Important
Trending

ಅಂಗಡಿ ಬಳಿ ಕಣ್ಣುಕತ್ತಲೆ ಬಂದು ಕುಸಿದುಬಿದ್ದವ ಮತ್ತೆ ಕಣ್ಣು ತೆರಯಲೇ ಇಲ್ಲ

ಅಂಕೋಲಾ : ತನ್ನ ಅಂಗಡಿ ಬಳಿ ಇದ್ದ ವ್ಯಕ್ತಿಯೋರ್ವ ಕಣ್ಣು ಕತ್ತಲೆ ಬಂದ ಹಾಗೆ ಆಗಿದೆ ಎನ್ನುತ್ತಾ,ಕುಸಿದು ಬಿದ್ದವನನ್ನು ರಿಕ್ಷಾ ಮೂಲಕ,ಪಟ್ಟಣದ ಖಾಸಗಿ ಆಸ್ಪತ್ರೆಗೆ ಸಾಗಿಸಿ, ಅಲ್ಲಿಂದ ಸರಕಾರಿ ತಾಲೂಕಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆತರಲಾಗಿತ್ತಾದರೂ, ಆ ವೇಳೆಗಾಗಲೇ ಆತನ ಪ್ರಾಣಪಕ್ಷಿ ಹಾರಿ ಹೋಗಿದೆ ಎನ್ನಲಾಗಿದೆ.

ಹೊನ್ನೆಕೇರಿಯ ನಿಲೇಶ ಸುರೇಶ ನಾಯ್ಕ ಮೃತ ದುರ್ದೈಯಾಗಿದ್ದಾನೆ. ವಿಧಿಯಾಟ ಎಂಬಂತೆ ,ಮದುವೆಯಾಗಿ ಪುಟ್ಟ ಮಗು ಹೊಂದಿರುವ ಈತ, ಸುಖ ಸಂಸಾರದ ಕನಸು ಕಾಣುತ್ತಿರುವಾಗಲೇ, ಬಾರದ ಲೋಕಕ್ಕೆ ಪಯಣಿಸುವಂತಾಗಿದೆ.ಚಿಕ್ಕ ಪುಟ್ಟ ವ್ಯಾಪಾರ ವಹಿವಾಟು ಮಾಡಿಕೊಂಡು ತನ್ನ ಸಂಸಾರ ನಿರ್ವಹಣೆ ಮಾಡಿಕೊಂಡಿದ್ದ, ಮನೆ ಮಗ ನಿಲ್ಲದ ನೊಂದ ಕುಟುಂಬದಲ್ಲಿ ದುಃಖ ಅವರಿಸಿದಂತಿದೆ.

ನಿಲೇಶನ ಆಕಾಲಿಕ ಸಾವಿನ ಸುದ್ದಿ ತಿಳಿದ, ಮೃತನ ಗೆಳೆಯರು ಮತ್ತು ಗ್ರಾಮಸ್ಥರು ನೂರಾರು ಸಂಖ್ಯೆಯಲ್ಲಿ ಆಸ್ಪತ್ರೆ ಬಳಿ ಜಮಾಯಿಸಿ,ನಿಲೇಶನ ನಿಧನಕ್ಕೆ ಅತೀವ ಬೇಸರ ವ್ಯಕ್ತಪಡಿಸುತ್ತಿರುವುದು ಕಂಡು ಬಂತು. ಕಡಿಮೆ ರಕ್ತದೊತ್ತಡ, ಹೃದಯ ಸಂಬಂಧಿ ಆಘಾತ ಆತನ ಸಾವಿಗೆ ಕಾರಣವಾಗಿರಬಹುದು ಎನ್ನಲಾಗಿದ್ದು,ಸಂಬಂಧಿತ ವೈದ್ಯರಿಂದ ಸಾವಿನ ಕುರಿತು ನಿಖರ ಕಾರಣ ತಿಳಿದು ಬರಬೇಕಿದೆ.

ಒಟ್ಟಿನಲ್ಲಿ ನಿಲೇಶ ಅಕಾಲಿಕ ಸಾವು ಊರಿನಲ್ಲಿಯೂ ಶೋಕದ ಛಾಯೆ ಆವರಿಸಿದೆ. ವ್ಯಕ್ತಿ ಸಾವಿನ ಕುರಿತಂತೆ ಹೆಚ್ಚಿನ ಮತ್ತು ನಿಖರ ಮಾಹಿತಿಗಳು ತಿಳಿದು ಬರಬೇಕಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button