ಬೈಕ್ ಕಳ್ಳತನ : ಆರೋಪಿಯ ಬಂಧನ

ಯಲ್ಲಾಪುರ: ಮನೆ ಮುಂದೆ ನಿಲ್ಲಿಸಿಟ್ಟ ಬೈಕ್ ಕದ್ದೊಯ್ದ ಪ್ರಕರಣದಲ್ಲಿ ತಾಲೂಕಿನ ಜಡಗಿನಕೊಪ್ಪಾದ ಫಿಲಿಪ್ ಕೃಷ್ಣ ಸಿದ್ದಿ ಎಂಬಾತನನ್ನು ಯಲ್ಲಾಪುರ ಪೊಲೀಸರು ಬಂಧಿಸಿ ಆತ ಲಪಟಾಯಿಸಿದ್ದ ಮೂರು ಬೈಕ್‌ಗಳನ್ನು ಜಪ್ತ ಮಾಡಿದ್ದಾರೆ. ತನ್ನ ಬೈಕ್ ಕಳುವಾಗಿದೆ ಎಂದು ಮಜ್ಜಿಗೆ ಹಳ್ಳದ ಲಕ್ಷ್ಮಣ ಗೊಯಿಪಡೆ ಎಂಬವರು ದಾಖಲಿಸಿದ್ದ ದೂರಿನ ಮೇರೆಗೆ ತನಿಖೆ ಕೈಗೊಂಡಿದ್ದ ಪೊಲೀಸರು ಆರೋಪಿಯು ಮತ್ತೂ ಎರಡು ಕಡೆ ಬೈಕ್ ಕದ್ದುದನ್ನೂ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಫಿಲಿಪ್ ಸಿದ್ದಿ ಈತನ ಮೇಲೆ ದರೋಡೆ, ಅಡಕೆ ಕಳುವು, ಪೋಕ್ಸೋ ಮೊದಲಾದ 10 ಕ್ಕೂ ಹೆಚ್ಚು ಪ್ರಕರಣಗಳಿವೆ ಎಂದು ಹೇಳಲಾಗಿದೆ.

ವಿಸ್ಮಯ ನ್ಯೂಸ್, ಯಲ್ಲಾಪುರ

Exit mobile version