Follow Us On

Google News
Important
Trending

ದಾಖಲೆಯಲ್ಲಿ ಯೋಜನೆ ಅನುಷ್ಠಾನ ಕಾಮಗಾರಿ ಪೂರ್ಣ: ಬಯಲಾಯ್ತು ಗೋಲ್ ಮಾಲ್?

ಕಾಮಗಾರಿಯೇ ನಡೆದಿಲ್ಲ ಎಂದು ಆರೋಪಿಸಿ ಗ್ರಾಮಸ್ಥರು ಆಕ್ರೋಶ

ಹೊನ್ನಾವರ: ಕೇಂದ್ರ ಸರ್ಕಾರದ ಮಹತ್ವಾಕಾಕ್ಷಿ ಯೋಜನೆಯಲ್ಲಿ ಒಂದಾದ ಜಲಜೀವನ್ ಮಿಷನ ಯೋಜನೆ ಅನುಷ್ಟಾನದಲ್ಲಿ ತಾಲೂಕಿನ ವಿವಿಧಡೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಒಳ ಒಪ್ಪಂದದಿoದ ಹಾದಿ ತಪ್ಪುತ್ತಿದೆ ಎನ್ನುವ ಮಾತು ಚಿತ್ತಾರ ಗ್ರಾ.ಪಂ. ವ್ಯಾಪ್ತಿಯ ಕಾಮಗಾರಿ ಸಾಕ್ಷಿಯಾಗಿದೆ.

ಚಿತ್ತಾರ ಗ್ರಾಮ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಅಭಾವ ಹೆಚ್ಚಾಗಿದ್ದು ಈ ಯೋಜನೆ ಅನುಷ್ಟಾನದ ಕುರಿತು ಗ್ರಾಮದ ಯುವಕರು ತಮ್ಮ ಮೊಬೈಲನಲ್ಲಿ ಕೇಂದ್ರ ಸರ್ಕಾರದ ವೆಬ್‌ಸೈಟ ಪರಿಶೀಲನೆ ನಡೆಸಿದಾಗ ಸಂಪೂರ್ಣ ಕೆಲಸವಾಗಿದೆ ಎಂದು ಬಂದಿದೆ. ಈ ಬಗ್ಗೆ ಮಾಹಿತಿ ಪಡೆದಾಗ ನೀವೆ ಬೇಡ ಎಂದು ಬರೆದುಕೊಟ್ಟಿದ್ದೀರಿ ಎಂದು ಹೇಳುತ್ತಿದ್ದಂತೆ ಗೊಂದಲಕ್ಕೆ ಒಳಗಾದರು.

ಚಿತ್ತಾರ ಗ್ರಾ.ಪಂ. ವ್ಯಾಪ್ತಿಯ ಸಾರ್ವಜನಿಕರು ಪಂಚಾಯತಗೆ ಮಾಹಿತಿ ಪಡೆಯಲು ಆಗಮಿಸಿದಾಗ ತಾ.ಪಂ. ಕಾರ್ಯನಿರ್ಹಣಾಧಿಕಾರಿ ಹಾಗೂ ಇಲಾಖೆಯ ಅಧಿಕಾರಿಗಳು ಗ್ರಾಮಸ್ಥರ ಪ್ರಶ್ನೆಗೆ ಉತ್ತರಿಸುತ್ತೇವೆ ಎಂದು ಭರವಸೆ ಆರಂಭದಲ್ಲಿ ನೀಡಿದರೂ, ಗ್ರಾಮಸ್ಥರ ಪ್ರಶ್ನೆಗೆ ಉತ್ತರಿಸಲು ತಲಕಾಡಿದರು. ನಕಲಿ ದಾಖಲೆ ಸೃಷ್ಠಿಸಿದ್ದಾರೆ ಅವರ ಬಗ್ಗೆ ಕ್ರಮ ಕೈಗೊಂಡು ತಕ್ಷಣ ಸಂಭoದಪಟ್ಟ ಅಧಿಕಾರಿಗಳನ್ನು ಅಮಾನತು ಮಾಡಬೇಕು ಎಂದು ಪಟ್ಟು ಹಿಡಿದರು.

ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಆನಂದ ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿ ಈ ಯೋಜನೆ ಕಾಮಗಾರಿ ಎಲ್ಲಡೆ ನಡೆಯುತ್ತಿದೆ. ನೀತಿ ಸಂಹಿತೆ ಮುಗಿದ ಬಳಿಕ ಗ್ರಾಮಸ್ಥರು ಸಭೆ ನಡೆಸಿ ಠರಾವು ಮಾಡಿ ಕಳುಹಿಸಿದರೆ, ಪ್ರಯತ್ನ ನಡೆಸುತ್ತೇವೆ. ನಕಲಿ ದಾಖಲಾತಿ ಬಗ್ಗೆ ಮಾಹಿತಿ ಪಡೆದು ಮೇಲಾಧಿಕಾರಿಗಳ ಗಮನಕ್ಕೆ ತರುವ ಭರವಸೆ ನೀಡಿದರು.

ಗ್ರಾಮಸ್ಥ ಮದುರೇಶ ಗೌಡ ಮಾತನಾಡಿ ಜಲಜೀವನ ಮಿಷನ್ ಯೋಜನೆ ನಮ್ಮಲ್ಲಿ ಅಕ್ರಮವಾಗಿದೆ. ಕಾಮಗಾರಿ ನಡೆಸದೇ ಮುಗಿದಿದೆ ಎಂದು ದಾಖಲಾಗಿದೆ. ಗ್ರಾಮಸ್ಥರನ್ನು ಕತ್ತಲೆಯಲ್ಲಿಟ್ಟು ಅಧಿಕಾರಿಗಳು ಗ್ರಾಮಕ್ಕೆ ಅನ್ಯಾಯವಾಗುವಂತೆ ನಡೆದಿದ್ದಾರೆ.ಮುಂದಿನ ದಿನದಲ್ಲಿ ಈ ಯೋಜನೆ ಗ್ರಾಮದಲ್ಲಿ ಅನುಷ್ಟಾನವಾಗದೆ ಹೋದರೆ ಅಧಿಕಾರಿಗಳೇ ನೇರ ಕಾರಣ ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ಚಿತ್ತಾರ ಗ್ರಾಮ ಪಂಚಾಯತ ವ್ಯಾಪ್ತಿಯ ಸಾರ್ವಜನಿಕರು ಗ್ರಾಮಸ್ಥರು ಮುಂತಾದವರು ಇದ್ದರು.

ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ

Back to top button
Idagunji Mahaganapati Chandavar Hanuman