Big News
Trending

ರಾಜ್ಯದಲ್ಲಿ ಅತಿ ಹೆಚ್ಚು ಮತಗಳ ಅಂತರದಿಂದ ಗೆದ್ದು ಬೀಗಿದ ವಿಶ್ವೇಶ್ವರ : ಕೈಗೆ ಕೆಸರಾದರೆ, ಕಾಗೇರಿಗೆ ಮೊಸರು

ಅಂಕೋಲಾ: ಲೋಕ ಸಮರದಲ್ಲಿ ಬಿಜೆಪಿಯ ಅಭ್ಯರ್ಥಿಯಾಗಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿಯವರು ನಿರೀಕ್ಷೆಯಂತೆ ಗೆಲುವಿನ ನಗೆ ಬೀರಿದ್ದಾರೆ. ಗೆಲುವಿನ ಅಂತರ (ದಾಖಲೆ) ಮಾತ್ರ ನಿರೀಕ್ಷೆಗೂ ಮೀರಿದ್ದು, ರಾಜ್ಯದಲ್ಲಿಯೇ ಅತಿ ಹೆಚ್ಚು ಅಂತರದ ಗೆಲುವಾಗಿದ್ದು, ಇದು ಇವರ ರಾಜಕೀಯ ಎದುರಾಳಿಗಳಿಗಷ್ಟೇ ಅಲ್ಲದೇ, ಸ್ಪ ಪಕ್ಷದಲ್ಲಿದ್ದುಕೊಂಡೇ ಕಾಗೇರಿಯವರನ್ನು ಸೋಲಿಸಲು ತೆರೆಮರೆ ಕಸರತ್ತು ನಡೆಸಿದ್ದ ಕೆಲವರು (ಪಕ್ಷ ದ್ರೋಹಿಗಳಿಗೆ ) ಇದ್ದೂ ಸತ್ತಂತೆ ಎನ್ನುವ ಮಾತು ರಾಜಕೀಯ ವಲಯದಿಂದ ಕೇಳಿಬಂದಿದೆ.

ಮತ ಎಣಿಕೆ ವೇಳೆ ಅಂಚೆ ಮತದಿಂದ ಹಿಡಿದು ಆರಂಭದಿಂದಲೇ ಮುನ್ನಡೆ ಕಾಯ್ದುಕೊಂಡಿದ್ದ ಕಾಗೇರಿ,ಕೊನೆ ಸುತ್ತಿನವರೆಗೂ ಹಿಂತಿರುಗಿ ನೋಡದೇ,ಮುನ್ನಡೆಯ ಅಂತರ ಹೆಚ್ಚಿಸಿಕೊಳ್ಳುತ್ತಲೇ ಸಾಗಿದ್ದರು. ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲಾ (8) ವಿಧಾನ ಸಭಾ ಕ್ಷೇತ್ರಗಳಲ್ಲೂ ಲೀಡ್ ಗಳಿಸಿಕೊಂಡ ಬಿಜೆಪಿ, ಮತದಾರರ ಪಾಲಿಗೆ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಿಂತ,ದೇಶದ ವಿಷಯ ಬಂದಾಗ ಮೋದಿ ಗ್ಯಾರಂಟಿಯೇ ಮೇಲೆಂದು ತೀರ್ಮಾನಿಸಿದಂತಿದೆ.

ಈ ಮೂಲಕ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪರಾಭವ ಹೊಂದಿದ್ದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ, ಈ ಬಾರಿ ಹಿಂದೂ ಹುಲಿ ಎಂದೇ ಹೇಳಿಸಿಕೊಂಡಿದ್ದ ಅನಂತ ಕುಮಾರಗೆ ಟಾಂಗ್ ಕೊಟ್ಟು, ಲೋಕಸಭಾ ಟಿಕೆಟ್ ಗಿಟ್ಟಿಸಿಕೊಂಡು ಗೆದ್ದು,ತಮ್ಮ ರಾಜಕೀಯ ಜೀವನದ ಹೊಸ ಇನಿಂಗ್ಸ್ ಆರಂಭಿಸಿದ್ದಾರೆ. ವಿಧಾನಸಭಾ ಕ್ಷೇತ್ರವಾರು ಮತಗಳಿಕೆ.

ಖಾನಾಪುರ : ಕಾಗೇರಿ (107978) ಮತ್ತು ನಿಂಬಾಳ್ಕರ್ (48148 )ಮತಗಳನ್ನು ಪಡೆದಿದ್ದು ಬಿಜೆಪಿ ಲೀಡ್(59830 )
ಕಿತ್ತೂರು: ಕಾಗೇರಿ (92445), ನಿಂಬಾಳ್ಕರ (56203), ಬಿಜೆಪಿ ಲೀಡ್ (36242),
ಹಳಿಯಾಳ :ಕಾಗೇರಿ( 83426), ನಿಂಬಾಳ್ಕರ್( 54546),ಬಿಜೆಪಿ ಲೀಡ್ ( 28880).
ಕಾರವಾರ: ಕಾಗೇರಿ ( 113317), ನಿಂಬಾಳ್ಕರ್ (47889),ಬಿಜೆಪಿಗೆ ಲೀಡ್ (65428),
ಕುಮಟಾ :ಕಾಗೇರಿ ( 97928), ನಿಂಬಾಳ್ಕರ್ (44435).ಬಿಜೆಪಿ ಲೀಡ್ ( 53493).
ಭಟ್ಕಳ: ಕಾಗೇರಿ (100288), ನಿಂಬಾಳ್ಕರ್ (67885), ಬಿಜೆಪಿ ಲೀಡ್ ( 32403),
ಶಿರಸಿ: ಕಾಗೇರಿ (100052), ನಿಂಬಾಳ್ಕರ್(60124),ಬಿಜೆಪಿ ಲೀಡ್ (39928),
ಯಲ್ಲಾಪುರ: ಕಾಗೇರಿ (82453), ನಿಂಬಾಳ್ಕರ್ (64066),ಬಿಜೆಪಿ ಲೀಡ್ (18387) ಪಡೆದಿದೆ

ಈ ಹಿಂದೆ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಅಂಕೋಲಾ ಕ್ಷೇತ್ರದಿಂದ,ಹಾಗೂ ತದನಂತರ ಶಿರಸಿ ಕ್ಷೇತ್ರದಿಂದ ತ್ರಿವಿಕ್ರಮ ಸಾಧನೆ ಮಾಡಿ ಒಟ್ಟೂ 6 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಕಾಗೇರಿಯವರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪರಾಭವಗೊಂಡು, ಈದೀಗ ಲೋಕಸಭಾ ಚುನಾವಣೆಯಲ್ಲಿ ಸಂಸದ ಅನಂತಕುಮಾರ ನ ಪೌರುಷಕ್ಕೆ ಬ್ರೇಕ್ ಹಾಕಿ, ಉ ಕ ಲೋಕ ಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಮೊದಲ ಬಾರಿಗೇ, ರಾಜ್ಯದಲ್ಲಿಯೇ ದಾಖಲೆಯ ಅಂತರದಿಂದ ಗೆದ್ದು ಹೊಸ ಇತಿಹಾಸ ಸೃಷ್ಟಿಸಿದಂತಾಗಿದೆ.

ಬಿಜೆಪಿಯ ವಿಶ್ವೇಶ್ವರ ಹೆಗಡೆ ಕಾಗೇರಿ ಒಟ್ಟು (782495) ಮತಗಳನ್ನು ಪಡೆದರೆ, ಕಾಂಗ್ರೆಸ್ ನ ಅಂಜಲಿ ನಿಂಬಾಳ್ಕರ್ ಒಟ್ಟು (445067) ಮತ ಪಡೆದುಕೊಂಡಿದ್ದು , ಕಾಗೇರಿಯವರು ಒಟ್ಟೂ ( 337428) ಭಾರೀ ಮತಗಳ ಅಂತರದಿಂದ ಗೆಲುವು ಸಾಧಿಸಿ,ಸಂಸತ್ತಿಗೆ ಪ್ರವೇಶ ಪಡೆದಿದ್ದಾರೆ.ಒಟ್ಟಿನಲ್ಲಿ ಈ ಫಲಿತಾಂಶ ಕೈಗೆ ಕೆಸರಾದರೆ, ಕಾಗೇರಿಗೆ ಮೊಸರು ಎನ್ನುವಂತಾಗಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button