Focus News
Trending

ಸಗಡಗೇರಿ ಗ್ರಾಪಂ ಮಾಜಿ ಅಧ್ಯಕ್ಷೆ ಮತ್ತು ಹಾಲಿ ಸದಸ್ಯೆ ಸೀತೆ ಗೌಡ ವಿಧಿವಶ

ಅಂಕೋಲಾ : ತಾಲೂಕಿನ ಸಗಡಗೇರಿ ಗ್ರಾ.ಪಂ ನ ಮಾಜಿ ಅಧ್ಯಕ್ಷೆ ಮತ್ತು ಹಾಲಿ ಸದಸ್ಯರಾಗಿದ್ದ ಸೀತೆ ಎಸ್ ಗೌಡ (75 ) ಉಳುವರೆ ಇವರು ಹೃದಯಾಘಾತದಿಂದ ಸ್ಪ ಗೃಹದಲ್ಲಿ ಗುರುವಾರ ಮಧ್ಯಾಹ್ನ ವಿಧಿವಶರಾದರು. ಗ್ರಾಮೀಣ ಭಾಗದ ದಿಟ್ಟ ಮಹಿಳೆಯಾಗಿ, ಕಳೆದ ಅನೇಕ ದಶಕಗಳಿಂದ ಸಕ್ರೀಯ ರಾಜಕಾರಣ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡು ತಾಲೂಕಿನಾದ್ಯಂತ ಸೀತಕ್ಕ ಎಂದೇ ಪರಿಚಿತರಾಗಿದ್ದರು.

ಇವರ ಅಕಾಲಿಕ ನಿಧನಕ್ಕೆ ಶಾಸಕ ಸತೀಶ್ ಸೈಲ್ ಸಂತಾಪ ಸೂಚಿಸಿದ್ದು, ಕಾಂಗ್ರೆಸ್ ಪ್ರಮುಖರಾದ ಸಾಯಿ ಗಾಂವಕರ, ಸುಜಾತಾ ಗಾಂವಕರ, ಪಾಂಡುರಂಗ ಗೌಡ, ಕೆ. ಎಚ್ ಗೌಡ, ರಮಾನಂದ ನಾಯಕ, ವಿನೋದ ನಾಯಕ, ಜಗದೀಶ ಖಾರ್ವಿ ಸ್ಥಳೀಯ ಗ್ರಾಪಂ ನ ಹಾಲಿ ಹಾಗೂ ಮಾಜಿ ಜನಪ್ರತಿನಿಧಿಗಳು, ಊರ ನಾಗರಿಕರು, ಸಮಾಜ ಬಾಂಧವರು ಸೇರಿದಂತೆ ನೂರಾರು ಜನ ಮೃತರ ಅಂತಿಮ ದರ್ಶನ ಪಡೆದುಕೊಂಡರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button