ಶಿರೂರು ಗುಡ್ಡ ಕುಸಿತ ದುರಂತ: ಕೊನೆಗೂ ಪತ್ತೆಯಾಯಿತೇ ಅರ್ಜುನ್ ಲಾರಿ ?

ಅಂಕೋಲಾ : ಶಿರೂರು ಗುಡ್ಡ ಕುಸಿತ ದುರಂತದ ಬಳಿಕ ಗಂಗಾವಳಿ ನದಿಯಲ್ಲಿ ನಡೆಯುತ್ತಿರುವ ಮೂರನೇ ಹಂತದ ಶೋಧ ಕಾರ್ಯಾಚರಣೆ ಬುಧವಾರ 6 ನೇ ದಿನಕ್ಕೆ ತಲುಪಿದ್ದು. ಈ ದಿನ ಕಾರ್ಯಾಚರಣೆ ಮಹತ್ತ್ವ ಹೆಚ್ಚಲಿದೆಯೇ ಕಾದು ನೋಡುವಂತಾಗಿದೆ.ಕಾರ್ಯಾಚರಣೆ ಗುತ್ತಿಗೆದಾರ ಅಭಿನೇಷಿಯ ಕಂಪನಿ ಕರೆಸಿಕೊಂಡಿರುವ ಮುಳುಗು ತಜ್ಞರು ನೀರಿನಲ್ಲಿ ಏನೋ ಹುದುಗಿರುವದನ್ನು ಪತ್ತೆ ಹಚ್ಚಿ ಹಗ್ಗ ಕಟ್ಟಿ ಬಂದಿದ್ದರು.ಈಗ ಅದನ್ನು ಕ್ರೇನ್ ಮೂಲಕ ಹೊರತೆಗೆಯ ಬೇಕಿದ್ದು ಅದು ಅರ್ಜುನ್ ಲಾರಿಯಾಗಿರಬಹುದೇ ಎಂದು ಹಲವರು ಕುತೂಹಲದ ಕಣ್ಣು ಬಿಟ್ಟು ಕಾಯುವಂತಾಗಿದೆ. ನದಿಯಲ್ಲಿ ದೊಡ್ಡ ದೊಡ್ಡ ಕಲ್ಲು ಬಂಡೆಗಳು ,ಮಣ್ಣಿನ ರಾಶಿ ರಾಶಿ ಜರಿದು ಬಿದ್ದಿರುವುದು.ಆಗಾಗ ಸುರಿವ ಮಳೆಯಿಂದ ಕಾರ್ಯಾಚರಣೆಯ ಪ್ರಗತಿಗೆ ತೊಡಕಾಗುತ್ತದೆ.

ನಗರವ್ಯಾಪ್ತಿಯಲ್ಲಿದ್ದರು ಇಲ್ಲಿ ಕಂಬಳಿ ಜೋಲಿಯೇ ಆ್ಯಂಬುಲೆನ್ಸ್! ಮರಿಚೀಕೆಯಾಗಿದೆ ಮೂಲಸೌಕರ್ಯ

ಆದರೂ ಮತ್ತೆ ನಿರೀಕ್ಷೆಯ ಕಣ್ಣುಗಳಿಂದಲೇ ಮುಂದಿನ ಕಾರ್ಯಾಚರಣೆಯನ್ನು ಕಾದು ನೋಡುವಂತಾಗಿದೆ. ಕಳೆದ 3-4 ದಿನಗಳಲ್ಲಿ ಗ್ಯಾಸ್ ಟ್ಯಾಂಕರ್ ವಾಹನದ ಫ್ರಂಟ್ ಎಕ್ಸೆಲ್, ಇಂಜಿನ್, ನಾಲ್ಕು ಚಕ್ರಗಳ ಸಮೇತ ಹೌಜಿಂಗ್ ಮತ್ತಿತರ ಬಿಡಿ ಭಾಗಗಳು ಪತ್ತೆಯಾಗಿದ್ದವಾದರೂ, ದೇಶದ ಕುತೂಹಲ ಕೆರಳಿಸಿರುವ ಕೇರಳ ಮೂಲದ ಅರ್ಜುನ್ ಲಾರಿ ಪತ್ತೆಯಾಗಿರಲಿಲ್ಲ. ಈ ನಡುವೆ ಡ್ರೆಜ್ಜರ್ ಯಂತ್ರದ ಮೂಲಕ ಸಿ ಪಾಯಿಂಟ್ ಸ್ಥಳದಲ್ಲಿ ಹುಡುಕಾಟ ನಡೆಸುತ್ತಿದ್ದ ಸಂದರ್ಭದಲ್ಲಿ ಕೇರಳದ ಅರ್ಜುನ್ ಚಲಾಯಿಸುತ್ತಿದ್ದ ಭಾರತ ಬೆಂಜ್ ಲಾರಿಯ ಕ್ರಾಶ್ ಗಾರ್ಡ್ ದೊರಕಿತ್ತು ಎನ್ನಲಾಗಿತ್ತು.

ಮೊದಲ ಹಂತದ ಕಾರ್ಯಾಚರಣೆ ಸಂದರ್ಭದಲ್ಲಿ ರಾಡಾರ್ ತಂತ್ರಜ್ಞಾನದ ಮೂಲಕ ನಾಲ್ಕು ಪಾಯಿಂಟ್ ಗಳನ್ನು ಗುರುತಿಸಿ ನಾಲ್ಕನೇ ಪಾಯಿಂಟ್ ಗುರುತಿಸಿರುವ ಸ್ಥಳದಲ್ಲಿ ಕೇರಳದ ಲಾರಿ ಇರುವ ಸಾಧ್ಯತೆ ಕುರಿತು ಅಂದಾಜಿಸಲಾಗಿತ್ತು ಇದೀಗ ಅದೇ ಸ್ಥಳದಲ್ಲಿ ಲಾರಿಯ ಬಿಡಿಭಾಗ ಪತ್ತೆಯಾಗಿದೆ.

ವಿಶ್ರಾಂತ ಸೇನಾಧಿಕಾರಿ ಮೇಜರ್ ಜನರಲ್ ಇಂದ್ರಬಾಲನ್ ಅವರ ಸೇವೆಯನ್ನು ಮತ್ತೆ ಪಡೆಯಲಾಗಿದ್ದು, ಶಾಸಕ ಸತೀಶ ಸೈಲ್ ಮತ್ತು ಆಡಳಿತ ವ್ಯವಸ್ಥೆಯ ವಿಶೇಷ ಪ್ರಯತ್ನ ಹಾಗೂ ವಿನಂತಿ ಮೇರೆಗೆ,ಅವರು ದೆಹಲಿಯಿಂದ ಅಂಕೋಲಾದ ಶಿರೂರು ಘಟನಾ ಸ್ಥಳಕ್ಕೆ ಮತ್ತೆ ಬಂದು ಹೋಗಿದ್ದಾರೆ. ಕಾರ್ಯಾಚರಣೆ ಸಂದರ್ಭದಲ್ಲಿ ಹಾಜರಿದ್ದು ಗುರುತಿಸಿರುವ ನಾಲ್ಕನೇ ಪಾಯಿಂಟ್ ನಲ್ಲಿ ನೀರಿನ ಆಳದಲ್ಲಿ ಲಾರಿ ಇದ್ದು ಅದರ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಮಣ್ಣು ಬಿದ್ದಿರುವ ಸಾಧ್ಯತೆ ಹಿನ್ನಲೆಯಲ್ಲಿ, ಮಣ್ಣು ತೆರುವು ಮಾಡಿ ಲಾರಿ ಮೇಲೆಕ್ಕೆ ಎತ್ತಬೇಕಾಗ ಬಹುದು ಎನ್ನಲಾಗುತ್ತಿತ್ತು.

ಡ್ರೆಜ್ಜಿಂಗ್ ಟೀಮ್ ನೊಂದಿಗೆ ಬಂದಿರುವ ವಿಶೇಷ ಮುಳುಗು ತಜ್ಞರು ಕಳೆದ 3-4 ದಿನಗಳಲ್ಲಿ ಗ್ಯಾಸ್ ಟ್ಯಾಂಕರ್ ಲಾರಿಯ ಇಂಜಿನ್,4 ಚಕ್ರಗಳುಳ್ಳ ಹೌಜಿಂಗ್,ಡ್ರೈವರ್ ಕ್ಯಾಬಿನ್ ಮತ್ತಿತರ ಬಿಡಿ ಭಾಗಗಳನ್ನು ಪತ್ತೆ ಹಚ್ಚಿ ತಮ್ಮ ಸಾಮರ್ಥ್ಯ ತೋರ್ಪಡಿಸಿದ್ದಾರೆ, ಮಳೆ ಮತ್ತಿತರ ಕಾರಣಗಳಿಂದ ನೀರಿನ ಹರಿವಿನ ವೇಗ ಮತ್ತು ರಾಡಿ ಬಣ್ಣದಿಂದ ಕಾರ್ಯಾಚರಣೆಗೆ ಕೊಂಚ ಹಿನ್ನಡೆಯಾದಂತಿತ್ತು. ಇದೀಗ ಶೋಧ ಕಾರ್ಯಚರಣೆ ವೇಳೆ ಅರ್ಜುನ್ ಲಾರಿ,ಪತ್ತೆಯಾದರೆ ಕಾರ್ಯಾಚರಣೆ ಮಹತ್ವಪೂರ್ಣ ಹಂತ ತಲುಪಲಿದೆ.

ಆದರೂ ಸ್ಥಳೀಯರಾದ ಜಗನ್ನಾಥ ನಾಯ್ಕ ಮತ್ತು ಲೊಕೇಶ ನಾಯ್ಕ ಪತ್ತೆ ಸಾಧ್ಯವೇ ಎಂಬ ಸವಾಲೂ ಇದ್ದು ,ಕಾರ್ಯಾಚರಣೆ ಫಲಿತಾಂಶವನ್ನು ಮತ್ತೆ ಮುಂದುವರಿಸಿ,ಹೊಸ ನಿರೀಕ್ಷೆಗಳೊಂದಿಗೆ ಕಾದು ನೋಡುವಂತಾಗಿದೆ. ಇದೇ ವೇಳೆ ಗ್ಯಾಸ್ ಟ್ಯಾಂಕರ್ ನ ನಾನ ಬಿಡಿ ಭಾಗಗಳು ಈಗಾಗಲೇ ಪತ್ತೆಯಾದಂತಿತ್ತು,ಈಗ ದೊರೆಯಲಿರುವ ಭಾರಿ ಮೆಟಲ್ ಅಂಶ ಗ್ಯಾಸ್ ಟ್ಯಾಂಕರ್ ನ ಚೆಸ್ ಮತ್ತಿತರ ಭಾಗಗಳು ಆಗಿರುವ ಸಾಧ್ಯತೆಗಳು ಇವೆ ಎನ್ನಲಾಗಿದ್ದು, ನದಿಯಾಳದಲ್ಲಿ ಅಡಗಿರುವ ರಹಸ್ಯ ಪೂರ್ಣ ಪ್ರಮಾಣದ ಕಾರ್ಯಾಚರಣೆ ಬಳಿಕ ಹೊರ ಬರಬೇಕಿದ್ದು, ಈ ಕುರಿತು ಜಿಲ್ಲಾಡಳಿತ ಮತ್ತು ಕಾರ್ಯಾಚರಣೆಯ ವಿಶೇಷ ನೇತೃತ್ವ ಹಾಗೂ ಕಾಳಜಿ ಮತ್ತು ಜವಾಬ್ದಾರಿ ನಿಭಾಯಿಸುತ್ತ, ನಿರಂತರ ಭೇಟಿ ಹಾಗೂ ಮಾರ್ಗದರ್ಶನ ನೀಡುತ್ತಿರುವ ಶಾಸಕ ಸತೀಶ ಸೈಲ್ ಹಾಗೂ ಸಂಬಂಧಿತ ಜಿಲ್ಲಾಡಳಿತದಿಂದ ಅಧಿಕೃತವಾಗಿ ತಿಳಿದು ಬರಬೇಕಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version