Follow Us On

Google News
Important
Trending

ಕುಮಟಾ ಶಿರಸಿ ರಸ್ತೆಯಲ್ಲಿ ಸಂಚಾರ ಯಾವಾಗ ಆರಂಭ? ಪರ್ಯಾಯ ಮಾರ್ಗವೇನು?

ಕಾರವಾರ: ಶಿರಸಿ ಕುಮಟಾ ರಾಷ್ಟ್ರೀಯ ಹೆದ್ದಾರಿಯ ದೇವಿಮನೆ ಮತ್ತು ರಾಗಿಹೊಸಳ್ಳಿಯ ಮಧ್ಯೆ ಭೂಕುಸಿತವಾಗಿದ್ದು, ಇನ್ನು ಸಂಚಾರ ಆರಂಭವಾಗಿಲ್ಲ. ರಸ್ತೆಯ ಮೇಲೆ ಬಿದ್ದಿರುವ ಮಣ್ಣು ಮತ್ತು ಮರ-ಗಿಡಗಳನ್ನು ತೆರುವುಗೊಳಿಸುವ ಕಾರ್ಯ ಪ್ರಗತಿಯಲ್ಲಿದೆ. ಕೆಲವೆಡೆ ಸಣ್ಣಪುಟ್ಟ ಕುಸಿತ ಮುಂದುವರಿದಿದೆ. ಹೀಗಾಗಿ ಜುಲೈ 18ರ ವರೆಗೂ ತೆರವು ಕಾರ್ಯಚರಣೆ ಮುಂದುವರಿಯಲಿದೆ ಎನ್ನಲಾಗಿದೆ.

ಅಂಕೋಲಾ ಶಿರೂರು ಬಳಿ ಮತ್ತೆ ಗುಡ್ಡ ಕುಸಿವ ಆತಂಕ ! ಅಲ್ಲಲ್ಲಿ ಬಿರುಕು? ಇನ್ನೆಷ್ಟು ದಿನ ಸಂಚಾರ ಬಂದ್?

ಈ ಎಲ್ಲಾ ಕಾರಣಗಳಿಂದ ಸಾರ್ವಜನಿಕರಿಗೆ ಪರ್ಯಾಯ ಮಾರ್ಗ ಸೂಚಿಸಲಾಗಿದೆ. ಶಿರಸಿ ಯಲ್ಲಾಪುರ ಮಾರ್ಗವಾಗಿ ಕುಮಟಾ- ಅಂಕೋಲ- ಕಾರವಾರಕ್ಕೆ ಸಂಚರಿಸಬಹುದಾಗಿದೆ. ಶಿರಸಿ ಶಿವಳ್ಳಿ ಹೆಗಡೆಕಟ್ಟಾ ಯಾಣ ಮಾರ್ಗವಾಗಿ ಕುಮಟಾ-ಅಂಕೋಲ-ಕಾರವಾರಕ್ಕೆ ತೆರಳಬಹುದಾಗಿದೆ. ಶಿರಸಿಯಿಂದ ಸಿದ್ದಾಪುರ ಮಾರ್ಗವಾಗಿ ಕುಮಟಾ- ಬಾಡಾಳ್ ಮಾರ್ಗವಾಗಿ ಸಂಚರಿಸಬಹುದಾಗಿದೆ.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Back to top button