Follow Us On

WhatsApp Group
Important
Trending

ಕುಮಟಾದಲ್ಲಿ ಕೋವಿಡ್-19 ಲಸಿಕಾ ಕೇಂದ್ರದ ಉದ್ಘಾಟನೆ

ಲಸಿಕೆ ಪಡೆದ ಆರೋಗ್ಯ ಸಿಬ್ಬಂದಿ ಮತ್ತು ವೈದ್ಯರು
ವೈದ್ಯರು ಸೂಚಿಸಿದರೆ ನಾನು ಸಹ ಈ ಲಸಿಕೆ ತೆಗೆದುಕೊಳ್ಳಲು ಸಿದ್ಧವೆಂದ ಶಾಸಕರು

ಕುಮಟಾ: ತಾಲೂಕಿನ ಸರಕಾರಿ ಆಸ್ಪತ್ರೆಯಲ್ಲಿ ಇಂದು ಕೋವಿಡ್-19 ಲಸಿಕಾ ಕೇಂದ್ರದ ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕರಾದ ದಿನಕರ ಶೆಟ್ಟಿಯವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ಕರೋನಾ ಮಹಮಾರಿಯಿಂದಾಗಿ ಜನರು ಕಂಗಾಲಾಗಿರುವ ಸಂದರ್ಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಬಹಳಷ್ಠು ಮುತುವರ್ಜಿ ವಹಿಸಿದ ಕಾರಣದಿಂದಾಗಿ ನಮ್ಮ ದೇಶದಲ್ಲಿ ಕರೋನಾ ವೈರಸ್‌ನಿಂದಾಗಿ ಸಾವನ್ನಪ್ಪಿದವರ ಸಂಖ್ಯೆ ಬಹಳ ಕಡಿಮೆ ಎನ್ನಬಹುದಾಗಿದೆ. ಕೋವಿಡ್ ಲಸಿಕೆ ಕಂಡುಹಿಡಿಯುವ ಕುರಿತಾಗಿ ಜಗತ್ತಿನ ವಿವಿಧ ದೇಶಗಳು ಬಹಳಷ್ಟು ಪ್ರಯತ್ನ ನಡೆಸಿದೆ. ಆದರೆ ಯಾವ ದೇಶದವರಿಂದಲೂ ಅದು ಸಾಧ್ಯವಾಗಿರಲಿಲ್ಲ. ಇದೀಗ ನಮ್ಮ ಭಾರತ ದೇಶದಲ್ಲಿಯೇ ಕೋವಿಡ್ ಲಸಿಕೆ ಸಿದ್ಧಗೊಂಡಿರುವುದು ಬಹಳ ಹೆಮ್ಮೆಯ ವಿಷಯವಾಗಿದೆ. ಈ ಒಂದು ಲಸಿಕೆಯ ಕುರಿತಾಗಿ ನಮ್ಮ ವಿರೋದಿಗಳು ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿರುವುದು ಬಹಳ ವಿಷಾದದ ಸಂಗತಿಯಾಗಿದೆ. ಈ ಕೋವಿಡ್ ಲಸಿಕೆಯು ಬಹಳ ಉತ್ತಮವಾಗಿದ್ದು, ಇದರಿಂದಾಗಿ ಯಾವುದೇ ರೀತಿಯ ಅಡ್ಡಪರಿಣಾಮಗಳಾಗುವುದಿಲ್ಲ ಎಂಬ ಭರವಸೆ ನನಗಿದೆ. ವೈದ್ಯರು ಸೂಚಿಸಿದರೆ ನಾನು ಸಹ ಈ ಲಸಿಕೆ ತೆಗೆದುಕೊಳ್ಳಲು ಸಿದ್ಧನಿದ್ದೇನೆ ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಕುಮಟಾ ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳಾದ ಡಾ. ಗಣೇಶ ನಾಯ್ಕ ಅವರು ಮಾತನಾಡಿ, ಮೊದಲ ಹಂತದಲ್ಲಿ ಆರೋಗ್ಯ ಸಿಬ್ಬಂದಿಗಳಿಗೆ ಕೋವಿಡ್-19 ಲಸಿಕೆಯನ್ನು ನೀಡಬೆಕೆಂಬ ರಾಜ್ಯ ಮಟ್ಟದ ನಿರ್ದೆಶನದಂತೆ ಇಂದು ನಮ್ಮ ಕುಮಟಾ ಸರಕಾರಿ ಆಸ್ಪತ್ರೆಯಲ್ಲಿಯೂ ಸಹ ಕೋವಿಡ್ ಲಸಿಕೆ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಪುಣೆಯಲ್ಲಿ ಸಿದ್ಧಗೊಂಡಿರುವoತಹ ಕೋವಿಶೀಲ್ಡ್ ಎಂಬ ವ್ಯಾಕ್ಸಿನ್ ಅನ್ನು ನಮ್ಮ ಕುಮಟಾ ತಾಲೂಕಿಗೆ ಕಳುಹಿಸಿಕೊಡಲಾಗಿದೆ ಎನ್ನುತ್ತ ವ್ಯಾಕ್ಸಿನ್ ಕುರಿತಾದ ಸಂಕ್ಷಿಪ್ತ ಮಾಹಿತಿ ನೀಡಿದರು.

ಆರೋಗ್ಯ ಸಿಬ್ದಂದಿಗಳು ಸೇರಿದಂತೆ ಕುಮಟಾ ತಾಲೂಕಿನ ಸರಕಾರಿ ಆಸ್ಪತ್ರೆಯೆ ವೈದ್ಯರುಗಳು ಸಹ ಈ ಸಂದರ್ಭದಲ್ಲಿ ಕೋವಿಡ್-19 ಲಸಿಕೆಯನ್ನು ತೆಗೆದುಕೊಂಡರು. ಈ ವೇಳೆ ತಾಲೂಕಾ ಆರೋಗ್ಯಾಧಿಕಾರಿಗಳಾದ ಆಜ್ಞಾ ನಾಯ್ಕ, ಕುಮಟಾ ತಹಶೀಲ್ಧಾರ ಮೇಘರಾಜ ನಾಯ್ಕ, ಪುರಸಭಾ ಮುಖ್ಯಾಧಿಕಾರಿಗಳಾದ ಸುರೇಶ ಎಮ್.ಕೆ, ಪುರಸಭಾ ಅಧ್ಯಕ್ಷರಾದ ಮೋಹಿನಿ ಗೌಡ, ತಾಲೂಕಾ ಪಂಚಾಯತ ಅಧ್ಯಕ್ಷರಾದ ವಿಜಯಾ ಪಟಗಾರ, ಡಾ. ಶ್ರೀನಿವಾಸ ನಾಯಕ್, ಡಾ. ಪಾಂಡುರoಗ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.

ವಿಸ್ಮಯ ನ್ಯೂಸ್, ಯೋಗೇಶ ಮಡಿವಾಳ. ಕುಮಟಾ.

Back to top button