Important
Trending

ಬೇರೆ ಊರಿನಿಂದ ಕಾರಿನಲ್ಲಿ ಬಂದು ಕಳ್ಳತನ: ಚಿನ್ನದ ಅಂಗಡಿಗಳೇ ಟಾರ್ಗೆಟ್

ಕುಮಟಾ: ಅನ್ಯ ಊರಿನಿಂದ ಬಂದು ಮನೆ, ಚಿನ್ನದ ಅಂಡಗಿ ಮುಂತಾದ ಮಳಿಗೆಗಳನ್ನು ಟಾರ್ಗೆಟ್ ಮಾಡಿ ಕಳುವು ಮಾಡುವ ಸುದ್ದಿಗಳು ಹೊರ ಜಿಲ್ಲೆ ಮುಂತಾದ ಬಾಗದಲ್ಲಿ ನಡೆಯುತ್ತಿತ್ತು. ಇದೀಗ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನಲ್ಲಿಯೂ ಅಂತಹುದ್ದೆ ಘಟನೆ ಬೆಳಕಿಗೆ ಬಂದಿದ್ದು, ಕಳ್ಳರ ಗುಂಪೊAದು ಕುಮಟಾ ಪಟ್ಟಣಕ್ಕೆ ನುಗ್ಗಿ ಕಳ್ಳತನ ಮಾಡುತ ಪ್ರಕ್ರಿಯೆಯಲ್ಲಿ ತೊಡಗಿ ವಿಫಲವಾಗಿರುವ ಬಗ್ಗೆ ಕುಮಟಾ ಠಾಣೆಯಲ್ಲಿ ದೂರು ದಾಖಲಾಗಿದೆ.

ಗ್ರಾಹಕರ ಸೋಗಿನಲ್ಲಿ ಕುಮಟಾ ಪಟ್ಟಣದ ಜ್ಯುವೆಲರಿ ಅಂಗಡಿಗಳಿಗೆ ನುಗ್ಗಿದ ಕಳ್ಳರ ತಂಡ ಚಿನ್ನಾಭರಣಗಳನ್ನು ಎಗರಿಸುತ್ತಿದ್ದಾಗ ದಾಳಿ ನಡೆಸಿದ ಪೊಲೀಸರು 8 ಜನರ ಕುಖ್ಯಾತ ಕಳ್ಳರನ್ನು ಹಿಡಿದು ಬಂಧಿಸಿದ್ದಾರೆ. ಕುಮಟಾದ ಕುಂಬೇಶ್ವರ ರಸ್ತೆಯ ಜ್ಯುವೆಲರಿ ಅಂಗಡಿಯಲ್ಲಿ ಕಳ್ಳತನದ ಸಂಚು ಹಾಕಿ ತೆರಳಿದ ವೇಳೆ ಖತರ್ನಾಕ್ ಕಳ್ಳರು ಕುಮಟಾ ಪೊಲೀಸರ ಅತಿಥಿಯಾಗಿದ್ದಾರೆ. ಶುಕ್ರವಾರ ಸಂಜೆ ಎರಡು ಸ್ವೀಪ್ಟ್ ಕಾರಿನಲ್ಲಿ ಬಂದ ಏಂಟು ಜನ ಕಳ್ಳರ ತಂಡ ಕುಮಟಾ ಪಟ್ಟಣದ ಕುಂಭೇಶ್ವರ ರಸ್ತೆಯ ಮಸೀದಿ ಎದುರಿನಲ್ಲಿರುವ ಸ್ವಾಗತ್ ಜ್ಯವೆಲ್ಲರಿ ಶಾಫ್‌ನಲ್ಲಿ ಆಭರಣಗಳನ್ನು ನೋಡುತ್ತಿದ್ದಾಗ ದಾಳಿ ಮಾಡಿದ ಪೊಲೀಸರು ನಾಲ್ವರು ಮಹಿಳೆಯರು ಹಾಗೂ ನಾಲ್ವರು ಪುರುಷರನ್ನೊಳಗೊಂಡ 8 ಮಂದಿ ಕಳ್ಳರನ್ನು ಬಂಧಿಸಿ, ವಿಚಾರಣೆ ನಡೆಸಿದ್ದಾರೆ.

ಈ ಆರೋಪಿತರು ಬಿಜಾಪುರ ಜಿಲ್ಲೆಯ ತಾಂಡಾ ನಿವಾಸಿಗಳಾದ ಕವಿತಾ ಸಂಜೀವ್ ನಾಯ್ಕ, ಚಾಂದೂಬಾಯ್ ಗಣೇಶ ರಾತೋಡ್, ಶೀಲಾಬಾಯಿ ರಾಜು ರಾತೋಡ್, ಜನಾಬಾಯಿ ಪವಾರ್, ಸಂಜೀವ್ ನಾಯ್ಕ, ಗಣೇಶ ಭೀಮ್ ಸಿಂಗ್ ರಾತೋಡ್, ಕಿರಣ ತಾರಾಸಿಂಗ್ ನಾಯ್ಕ ಮತ್ತು ವಿನೋದ ಪವಾರ್ ಬಂಧಿತ ಆರೋಪಿಗಳಾಗಿದ್ದಾರೆ.

ವಾರದ ಹಿಂದೆಯೇ ಬಿಜಾಪುರದಿಂದ ಕುಮಟಾಕ್ಕೆ ಬಂದ ಈ ಕಳ್ಳರ ತಂಡ ಮೊದಲು ಎಲ್ಲ ಜ್ಯುವೆಲ್ಲರಿ ಶಾಫ್‌ಗಳನ್ನು ನೋಡಿಕೊಂಡು, ಎರಡು ತಂಡಗಳಾಗಿ ತೆರಳಿ, ಕೆಲ ಅಂಗಡಿಗಳಲ್ಲಿ ಚಿನ್ನಾಭರಣಗಳನ್ನು ಎಗರಿಸಲು ಪ್ರಯತ್ನಿಸಿ ವಿಫಲವಾಗಿದೆ. ಈ ಕಳ್ಳರ ವರ್ತನೆಯಿಂದ ಅನುಮಾನಗೊಂಡ ಚಿನ್ನಾಭರಣಗಳ ಅಂಗಡಿಗಳ ಮಾಲೀಕರು ತಮ್ಮ ವಾಟ್ಸಾಪ್ ಗ್ರೂಪ್‌ನಲ್ಲಿ ಈ ಮಾಹಿತಿಯನ್ನು ಹಂಚಿಕೊAಡು ಎಲ್ಲ ಅಂಗಡಿ ಮಾಲೀಕರಿಗೆ ಎಚ್ಚರಿಕೆ ನೀಡುವ ಜೊತೆಗೆ ಪೊಲೀಸರಿಗೂ ಮಾಹಿತಿ ನೀಡಿದ್ದರು. ತಕ್ಷಣ ಕಾರ್ಯ ಪ್ರವೃತ್ತರಾದ ಕುಮಟಾ ಪೊಲೀಸರು ಈ ಕಳ್ಳರನ್ನು ಹಿಡಿಯಲು ಜಾಲ ಬೀಸಿದ್ದರು. ಇದೇ ವೇಳೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಕಳ್ಳರ ತಂಡವನ್ನು ಹೆಡೆಮುರಿಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕಳ್ಳರ ತಂಡದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.

ವಿಸ್ಮಯ ನ್ಯೂಸ್, ಯೋಗೇಶ ಮಡಿವಾಳ. ಕುಮಟಾ

Back to top button