ರಾಷ್ಟ್ರಮಟ್ಟದ ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ 3 ಚಿನ್ನ 1 ಕಂಚು

ಮಹಾರಾಷ್ಟ್ರ ಪುಣೆಯಲ್ಲಿ ಇತ್ತಿಚೆಗೆ ನಡೆದ ಚಿಲ್ಡ್ರನ್ ಮತ್ತು ಕ್ಯಾಡೆಟ್ಸ್ ವಾಕೋ ಇಂಡಿಯಾ ರಾಷ್ಟ್ರಮಟ್ಟದ ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಉತ್ತರ ಕನ್ನಡ ಜಿಲ್ಲೆಗೆ ಮೂರು ಚಿನ್ನ ಮತ್ತು ಒಂದು ಕಂಚಿನ ಪದಕ ಲಭಿಸಿದೆ. 7 ರಿಂದ 9 ವರ್ಷ ವಯೋಮಿತಿಯ ಬಾಲಕಿಯರ 18 ಕೆ.ಜಿ ಪಾಯಿಂಟ್ ಪೈಟ್ ವಿಭಾಗದಲ್ಲಿ ಧನ್ವಿತಾ ವಾಸು ಮೊಗೇರ ಚಿನ್ನದ ಪದಕ ಗೆದ್ದು ಬೀಗಿದರೆ, 18 ಕೆ.ಜಿ ಲೈಟ್ ಕಾಂಟ್ಯಾಕ್ಟ್ ವಿಭಾಗದಲ್ಲಿ ಪ್ರಣವಿ ರಾಮಚಂದ್ರ ಕಿಣಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದರು, ಮ್ಯೂಸಿಕಲ್ ಫಾರ್ಮ್ ಹಾರ್ಡ್ ಸ್ಟೈಲ್ ನಲ್ಲಿ ಅವನಿ ಸೂರಜ್ ರಾವ್ ಚಿನ್ನದ ಪದಕ ಪಡೆದರು.

ಬಾಲಕರ 24ಕೆಜಿ ವಿಭಾಗದ ಪಾಯಿಂಟ್ ಫೈಟ್ ನಲ್ಲಿ ಮೊಹಮ್ಮದ್ ರಯ್ಯಾನ್ ಐದನೇ ಸ್ಥಾನ ಗಿಟ್ಟಿಸಿಕೊಂಡರೆ, 10 ರಿಂದ 13 ವರ್ಷ ವಯೋಮಾನದ ಬಾಲಕರ 32 ಕೆ.ಜಿ ವಿಭಾಗದಲ್ಲಿ ನಯಿಮ್ ಅಹ್ಮದ್ ಗಂಗಾವಳಿ ಕಂಚಿನ ಪದಕ ಪಡೆದರು. ಅಂದಹಾಗೇ ಶ್ರೀ ಶಿವ ಛತ್ರಪತಿ ಶಿವಾಜಿ ಮಹಾರಾಜ ಸ್ಟೇಡಿಯಂನಲ್ಲಿ ನಡೆದ ರಾಷ್ಟ್ರಮಟ್ಟದ ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ 32 ರಾಜ್ಯಗಳಿಂದ ಕಿಕ್ ಬಾಕ್ಸಿಂಗ್ ಪಟುಗಳು ಭಾಗವಸಿದ್ದು, ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಕಿಕ್ ಬಾಕ್ಸಿಂಗ್ ಪಟುಗಳು ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ್ದರು.

ಗೆದ್ದ ಎಲ್ಲಾ ಕ್ರೀಡಾಪಟುಗಳಿಗೂ ವಾಕೊ ಕರ್ನಾಟಕ ರಾಜ್ಯ ಕಿಕ್ ಬಾಕ್ಸಿಂಗ್ ನ ಅಧ್ಯಕ್ಷರಾದ ಸಂತೋಷ ಕೆ ಮತ್ತು ಪ್ರಧಾನ ಕಾರ್ಯದರ್ಶಿಯಾದ ಪೂಜಾ ಹರ್ಷ ಹಾಗೂ ರಾಷ್ಟ್ರ ಮಟ್ಟದ ಕಿಕ್ ಬಾಕ್ಸಿಂಗಿನ ಕೋಚ್ ರಾದ ಹರ್ಷ ಶಂಕರ್ ಉತ್ತರಕನ್ನಡ ಜಿಲ್ಲೆಯ ಕಿಕ್ ಬಾಕ್ಸಿಂಗ್ ಸ್ಪೋರ್ಟ್ಸ್ ಅಸೋಸಿಯೇಷನ್ ನ ಅಧ್ಯಕ್ಷರಾದ ಈಶ್ವರ ನಾಯ್ಕ ಮತ್ತು ನಾಗಶ್ರೀ ಮಾರ್ಷಲ್ ಆರ್ಟ್ಸ್ ನ ಕಿಕ್ ಬಾಕ್ಸಿಂಗ್ ನ ಕೋಚ್ ನಾಗಶ್ರೀ ನಾಯ್ಕ ಮತ್ತು ಏಲೀಯನ್ಸ್ ಮಾರ್ಷಲ್ ಆರ್ಟ್ಸ್ ನ ಕೋಚ್ ಇಸ್ಮಾಯಿಲ್, ರೇವೊಲ್ಯೂಷನ್ ಮಾರ್ಷಲ್ ಆರ್ಟ್ಸ್ ಅಕಾಡೆಮಿ ಕೋಚ್ ಜುಹೆಬ್, ಅಕ್ಫಾ ಅಕಾಡೆಮಿಯ ಕೋಚ್ ಅಮರ್ ಶಾಬಂದ್ರಿ ಅಭಿನಂದನೆ ಕೋರಿದ್ದಾರೆ.

ವಿಸ್ಮಯ ನ್ಯೂಸ್, ಈಶ್ವರ್ ನಾಯ್ಕ, ಭಟ್ಕಳ

Exit mobile version