Important
Trending

ಡೆಂಗ್ಯೂದಿoದಾಗಿ ಮಹಿಳೆ ಸಾವು

ಶಿರಸಿ: ಅಕ್ಷಯ ಕೋ ಆಪ್ ಕ್ರೆಡಿಟ್ ಸೊಸೈಟಿಯ ಸಿಬ್ಬಂದಿಯಾದ ಶ್ರೀಮತಿ ವೀಣಾ ಹೊಳೆಗದ್ದೆ ಅವರು ಅನಾರೋಗ್ಯದಿಂದಾಗಿ ನಿಧನರಾಗಿದ್ದಾರೆ. ಕಳೆದೊಂದು ವಾರದಿಂದ ಮಹಾಮಾರಿ ಡೆಂಗ್ಯುದಿoದ ಬಳಲುತ್ತಿದ್ದ ವೀಣಾ ಅವರು ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ವೀಣಾ ಅವರು ಒರ್ವ ಪುತ್ರ ಮತ್ತು ಬಂಧು ಬಳಗದವರನ್ನು ಬಿಟ್ಟು ಅಗಲಿದ್ದಾರೆ. ಸೊಸೈಟಿಗೆ ಬಂದ ಗ್ರಾಹಕರಿಗೆ ನಗುಮೊಗದ ಸೇವೆ ನೀಡುತ್ತಿದ್ದ ವೀಣಾ ಅವರ ಅಕಾಲಿಕ ನಿಧನಕ್ಕೆ ಸೊಸೈಟಿಯ ಆಡಳಿತ ಮಂಡಳಿ ಸೇರಿದಂತೆ ಸಿಬ್ಬಂದಿ ವರ್ಗದವರು ಕಂಬನಿ ಮಿಡಿದಿದ್ದಾರೆ.

ವಿಸ್ಮಯ ನ್ಯೂಸ್, ಶಿರಸಿ

Back to top button