ಮೀನಿನ ವಿಷ ತಗುಲಿ ಚಿಕಿತ್ಸೆ ಫಲಿಸದೆ ಮೀನುಗಾರ ಸಾವು

ಕಾರವಾರ: ಪಾತಿ ದೋಣಿಯಲ್ಲಿ ಮೀನುಗಾರಿಕೆ ತೆರಳಿದ ಮೀನುಗಾರನಿಗೆ ಮೀನಿನ ವಿಷ ತಗುಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ ಘಟನೆ ಕಾರವಾರದಲ್ಲಿ ನಡೆದಿದೆ. ಕಾರವಾರ ದೇವಭಾಗದ ನರಸಿಂಹವಾಡದಲ್ಲಿ ವಾಸವಿದ್ದ ಕೃಷ್ಣಾ ಸೈರು ಕಿಲೋಸ್ಕರ್ ಎಂಬತ ಮೀನು ಹಿಡಿಯುವದಕ್ಕಾಗಿ ಚಿಕ್ಕದಾದ ಪಾತಿ ದೋಣಿಯಲ್ಲಿ ಅರಬ್ಬಿ ಸಮುದ್ರಕ್ಕೆ ತೆರಳಿದ್ದ. ಮೀನುಗಾರಿಕೆ ಮುಗಿಸಿ ದಡಕ್ಕೆ ಹಿಂತಿರುಗಿದ ಈತನಿಗೆ ಬಲೆಯಲ್ಲಿ ಜಲ್ಲಿ ಫಿಶ್ ಕಾಣಿಸಿದ್ದು ಅದನ್ನು ಬಲೆಯಿಂದ ತೆಗೆದು ಹೊರಬಿಟ್ಟಿದ್ದ. ಆದರೆ ಆ ಮೀನನ್ನು ಬಲೆಯಿಂದ ಹೊರ ತೆಗೆಯುವಾಗ ಮೀನಿನ ಕೆಲ ಅಂಗಾoಗಗಳು ಆತನ ಮೈ ಹಾಗೂ ಕಣ್ಣಿಗೆ ತಾಗಿದ್ದವು. ತಕ್ಷಣ ಆತನನ್ನು ಕಾರವಾರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸವನ್ನಪ್ಪಿದ್ದಾನೆ.

ವಿಸ್ಮಯ ನ್ಯೂಸ್, ಕಾರವಾರ

Exit mobile version