ಕೇವಲ ಆರು ಗಂಟೆಯಲ್ಲೇ ಕೊಲೆ ಆರೋಪಿಯ ಬಂಧನ

ಬನವಾಸಿ: ಕೇವಲ 6 ಗಂಟೆಯೊಳಗೆ ಕೊಲೆ ಮಾಡಿದ ಆರೋಪಿಯೋರ್ವನನ್ನು ಬಂಧಿಸುವಲ್ಲಿ ಬನವಾಸಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಶಿರಸಿಯ ಬದನಗೋಡ ಗ್ರಾಮ ಪಂಚಾಯತ ವ್ಯಾಪ್ತಿಯ ದನಗನಹಳ್ಳಿಯ ಕೋಟೆಕೊಪ್ಪದ ಅರಣ್ಯ ಪ್ರದೇಶದಲ್ಲಿ ವ್ಯಕ್ತಿಯೊಬ್ಬನ ಶವ ಕಂಡಿದ್ದು, ಇದನ್ನು ಸ್ಥಳೀಯರು ತಕ್ಷಣ ಪೊಲೀಸ್ ಠಾಣೆಗೆ ತಿಳಿಸಿದ್ದರು.

ಸ್ಥಳಕ್ಕಾಗಮಿಸಿದ ಬನವಾಸಿ ಪೊಲೀಸರು ಶವ ಪರೀಕ್ಷಿಸಿ ಮೆಲ್ನೋಟಕ್ಕೆ ಕೊಲೆ ಎಂದು ಸಂಶಯ ವ್ಯಕ್ತಪಡಿಸಿ ಸಾವನ್ನಪ್ಪಿದ ವ್ಯಕ್ತಿಯ ಚಹರೆಯನ್ನು ಪರೀಕ್ಷಿಸಿದಾಗ ಆತ ಮುಂಡಗೋಡ ತಾಲೂಕಿನ ಮಲ್ಲಪ್ಪ ಕೆಂಚಣ್ಣನವರ್ ಎಂದು ತಿಳಿದುಬಂದಿದೆ. ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡ ಪೊಲೀಸರು ಕುಟುಂಬಸ್ಥರನ್ನು ವಿಚಾರಣೆ ನಡೆಸಿದರು. ಕೆಲ ವಿಷಯ ಬೆಳಕಿಗೆ ಬಂದ ನಂತರ ಆರೋಪಿಯ ಬಂಧನಕ್ಕೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಅದೇ ರೀತಿ ಕೊಲೆಯಾದ ಕೇವಲ 6 ಗಂಟೆಯೊಳಗೆ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವಿಸ್ಮಯ ನ್ಯೂಸ್, ಶಿರಸಿ

Exit mobile version