ನಧಿಕೃತವಾಗಿ ವಿದ್ಯುತ್ ಸಂಪರ್ಕ: ತಂತಿ ಸ್ಪರ್ಶದಿಂದ ಕಾಡುಕೋಣ ಸಾವು

ಸಿದ್ದಾಪುರ: ಜಮೀನಿನ ಬೇಲಿಗೆ ಅನಧಿಕೃತವಾಗಿ ವಿದ್ಯುತ್ ಸಂಪರ್ಕ ನೀಡಲಾಗಿದ್ದ ತಂತಿ ಸ್ಪರ್ಶದಿಂದ ಕಾಡುಕೋಣವೊಂದು ಮೃತಪಟ್ಟ ಘಟನೆ ಸಿದ್ದಾಪುರ ತಾಲೂಕಿನ ಚಪ್ಪರ ಮನೆ ಗ್ರಾಮದಲ್ಲಿ ನಡೆದಿದೆ. ಕ್ಯಾದಗಿ ವಲಯದ ಬಿಳಗಿ ಶಾಖೆಯ ಚಪ್ಪರಮನೆ ಗ್ರಾಮದ ಶ್ರೀಧರ ಗಣಪತಿ ಹೆಗಡೆ ಎಂಬುವವರಿಗೆ ಸೇರಿದ ಜಮೀನಿನಲ್ಲಿ ಈ ಘಟನೆ ನಡೆದಿದೆ. ಘಟನೆಗೆ ಸಂಬoಧಿಸಿದoತೆ ಜಮೀನಿನ ಮಾಲೀಕರಾದ ಶ್ರೀಧರ ಹೆಗಡೆ ಅವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದು, ನ್ಯಾಯಾಲಯವು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಸಿದೆ.

ಕಾಡು ಪ್ರಾಣಿಗಳು ತೋಟದೊಳಗೆ ಪ್ರವೇಶ ಮಾಡುವುದನ್ನ ತಡೆಯಲು ತೋಟದ ಮಾಲೀಕ ಶ್ರೀಧರ ಹೆಗಡೆ ತಮ್ಮ ತೋಟದ ಸುತ್ತ ವಿದ್ಯುತ್ ತಂತಿ ಅಳವಡಿಸಿದ್ದರು ಎನ್ನಲಾಗಿದೆ. ಈ ವೇಳೆ ಕಾಡೆಮ್ಮೆ ತೋಟದ ಬಳಿ ಬಂದ ಸಮಯದಲ್ಲಿ ವಿದ್ಯುತ್ ತಂತಿ ತಗುಲಿ ಸ್ಥಳದಲ್ಲೇ ಸಾವನ್ನಪ್ಪಿದೆ.

ವಿಸ್ಮಯ ನ್ಯೂಸ್, ಸಿದ್ದಾಪುರ

Exit mobile version