Big News
Trending

ಹೋಂ ಸ್ಟೇ, ರೆಸಾರ್ಟ್, ಹೊಟೇಲ್ ಗೆ ಮಾತ್ರ ಅನುಮತಿ: ಸಾಹಸ ಕ್ರೀಡೆಗಳಿಗೆ ಅನುಮತಿ ಇಲ್ಲ: ಕಾನೂನು ಕ್ರಮದ ಎಚ್ಚರಿಕೆ

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಹೋಂ ಸ್ಟೇ, ರೆಸಾರ್ಟ್, ಹೊಟೇಲ್ ನಡೆಸಲು ಮಾತ್ರ ಅನುಮತಿ ನೀಡಲಾಗಿದೆ. ಇತರ ಸಾಹಸ ಕ್ರೀಡೆಗಳಿಗೆ ಅನುಮತಿ ಇಲ್ಲ ಎಂದು ಪ್ರವಾಸೋಧ್ಯಮ ಇಲಾಖೆಯ ಉಪ ನಿರ್ದೇಶಕರು ಸೂಚಿಸಿದ್ದಾರೆ. ಹೋಂ ಸ್ಟೇ ಹಾಗೂ ರೆಸಾರ್ಟ್ಗಳು ಸಾಹಸ ಕ್ರೀಡೆ ನಡೆಸುತ್ತಿದ್ದಲ್ಲಿ ಅದಕ್ಕೆ ಪೂರಕವಾದ ದಾಖಲೆ ಸಲ್ಲಿಸಿ ಮುಂದಿನ 15 ದಿನಗಳ ಒಳಗೆ ಅನುಮತಿ ಪಡೆಯಬೆಕೇಂದು ಎಚ್ಚರಿಸಿದ್ದಾರೆ.

ಜಿಪ್ ಲೈನ್, ಬೋಟಿಂಗ್, ಜಾರ್ಬಿಂಗ್, ಕಯಾಕಿಂಗ್, ಸ್ವಿಮ್ಮಿಂಗ್, ರೋಪ್ ಗೇಮ್ಸ್ , ಆರ್ಚರಿ, ಡಾರ್ಟ್ ಬೋರ್ಡ್, ಇತ್ಯಾದಿ ಸಾಹಸ ಚಟುವಟಿಕೆಗಳನ್ನು ನಡೆಸುತ್ತಿರುವ ಮಾಹಿತಿ ಇದ್ದು, ರಾಮನಗರ ಜಿಲ್ಲೆಯಲ್ಲಿ ಹೋಂ ಸ್ಟೇ ಒಂದರಲಿ ಜಿಪ್ ಲೈನ್ ತುಂಡಾಗಿ ಮಹಿಳೆ ಸಾವನ್ನಪ್ಪಿದ ಘಟನೆ ನಡೆಇದೆ. ಇಂತಹ ಅವಘಡ ತಡೆಯಲು ಕ್ರಮ ಕೈಗೊಳ್ಳಲಾಗುತ್ತದೆ.

ಅನೇಕ ಮಾಲೀಕರ ಬಳಿ ಪ್ರವಾಸೋಧ್ಯಮ ಇಲಾಖೆಯ ನಿಯಮಾವಳಿಗಳ ಅನುಸಾರ ನೋಂದಣಿ ಮಾಡಲು ದಾಖಲೆಗಳು ಲಭ್ಯವಿಲ್ಲದೇ ಪಂಚಾಯತಿಯಿoದ ನಿರಾಕ್ಷೇಪಣಾ ಪತ್ರ ಹಾಗೂ ಪೊಲೀಸ್ ಇಲಾಖೆಯ ನಿರಾಕ್ಷೇಪಣಾ ಪ್ರಮಾಣಪತ್ರದೊಂದಿಗೆ ನಡೆಸುತ್ತಿದ್ದಾರೆ. ಹೀಗಾಗಿ ಜಿಲ್ಲೆಯಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ಹೋಂ ಸ್ಟೇಗಳಿಂದ ಅನೈತಿಕ ಚಟುವಟಿಕೆಗಳು ಹೆಚ್ಚುತ್ತಿರುವುದು ಕಂಡು ಬಂದಿದ್ದು, ಆದ್ದರಿಂದ ಪ್ರವಾಸೋಧ್ಯಮ ಇಲಾಖೆಯಿಂದ ಅನುಮತಿ ಪಡೆಯದಿದ್ದಲ್ಲಿ ಈ ಕೂಡಲೇ ನೋಂದಣಿ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ.

ಮುಂದಿನ 15 ದಿನಗಳೊಳಗೆ ನೋಂದಣಿ ಮಾಡದೆ ಅನಧಿಕೃತವಾಗಿ ನಡೆಸಿದರೆ ಸೂಕ್ತ ಕಾನುನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಲಾಗಿದೆ.

ಬ್ಯುರೋ ರಿಪೋರ್ಟ್, ವಿಸ್ಮಯ ನ್ಯೂಸ್.

Back to top button