Job News
Trending

BPNL Recruitment: ಬೃಹತ್ ನೇಮಕಾತಿ: 5,250 ಹುದ್ದೆಗಳು: SSLC, PUC ಆದವರು ಅರ್ಜಿ ಸಲ್ಲಿಸಿ

BPNL Recruitment: ಭಾರತೀಯ ಪಶುಪಾಲನಾ ನಿಗಮ ಲಿಮಿಟೆಡ್ ನಲ್ಲಿ ಬೃಹತ್ ನೇಮಕಾತಿ ನಡೆಯಲಿದೆ. ಒಟ್ಟು 5,250 ಹುದ್ದೆಗಳಿಗೆ ಆಸಕ್ತ, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಮಾನ್ಯತೆ ಪಡೆದ ಸಂಸ್ಥೆ ಅಥವಾ ವಿಶ್ವ ವಿದ್ಯಾಲಯದಿಂದ ಎಸ್‌ಎಸ್‌ಎಲ್‌ಸಿ, ಪಿಯುಸಿ, ಡಿಪ್ಲೊಮಾ ಆದ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿಸಲ್ಲಿಸಬಹುದು. ಹುದ್ದೆಗಳಿಗೆ ಅನುಗುಣವಾಗಿ 25 ಸಾವಿರದಿಂದ 50 ಸಾವಿರದ ವರೆಗೆ ಮಾಸಿಕ ವೇತನ ನಿಗದಿಯಾಗಿದೆ.

ಚಿನ್ನದ ಗಣಿಯಲ್ಲಿ 168 ಹುದ್ದೆಗಳಿಗೆ ನೇಮಕಾತಿ: ಐಟಿಐ, ಡಿಪ್ಲೋಮಾ, ಪದವಿ ಆದವರು ಅರ್ಜಿ ಸಲ್ಲಿಸಿ: 48 ಸಾವಿರ ಮಾಸಿಕ ವೇತನ

ಕೃಷಿ ನಿರ್ವಹಣಾ ಅಧಿಕಾರಿ, ಕೃಷಿ ಅಭಿವೃದ್ಧಿ ಅಧಿಕಾರಿ ಹಾಗು ಕೃಷಿ ಸ್ಫೂರ್ತಿ ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಗಾಗಿ ನಡೆಯಲಿದೆ. ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕನಿಷ್ಠ 18 ವರ್ಷಗಳ ವಯೋಮಿತಿ ಹಾಗು ಗರಿಷ್ಠ 45 ವರ್ಷಗಳ ವಯೋಮಿತಿ ನಿಗದಿಪಡಿಸಲಾಗಿದೆ.

ಇಲಾಖೆಭಾರತೀಯ ಪಶುಪಾಲನಾ ನಿಗಮ ಲಿಮಿಟೆಡ್
ಒಟ್ಟು ಹುದ್ದೆಗಳು5,250
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕಜೂನ್ 2, 2024
ಅರ್ಜಿ ಸಲ್ಲಿಸುವ ವಿಧಾನOnline

BPNL Recruitment: ಕೃಷಿ ನಿರ್ವಹಣಾ ಅಧಿಕಾರಿ, 250, ಕೃಷಿ ಅಭಿವೃದ್ಧಿ ಅಧಿಕಾರಿ – 1250, ಕೃಷಿ ಸ್ಫೂರ್ತಿ – 3750 ಹುದ್ದೆಗಳು ಖಾಲಿಯಿವೆ. ಈಗಾಗಲೇ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಜೂನ್ 2, 2024 ಅರ್ಜಿ ಸಲ್ಲಿಕೆ ಕೊನೆಯ ದಿನವಾಗಿದೆ. ಆನ್ ಲೈನ್ ಪರೀಕ್ಷೆ ಹಾಗು ಸಂದರ್ಶನದ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಕೃಷಿ ನಿರ್ವಹಣಾ ಅಧಿಕಾರಿಗೆ 50 ಸಾವಿರ, ಕೃಷಿ ಅಭಿವೃದ್ಧಿ ಅಧಿಕಾರಿಗೆ 40 ಸಾವಿರ ಕೃಷಿ ಸ್ಫೂರ್ತಿ ಹುದ್ದೆಗೆ 25 ಸಾವಿರ ಮಾಸಿಕ ವೇತನ ಇರಲಿದೆ.

ಮಾಸಿಕ ವೇತನ25 ಸಾವಿರದಿಂದ 50 ಸಾವಿರ
ಅಧಿಸೂಚನೆ ಓದಲುಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಸಲ್ಲಿಸುವ ಲಿಂಕ್ಇಲ್ಲಿ ಕ್ಲಿಕ್ ಮಾಡಿ

ಇನ್ನು ಹೆಚ್ಚಿನ ಉದ್ಯೋಗಾವಕಾಶದ ಕುರಿತ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.

ಸಂದೇಶ್ ಎನ್ ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Back to top button