Focus News
Trending

ವೈದ್ಯರು ಸೇರಿ ಅಂಕೋಲಾದಲ್ಲಿಂದು 3 ಕೋವಿಡ್ ಕೇಸ್

[sliders_pack id=”3491″]

ಅಂಕೋಲಾ : ತಾಲೂಕಿನಲ್ಲಿ ಗುರುವಾರ 3 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಇಂದು ಸೋಂಕಿನಿಂದ ಗುಣಮುಖರಾದ 5 ಜನರನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದ್ದು ಒಟ್ಟೂ 60 ಸಕ್ರೀಯ ಪ್ರಕರಣಗಳಿವೆ. 65 ಜನರ ಗಂಟಲು ದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆಗೊಳಪಡಿಸಲಾಗಿದೆ. ಬೇಲೇಕೇರಿಯ ವ್ಯಕ್ತಿಯೋರ್ವರಲ್ಲಿ ಸೋಂಕಿನ ಲಕ್ಷಣಗಳು ದೃಢಪಟ್ಟಿದ್ದು, ಇವರಿಗೆ ಮಂಗಳೂರಿನ ಆಸ್ಪತ್ರೆಯಲ್ಲಿ ಪಾಸಿಟಿವ್ ಕಾಣಿಸಿಕೊಂಡಿದ್ದ ಮಗನ ಸಂಪರ್ಕದಿಂದ ಬಂದಿರುವ ಸಾಧ್ಯತೆ ಇದೆ. ಪಟ್ಟಣ ವ್ಯಾಪ್ತಿಯಲ್ಲಿ ಕಾಣಿಸಿಕೊಂಡ ಇನ್ನೊಂದು ಪ್ರಕರಣ ಜ್ವರಲಕ್ಷಣಗಳಿಂದ ಕೂಡಿದ (ಐ.ಎಲ್.ಐ) ಮಾದರಿಯಾಗಿದೆ.

ಕರೊನಾ ವಾರಿಯರ್ಸ ವೈದ್ಯರಿಗೂ ಸೋಂಕು : ತಾಲೂಕಾ ಸರ್ಕಾರಿ ಆಸ್ಪತ್ರೆಯ ಪಿವರ್ ಕ್ಲಿನಿಕ್‍ನಲ್ಲಿ ಕರ್ತವ್ಯ ನಿರ್ವಹಿಸಿದ ವೈದ್ಯರೋರ್ವರಲ್ಲಿ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿದೆ ಎನ್ನಲಾಗಿದ್ದು, ಈ ಹಿಂದೆಯೂ ಕರೋನಾ ವಾರಿಯರ್ಸಗಳಾದ ಪೊಲೀಸ್ ಸಿಬ್ಬಂದಿ, ಗ್ರಾಮಪಂಚಾಯತ ಪಿ.ಡಿ.ಓ, ವೈದ್ಯ, ನರ್ಸ, ಡಿ ದರ್ಜೆ ನೌಕರರು, ಪುರಸಭೆಯ ಸ್ವಚ್ಛತಾ ಬಂಧು ಮತ್ತು ಇನ್ನೋರ್ವ ನೌಕರ ಸೇರಿದಂತೆ ಕೆಲವರಲ್ಲಿ ಕರೊನಾ ಪಾಸಿಟಿವ್ ಲಕ್ಷಣಗಳು ಕಂಡು ಬಂದಿತ್ತು.

ವಿವಿಧ ಸ್ತರದ ಕರೊನಾ ವಾರಿಯರ್ಸಗಳು ತಮ್ಮ ಜೀವದ ಅಪಾಯದ ಅರಿವಿದ್ದೂ, ಜನತೆಯ ಆರೋಗ್ಯ ಕಾಳಜಿಯಿಂದ ಕರ್ತವ್ಯ ಮತ್ತು ಸೇವೆ ನಿರ್ವಹಿಸುತ್ತಿರುವುದು ಶ್ಲಾಘನೀಯ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ.

Back to top button