Important
Trending

ಒಂದು ಗಂಟೆಗೂ ಅಧಿಕ ಸಮಯ ದೇವಸ್ಥಾನದಲ್ಲೇ ಕುಳಿತಿದ್ದ : ಯಾರು ಇಲ್ಲದ ಸಮಯ ನೋಡಿ ಮಾಡಿದ್ದೇನು?

ಹೊನ್ನಾವರ: ಪಟ್ಟಣದ ಕೆಳಗಿಪಾಳ್ಯದ ಜೋಡಿಕಟ್ಟೆ ಮಾರುತಿ ದೇವಾಲಯಕ್ಕೆ ಬಂದ ಕಳ್ಳನೊಬ್ಬ ದೇವಸ್ಥಾನದ ಎರಡು ಗಂಟೆಗಳನ್ನು ಎಗರಿಸಿಕೊಂಡು ಹೋಗುತ್ತಿದ್ದ ಘಟನೆಯ ವಿಡಿಯೋ ದೇವಸ್ಥಾನದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೆಳಗಿನ ಪಾಳ್ಯದದಲ್ಲಿರುವ ಜೋಡಿಕಟ್ಟೆ ಮಾರುತಿ ದೇವಸ್ಥಾನಕ್ಕೆ ಮುಂಜಾನೆ 9 ಗಂಟೆಗೆ ದೇವಸ್ಥಾನಕ್ಕೆ ಬಂದ ವ್ಯಕ್ತಿಯೊಬ್ಬ ಸುಮಾರು ಒಂದು ಗಂಟೆಗೂ ಅಧಿಕ ಸಮಯ ದೇವಸ್ಥಾನದಲ್ಲೇ ಕುಳಿತು ಯಾರು ಇಲ್ಲದನ್ನು ಗಮನಿಸಿ ಎರಡು ಗಂಟೆಯನ್ನು ಎಗರಿಸಿದ್ದಾನೆ.

ದೇವಾಲಯದಿಂದ ಗೋಣಿ ಚೀಲದಲ್ಲಿ ಎರಡು ಗಂಟೆಗಳನ್ನು ತೆಗೆದುಕೊಂಡು ಹೋಗಿದ್ದಾನೆ. ಈ ಬಗ್ಗೆ ಕೆಲ ಗಂಟೆಯ ಬಳಿಕ ಕಳ್ಳತನ ನಡೆದಿರುವ ಬಗ್ಗೆ ಆಡಳಿತ ಮಂಡಳಿಯ ಸದಸ್ಯರಿಗೆ ಮಾಹಿತಿ ನೀಡಿದಾಗ ವಿಷಯ ಬೆಳಕಿಗೆ ಬಂದಿದೆ. ಕೂಡಲೇ ಸಿಸಿಟಿವಿ ಪರಿಶೀಲಿಸಿದಾಗ ಕಳ್ಳತನವಾಗಿರೋದು ತಿಳಿದಿದೆ.

ಕಳ್ಳನ ಕೈಚಳಕ ದೇವಸ್ಥಾನದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಕಳ್ಳತನವಾಗಿರುವ ವಿಷಯ ತಿಳಿಯುತ್ತಿದ್ದಂತೆ ದೇವಸ್ಥಾನದ ಆಡಳಿತ ಮಂಡಳಿಯವರು ಹೊನ್ನಾವರ ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿರುವ ಪೋಲಿಸರು ಕಳ್ಳನ ಪತ್ತೆಗೆ ಬಲೆ ಬೀಸಿದ್ದಾರೆ.

ವಿಸ್ಮಯ ನ್ಯೂಸ್, ಹೊನ್ನಾವರ

Back to top button