೇಜರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಹೊನ್ನಾವರ ಮಂಕಿ ಮೂಲದ ದೇವಿದಾಸ ಚಿಕ್ಕರಮನೆ ಹಾಗು ಅವರ ಪತ್ನಿ ಸ್ವಾತಿ ಚಿಕ್ಕರಮನೆ ಇವರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ಚಿಕಿತ್ಸೆಯ ನಂತರ ದೇವಿದಾಸ ಚಿಕ್ಕರಮನೆಯವರಿಗೆ ಪ್ರಜ್ಞೆ ಬಂದಿದೆ. ಆದರೆ, ಅವರ ಪತ್ನಿಗೆ ಪ್ರಜ್ಞೆ ಬಂದಿಲ್ಲ. ದೇವಿದಾಸ ಚಿಕ್ಕರಮನೆ ಇವರು ಹೊನ್ನಾವರ ಸಹಿತ ಹಲವು ಕಡೆ ಕೆವಿಜಿ ಬ್ಯಾಂಕ್ನಲ್ಲಿ ಮ್ಯಾನೇಜರ್ ಆಗಿ ಕೆಲಸ ನಿರ್ವಹಿಸಿದ್ದರು. ಯಾವ ಕಾರಣದಿಂದ ಈ ಹಲ್ಲೆ ನಡೆದಿದೆ ಎಂದು ಇನ್ನೂ ತಿಳಿದುಬಂದಿಲ್ಲ.

ಅವರ ಭಾವ ಡಾ. ರಾಜೇಶ ಕಿಣಿ ದಂಪತಿಗಳು ಫೋನ್ ಮಾಡಿದಾಗ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಈ ವೇಳೆ ಅಕ್ಕಪಕ್ಕದವರನ್ನು ವಿಚಾರಿಸಿ ಅವರು ಸ್ಥಳಕ್ಕೆ ಹೋಗಿ ನೋಡಿದಾಗ ಪ್ರಜ್ಞಾಹೀನ ಸ್ಥಿತಿಯಲ್ಲಿ ಚಿಕ್ಕರಮನೆ ದಂಪತಿಗಳು ಕಂಡುಬoದಿದ್ದರು. ಬಳಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Back to top button