ಪ್ರಕೃತಿಯ ಮಧ್ಯೆ ಕಂಗೊಳಿಸುತ್ತಿದೆ ನೈಸರ್ಗಿಕ ಸ್ಮಿಮ್ಮಿಂಗ್ ಫೂಲ್: ಮಳೆಗಾಲ ಬಂದ್ರೆ ಮೈದುಂಬಿ ಹರಿಯುತ್ತದೆ “ವಿಷ್ಣುತೀರ್ಥ”

ಕುಮಟಾ: ಇದೊಂದು ನೈಸರ್ಗಿಕ ಸ್ವಿಮಿಂಗ್ ಪೂಲ್.. ಕಾಡಿನ ಮಧ್ಯದಿಂದ ಹರಿಯುತ್ತಾ ಬರುವ ನೀರು,  ಒಂದು ಕಡೆಯಿಂದ ಕೆರೆಯನ್ನು ಸೇರಿ ಇನ್ನೊಂದು ಕಡೆ ಹರಿದುಹೊಗುತ್ತದೆ. ಇಲ್ಲಿ ಪರಿಶುದ್ಧ ನೀರು,‌ಪ್ರಶಾಂತ ವಾತಾವರಣ ಎಂಥವರನ್ನೂ ಆಕರ್ಷಿಸುತ್ತದೆ.

ಕುಮಟಾ ತಾಲೂಕಿನ ಚಿತ್ರಗಿಯ ವಿಷ್ಣುತಿರ್ಥವೆಂದರೆ ಚಿಕ್ಕ ಮಕ್ಕಳಿಂದ ಹಿಡಿದು ಬಹುತೇಕ ಎಲ್ಲರಿಗೂ ಬಹಳ ಅಚ್ಚು ಮೆಚ್ಚಾಗಿದ್ದು, ಈ ಒಂದು ಕೆರೆಯು ಮಳೆಗಾಲದ ಸಂದರ್ಭದಲ್ಲೊoದೆ ಅಲ್ಲದೆ ಎಲ್ಲಾ ಕಾಲದಲ್ಲೂ ಅತಿ ಶುದ್ದವಾದ ನೀರಿನಿಂದ ತುಂಬಿ ಹರಿಯುತ್ತದೆ. ಮಳೆಗಾಲ ಬಂತೆoದರೆ ಈ ಕೆರೆಯಲ್ಲಿ ಈಜುಗಾರದ್ದೆ ಹಾವಳಿಯಾಗಿದ್ದು, ತಾಲೂಕಿನ ವಿವಿದೆಲ್ಲೆಡೆಯಿಂದ ಈ ಕೇರೆಗೆ ಈಜುಪ್ರೀಯರು ಆಗಮಿಸಿ ಈಜು ಕಲಿಯುತ್ತಾರೆ.  

ಅದೆಷ್ಟೊ ಜನರು ಈ ಒಂದು ಕೆರೆಯಲ್ಲಿ ಈಜು ಕಲಿತು ಜಿಲ್ಲೆ, ರಾಜ್ಯ, ರಾಷ್ಟç ಮಟ್ಟದ ಈಜು ಸ್ಪರ್ದೆಯಲ್ಲಿ ಬಾಗವಹಿಸಿ ವಿಜೆತರಾಗಿದ್ದಾರೆ. ಅಲ್ಲದೆ ಈ ಕೆರೆಯಲ್ಲೂ ಸಹ ಮಳೆಗಾಲದ ಸಂದರ್ಭದಲ್ಲಿ ಈಜು ಸ್ಪರ್ದೆಗಳನ್ನ ಏರ್ಪಡಿಸಲಾಗುತ್ತದೆ. ಇದೀಗ ಜಿಲ್ಲೆಯಲ್ಲಿ ಮುಂಗಾರು ಅಬ್ಬರಿಸುತ್ತಿರುವ ಕಾರಣ ಇಲ್ಲಿನ ವಿಷ್ಣು ತೀರ್ಥವು ತುಂಬಿ ಹರಿಯಲಾರಂಭಿಸಿದ್ದು, ಇದು ಈಜು ಪ್ರಿಯರಿಗೆ ಒಂದು ರೀತಿಯ ಹಬ್ಬದಂತಾಗಿದೆ. ಇದೀಗ ಕುಮಟಾದ ವಿಷ್ಣುತೀರ್ಥವು ಈಜುಗರಿಂದ ತುಂಬಿ ತುಳುಕುತ್ತಿರುವ ದೃಷ್ಯ ಕಂಡುಬoದಿದೆ.

ಈ ಒಂದು ವಿಷ್ಟುತೀರ್ಥ ಕೆರೆಯು ಸಂಪೂರ್ಣವಾಗಿ ಶ್ರೀ ವೇಂಕಟ್ರಮಣ ದೇವಸ್ಥಾನದ ಆಡಳಿತಕ್ಕೆ ಒಳಪಟ್ಟಿದ್ದು, ವರ್ಷದ ವಿಶೇಷ ದಿನಗಳಲ್ಲಿ ಅನೇಕ ಧಾರ್ಮಿಕ ಕಾರ್ಯಕ್ರಮಗಳನ್ನು ಇಲ್ಲಿ ಹಮ್ಮಿಕೊಳ್ಳಲಾಗುತ್ತದೆ. ಅದೇ ರೀತಿ ಈಜುಗರಿಗೆ ಇಲ್ಲಿ ಉತ್ತಮ ವ್ಯವಸ್ಥೆ ಕಲ್ಪಿಸಲಾಗಿದ್ದು, ಈ ಒಂದು ವಿಷ್ಣುತೀರ್ಥವು ಕುಮಟಾದ ಸ್ವಿಮಿಂಗ್ ಪೂಲ್ ಎಂದೇ ಹೆಸರುವಾಸಿಯಾಗಿದೆ. ಅತಿ ಶುದ್ಧವಾದ ಬೆಟ್ಟದ ನೀರು ಒಂದು ಕಡೆಯಿಂದ ಕೆರೆಯನ್ನು ಸೇರಿ ಇನ್ನೊಂದು ಕಡೆ ಹರಿದುಹೊತ್ತದೆ. ಅಲ್ಲದೇ ಈಜುP ಕಲಿಯುವವರಿಗೂ ಅತ್ಯಂತ ಸೂಕ್ತ ಸ್ಥಳ ಇದಾಗಿದೆ.

ಈ ಸಂದರ್ಭದಲ್ಲಿ ಕಿಂಗ್ಸ್ ಕ್ರೆಡಿಟ್ ಸೌಹಾರ್ದ ಕೋ. ಲಿಮಿಟೆಡ್ ಕುಮಟಾ ಇದರ ಪ್ರಧಾನ ವ್ಯವಸ್ಥಾಪಕರಾದ ಗುರುಪ್ರಸಾದ ಕಾಮತ್ ಅವರು ನಮ್ಮ ವಿಸ್ಮಯ ಟಿ.ವಿ ಯೊಂದಿಗೆ ಮಾತನಾಡಿ, ನಾವು ಚಿಕ್ಕ ವಯಸ್ಸಿನಿಂದಲೂ ಈ ಒಂದು ಕೆರೆಯಲ್ಲಿ ಈಜುತ್ತಾ ಬಂದಿದ್ದು, ಇಂದು ಇಲ್ಲಿ ಈಜಲು ಬರುವವರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದೆ. ಮಕ್ಕಳಿಂದ ಹಿಡಿಯು ಪ್ರತಿಯೋರ್ವರಿಗೂ ಈಜಲೂ ಸೂಕ್ತವಾದ ಸ್ಥಳ ಇದಾಗಿದೆ ಎಂದು ಅಭಿಪ್ರಾಯಪಟ್ಟರು.

ಈ ವೇಳೆ ವಿಷ್ಣುತೀರ್ಥದಲ್ಲಿ ಈಜು ಕಲಿತಿರುವ ಮಕ್ಕಳು ಮಾತನಾಡಿ, ಈಜುವುದೆಂದರೆ ನಮಗೆಲ್ಲ ಅತ್ಯಂತರ ಖುಷಿಯ ಸಂಗತಿಯಾಗಿದ್ದು, ಪ್ರತಿ ವರ್ಷ ಮಳೆಗಾಲ ಪ್ರಾರಂಭವಾಗುವುದನ್ನೆ ಕಾಯುತ್ತಾ ಇರುತ್ತೆವೆ. ಮಳೆಗಾಲ ಪ್ರಾರಂಭವಾಗಿ ಇಲ್ಲಿನ ಕೆರೆ ತುಂಬುತ್ತಿದ್ದAತೆ ನಿತ್ಯವೂ ಈಜಲು ಬರುತ್ತೆವೆ ಎಂದರು.

ಈ ಸಂದರ್ಭದಲ್ಲಿ ಸ್ಥಳೀಯರಾದ ಕೃಷ್ಣಮೂರ್ತಿ ಉಪಾಧ್ಯಾಯ ಅವರು ಮಾತನಾಡಿ, ಬಾಲ್ಯದಿಂಲೂ ನಾವು ಈ ಈಜುಕೊಳದಲ್ಲಿ ಈಜು ಕಲಿತು, ಇವತ್ತಿಗೂ ಮಳೆಗಾಲ ಪ್ರಾರಂಭವಾಯಿತೆAದರೆ ಪ್ರತಿ ನಿತ್ಯ ಈಜಲು ಆಗಮಿಸುತ್ತೆವೆ. ಮೊದಲು ಈ ಈಜುಕೊಳಕ್ಕೆ ಆಗಮಿಸುವವರ ಸಂಖ್ಯೆ ಕಡಿಮೆ ಇತ್ತು. ಆದರೆ ಇತ್ತಿಚಿನ ದಿನಗಳಲ್ಲಿ ಈಜುಗರಿಂದ ತುಂಬಿ ತುಳುಕುತ್ತಿರುತ್ತದೆ ಎಂದರು.

ಈ ವೇಳೆ ಕುಮಟಾದವರೇ ಆದ ಪ್ರಣವ್ ಮಣಕಿಕರ್ ಅವರು ಮಾತನಾಡಿ, ವಿಷ್ಣು ತೀರ್ಥವು ಕುಮಟಾದ ಸುಪ್ರಸಿದ್ದ ಸ್ಥಳವಾಗಿದ್ದು, ನಾವು ಈ ಸ್ಥಳದಲ್ಲಿ ಈಜು ಕಲಿತಿರುವುದಕ್ಕೆ ಬಹಳ ಹೆಮ್ಮೆಯಿದೆ ಎಂದರು.

ವಿಸ್ಮಯ ನ್ಯೂಸ್. ಯೋಗೇಶ ಮಡಿವಾಳ. ಕುಮಟಾ.

Exit mobile version