Join Our

WhatsApp Group
Important
Trending

ಶಿರಸಿಯಲ್ಲಿ ಸದ್ದು ಮಾಡಿದ ಗಾಂಜಾ ನಶೆ

  • 2 ಕೆ.ಜಿ ಗಾಂಜಾ ವಶ
  • ಆರೋಪಿಯ ಬಂಧನ

ಶಿರಸಿ: ಸ್ಯಾಂಡಲ್‌ವುಡ್ ನಲ್ಲಿ ಗಂಜಾನಶೆ ಸದ್ದು ಮಾಡುತ್ತಿರುವ ಬೆನ್ನಲ್ಲೆ ಶಿರಸಿಯಲ್ಲೂ ಗಾಂಜಾ ಸದ್ದು ಮಾಡುತ್ತಿದೆ. ಅಂಬಾಗಿರಿ ಕಲ್ಕುಣಿಯ ರಸ್ತೆಯ ಅರಣ್ಯ ಪ್ರದೇಶದಲ್ಲಿ ದಾಳಿ ನಡೆಸಿದ ಪೊಲೀಸರು ಎರಡುವರೆ ಕೆಜಿಗೂ ಅಧಿಕ ಗಾಂಜಾ ಪದಾರ್ಥ ವಶಪಡಿಸಿಕೊಂಡಿದ್ದಾರೆ.

ಈ ವೇಳೆ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಹಲವು ಮಹತ್ವದ ಸುಳಿವು ಲಭ್ಯವಾಗಿದೆ ಎನ್ನಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ 20 ವರ್ಷದ ಯುವಕ ಹುಬ್ಬಳ್ಳಿಯ ಸುನೀಲ್ ಎನ್ನುವನನ್ನು ಪೊಲೀಸರು ಬಂಧಿಸಿದ್ದಾರೆ. ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಅವರು ಮಾಹಿತಿ ನೀಡಿದ್ದಾರೆ.

ವಿಸ್ಮಯ ನ್ಯೂಸ್ ಶಿರಸಿ

ಇಂದಿನ ಪ್ರಮುಖ ‌ಸುದ್ದಿಗಳು

Back to top button