ಹಿಟ್​ ಆ್ಯಂಡ್ ರನ್ : ಸ್ಥಳದಲ್ಲೇ ಬೈಕ್ ಸವಾರ ಸಾವು

ಅಂಕೋಲಾ : ಅಪರಿಚಿತ ವಾಹನ ಒಂದು ದ್ವಿಚಕ್ರ ವಾಹನ ಸವಾರನಿಗೆ ಅಪಘಾತ ಪಡಿಸಿದ ಪರಿಣಾಮ, ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ದುರ್ಘಟನೆ, ತಾಲೂಕಿನಲ್ಲಿ ಹಾದು ಹೋಗಿರುವ ರಾ ಹೆ 63 ರ ಅಗಸೂರು ಬಳಿ ಪೆಟ್ರೋಲ್ ಪಂಪ್ ಹತ್ತಿರ ಸಂಭವಿಸಿದೆ. ಹೊನ್ನಳ್ಳಿ ಬಳಿ ಟೈಯರ್ ರಿಪೇರಿ ಅಂಗಡಿಯೊಂದರಲ್ಲಿ ಕೆಲಸಕ್ಕಿದ್ದ ಬಿಹಾರ ಮೂಲದ ಸಮೀರ ಎಂಬಾತನೇ ಮೃತ ದುರ್ದೈವಿ ಎನ್ನಲಾಗಿದೆ.

ನೇಮಕಾತಿ: ಭಾರತೀಯ ರೈಲ್ವೆಯಲ್ಲಿ ಬೃಹತ್ ಉದ್ಯೋಗಾವಕಾಶ: 3445 ಹುದ್ದೆಗಳು

ಈತ ಅಂಕೋಲಾ ಕಡೆ ಬೈಕ್ ಚಲಾಯಿಸಿಕೊಂಡು ಬರುತ್ತಿದ್ದಾಗ, ಅಪರಿಚಿತ ವಾಹನ ಒಂದು ಈತನಿಗೆ ಡಿಕ್ಕಿ ಪಡಿಸಿದ ತೀವೃತೆಗೆ, ಬೈಕ್ ಸವಾರ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಸಿಪಿಐ ಚಂದ್ರಶೇಖರ ಮಠಪತಿ,ಸಂಚಾರ ವಿಭಾಗದ ಪಿಎಸ್ಐ ಸುನೀಲ ಹುಲ್ಲೊಳ್ಳಿ,ಸಿಬ್ಬಂದಿ ಗುರು ಸ್ಥಳ ಪರಿಶೀಲಿಸಿ ಕಾನೂನು ಕ್ರಮ ಮುಂದುವರಿಸಿದ್ದಾರೆ.

ಸಾಮಾಜಿಕ ಕಾರ್ಯಕರ್ತರಾದ ವಿಜಯಕುಮಾರ್ ನಾಯ್ಕ, ಬೊಮ್ಮಯ್ಯ ನಾಯ್ಕ ಪೊಲೀಸ್ ಇಲಾಖೆಯ ಮತ್ತು ಸ್ಥಳೀಯರ ಸಹಕಾರದಲ್ಲಿ ಮೃತ ದೇಹವನ್ನು ತಾಲೂಕಾಸ್ಪತ್ರೆ ಶವಾಗಾರಕ್ಕೆ ಸಾಗಿಸಲು ಸಹಕರಿಸಿದರು. ಅಪಘಾತದ ಫಟನೆಯ ಕುರಿತಂತೆ ನಿಖರ ಮತ್ತು ಹೆಚ್ಚಿನ ಮಾಹಿತಿಗಳು ತಿಳಿದು ಬರಬೇಕಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version