Important
Trending

ಅನಧಿಕೃತವಾಗಿ ಅಳವಡಿಸಿದ್ದ ವಿದ್ಯುತ್ ತಂತಿ ತಗುಲಿ ಏಳು ಜಾನುವಾರುಗಳ ಸಾವು

ಕಾರವಾರ: ಹೊಲದ ಸುತ್ತ ಅನಧಿಕೃತವಾಗಿ ವಿದ್ಯುತ್ ತಂತಿ ಅಳವಡಿಸಿದ ಕಾರಣ ವಿದ್ಯುತ್ ಶಾಕ್ ತಗುಲಿ ಏಳು ಜಾನುವಾರು ಮೃತಪಟ್ಟ ಘಟನೆ ನಡೆದಿದೆ.ತಾಲೂಕಿನ ಬೋರಿಬಾಗದ ಜಮೀನಿನಲ್ಲಿ ಪಂಪ್ ಸೆಟ್ ಶೆಡ್‌ನಿಂದ ಅಕ್ರಮವಾಗಿ ಹೊಲದದಲ್ಲಿ ವಿದ್ಯುತ್ ತಂತಿ ಅಳವಡಿಸಲಾಗಿತ್ತು ಎನ್ನಲಾಗಿದೆ. ಈ ವೇಳೆ ಮೇಯಲು ಹೋಗಿದ್ದ ಜಾನುವಾರುಗಳು ಶಾಕ್ ಹೊಡೆದಿದ್ದು ಸ್ಥಳದಲ್ಲೇ ಮೃತಪಟ್ಟಿವೆ. ಒಟ್ಟು 7 ಜಾನುವಾರುಗಳು ಅಸುನೀಗಿವೆ. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಸ್ಮಯ ನ್ಯೂಸ್, ಕಾರವಾರ

Back to top button