Follow Us On

Google News
Important
Trending

ಭಾರಿ ಪ್ರಮಾಣದಲ್ಲಿ ಗುಡ್ಡ ಕುಸಿತ ; ಹಲವರು ದುರ್ಮರಣ? ನದಿಯಲ್ಲಿ ಕೊಚ್ಚಿ ಹೋದ ಟ್ಯಾಂಕರ್: ಹೆದ್ದಾರಿ ಅಂಚಿನ ಟೀ ಸ್ಟಾಲ್, ಪಕ್ಕದ ತೀರದ ಮನೆ ನೆಲಸಮ

ಪ್ರಾಣಾಪಾಯ ಸಾಧ್ಯತೆ : ಅಂಕೋಲಾ ಹೆದ್ದಾರಿ ಸಂಚಾರ ಬಂದ್

  • ಇತ್ತಿಚಿಗೆ ಬಂದ ಸುದ್ದಿ
  • ಘಟನೆಯಲ್ಲಿ 7 ಮಂದಿ ಸಾವು
  • ಮಾಹಿತಿ ನೀಡಿದ ಅಧಿಕಾರಿಗಳು, ಸಂಸದರು
  • ಮುoದುವರಿದ ರಕ್ಷಣಾ ಕಾರ್ಯಾಚರಣೆ

ಅಂಕೋಲಾ : ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆ ಹಾಗೂ ಚತುಷ್ಪತ ಹೆದ್ದಾರಿ ಕಾಮಗಾರಿ ಗುತ್ತಿಗೆ ಪಡೆದಿರುವ ಆಯ್ ಆರ್ ಬಿ ಅವೈಜ್ಞಾನಿಕ ಮತ್ತು ಅಪೂರ್ಣ ಕಾಮಗಾರಿಯಿಂದ, ರಾಷ್ಟ್ರೀಯ ಹೆದ್ದಾರಿ 66 ರ ಅಂಕೋಲಾ ಕುಮಟಾ ಮಾರ್ಗ ಮಧ್ಯೆ ಶಿರೂರು ಬೊಮ್ಮಯ್ಯ ದೇವಸ್ಥಾನದ ಬಳಿ ಭಾರಿ ಪ್ರಮಾಣದ ಗುಡ್ಡ ಕುಸಿತವಾಗಿದ್ದು, ಗುಡ್ಡ ಕುಸಿದ ಪರಿಣಾಮ ಹೆದ್ದಾರಿ ಅಂಚಿನ ಟೀ ಸ್ಟಾಲ್ ಮತ್ತಿತರ ಸಣ್ಣಪುಟ್ಟ ಅಂಗಡಿಗಳು ಸಂಪೂರ್ಣ ಸಂಪೂರ್ಣ ಹಾನಿಯಾಗಿದೆ . ಘಟನೆಯಲ್ಲಿ ಹಲವರು ಮಣ್ಣಿನಡಿ ಸಿಲುಕಿ ಸಾವನ್ನಪ್ಪಿದ್ದಾರೆ ಎನ್ನಲಾಗುತ್ತಿದೆ. ಘಟನೆ ಕುರಿತು ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ.

ಗುಡ್ಡ ಕುಸಿತ ರಬಸಕ್ಕೆ ಹೆದ್ದಾರಿ ಅಂಚಿಗೆ ನಿಲ್ಲಿಸಿಟ್ಟ ಗ್ಯಾಸ್ ಟ್ಯಾಂಕರ್ ವಾಹನ,ಗಂಗಾವಳಿ ನದಿ ನೀರಿನಲ್ಲಿ ಕೊಚ್ಚಿ ಹೋಗಿದೆ. ಲಾರಿ ಮತ್ತಿತರ ವಾಹನಗಳು ಮಣ್ಣಿನಡಿ ಸಿಲುಕಿಕೊಂಡಿವೆ . ಒಮ್ಮೆಲೆ ಗುಡ್ಡ ಕುಸಿದು ಮಣ್ಣು ನದಿಯಲ್ಲಿ ಜೋರಾಗಿ ಜರಿದ ಪರಿಣಾಮ ಗಂಗಾವಳಿ ನದಿ ಪಾತ್ರದ ಆಚೆ ದಡದ ಮನೆಯೂ ಕೊಚ್ಚಿಹೋಗಿದೆ ಎನ್ನಲಾಗಿದ್ದು,ಹೆದ್ದಾರಿ ಅಂಚಿಗಿರುವ ಟೀ ಸ್ಟಾಲ್ ,ವಾಹನಗಳಲ್ಲಿ ಎಷ್ಟು ಜನರಿದ್ದರು?ಎಲ್ಲರೂ ಪ್ರಾಣಪಾಯದಿಂದ ಪಾರಾಗಿದ್ದಾರೆಯೇ ? ಕೆಲ ಜೀವ ಹಾನಿಯಾದರೂ ಸಂಭವಿಸಿರಬಹುದು ಎನ್ನುತ್ತಾರೆ ಸ್ಥಳೀಯರು

ಪೊಲೀಸ್ ಅಗ್ನಿ ಶಾಮಕ,ಎನ್‌ಹೆಚ್ ಎಐ ಸುರಕ್ಷತಾ ಅಂಬುಲೆನ್ಸ್ ಮತ್ತಿತರ ಸ್ಥಳದಲ್ಲಿ ಬಿಡು ಬಿಟ್ಟಿದ್ದಾರೆ. ಬೆಂಗಳೂರಿನಲ್ಲಿರುವ ಶಾಸಕ ಸತೀಶ್ ಸೈಲ್ ವಿಷಯ ತಿಳಿದು,ಘಟನೆ ಕುರಿತು ತೀವ್ರ ಬೇಸರ ವ್ಯಕ್ತಪಡಿಸಿ,ಮಧ್ಯಾಹ್ನದೊಳಗೆ ಅಂಕೋಲಾಕ್ಕೆ ಬರುವುದಾಗಿ ತಿಳಿಸಿ, ಮತ್ತಷ್ಟು ಗುಡ್ಡ ಕುಸಿವ ಭೀತಿ ಇರುವುದರಿಂದ,ಸಂಬಂಧಿತ ಅಧಿಕಾರಿಗಳಿಗೆ ಫೋನ್ ಕರೆಯ ಮೂಲಕ ಮಾತನಾಡಿ,ಸ್ಥಳೀಯರ ಹಾಗೂ ಹೆದ್ದಾರಿ ಸಂಚರಿಗಳ ಸುರಕ್ಷತೆಗೆ ಒತ್ತು ನೀಡುವಂತೆ ತಿಳಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಬಂದಾಗಿದ್ದು,ಹೆದ್ದಾರಿ ಎರಡು ಕಡೆ ವಾಹನಗಳು ಸಾಲುಮಟ್ಟಿ ನಿಂತಿವೆ. ಗುಡ್ಡ ಕುಸಿತದಿಂದ ಪ್ರಾಣ ಹಾನಿ ಮತ್ತಿತರ ಹಾನಿಯಾಗಿರುವ ಸಾಧ್ಯತೆ ಇದ್ದು ಹೆಚ್ಚಿನ ವಿವರ ತಿಳಿದು ಬರಬೇಕಿದೆ. ಘಟನೆ ಕುರಿತು ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ.

ವಿಸ್ಮಯ ನ್ಯೂಸ್ ವಿಲ್ಲಾಸ್ ನಾಯಕ ಅಂಕೋಲಾ

Back to top button