Uttara Kannada
Trending

ಉತ್ತರಕನ್ನಡದಲ್ಲಿಂದು 109 ಕರೊನಾ ಕೇಸ್

180 ಮಂದಿ ಗುಣಮುಖರಾಗಿ ಬಿಡುಗಡೆ
ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 4,860ಕ್ಕೆ ಏರಿಕೆ
ಅಂಕೋಲಾದಲ್ಲಿoದು ಶೂನ್ಯ ಪ್ರಕರಣ: 16 ಜನರು ಗುಣಮುಖ

[sliders_pack id=”3491″]

ಕಾರವಾರ: ಉತ್ತರಕನ್ನಡದಲ್ಲಿಂದು 109 ಕರೊನಾ ಕೇಸ್ ದಾಖಲಾಗಿದೆ. ಇಂದಿನ ಹೆಲ್ತ್ ಬುಲೆಟಿನ್ ನಲ್ಲಿ ಪ್ರಕಟವಾದಂತೆ ಕಾರವಾರದಲ್ಲಿ 11, ಅಂಕೋಲಾ 6, ಕುಮಟಾ 12, ಹೊನ್ನಾವರ 6, ಭಟ್ಕಳ 14, ಶಿರಸಿ 18, ಸಿದ್ದಾಪುರ 7, ಮುಂಡಗೋಡ 10, ಹಳಿಯಾಳ 20, ಜೋಯ್ಡಾದಲ್ಲಿ 5 ಕರೊನಾ ಪ್ರಕರಣ ದೃಢಪಟ್ಟಿದೆ. ಇದೇ ವೇಳೆ ಇಂದು ಜಿಲ್ಲೆಯಾದ್ಯಂತ ವಿವಿಧ ಆಸ್ಪತ್ರೆಯಿಂದ 180 ಮಂದಿ ಬಿಡುಗಡೆಯಾಗಿದ್ದಾರೆ.

ಕಾರವಾರ 5, ಅಂಕೋಲಾ 21, ಕುಮಟಾ 6, ಹೊನ್ನಾವರ 8, ಭಟ್ಕಳ 32, ಶಿರಸಿ 7, ಯಲ್ಲಾಪುರ 14, ಮುಂಡಗೋಡ 32, ಹಳಿಯಾಳಯಲ್ಲಿ 33 ಮಂದಿ ಗುಣಮುಖರಾಗಿದ್ದಾರೆ. ಇಂದು 109 ಪ್ರಕರಣ ದೃಢಪಟ್ಟ ಬೆನ್ನಲ್ಲೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 4,860ಕ್ಕೆ ಏರಿಕೆಯಾಗಿದೆ. ಹೋಮ್ ಐಸೋಲೇಷನ್ ನಲ್ಲಿ 504 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಂಕೋಲಾದಲ್ಲಿoದು ಶೂನ್ಯ ಪ್ರಕರಣ: 16 ಜನರು ಗುಣಮುಖ

ಅಂಕೋಲಾ : ತಾಲೂಕಿನಲ್ಲಿ ರವಿವಾರ ಯಾವುದೇ ಹೊಸ ಕೋವಿಡ್ ಸೋಂಕಿನ ಪ್ರಕರಣಗಳು ಪತ್ತೆಯಾಗದಿರುವುದು, ಇಂದು ಸಂಗ್ರಹಿಸಲಾಗಿದ್ದ ಎಲ್ಲಾ 5 ಜನರ ಗಂಟಲು ದ್ರವ ಪರೀಕ್ಷಾ ವರದಿ ನೆಗೆಟಿವ್ ಬಂದಿರುವುದು ಮತ್ತು ಸೋಂಕು ಮುಕ್ತರಾದ 16 ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿರುವುದು ಹಲವರ ನೆಮ್ಮದಿಗೆ ಕಾರಣವಾಗಿದೆ. ತಾಲೂಕಿನಲ್ಲಿ ಒಟ್ಟೂ 43 ಸಕ್ರೀಯ ಪ್ರಕರಣಗಳಿವೆ.


ಲಕ್ಷ್ಮೇಶ್ವರದ ಹೆಸರಾಂತ ಉದ್ಯಮಿಯೋರ್ವರಲ್ಲಿಯೂ ಶನಿವಾರ ಜ್ವರ ಲಕ್ಷಣಗಳುಳ್ಳ ಐ.ಎಲ್.ಐ ಮಾದರಿ ಪಾಸಿಟಿವ್ ಕಾಣಿಸಿಕೊಂಡಿದೆ ಎನ್ನಲಾಗಿದ್ದು, ಅವರ ಸಂಪರ್ಕದಿoದ ಅವರ ಪತ್ನಿಗೂ ಸೋಂಕು ಬಂದಿರುವ ಸಾಧ್ಯತೆ ಇದೆ. ಇವರು ಸೇರಿದಂತೆ ತಾಲೂಕಿನ ಈ ಹಿಂದಿನ ಕೆಲ ಸೋಂಕಿತರ ಸಂಪರ್ಕಿತರ ಮಾಹಿತಿ ಕಲೆಹಾಕಿರುವ ಆರೋಗ್ಯ ಇಲಾಖೆ ಸೋಮವಾರ ಅವರೆಲ್ಲರ ಗಂಟಲುದ್ರವ ಸಂಗ್ರಹಿಸಿ ಪರೀಕ್ಷೆಗೊಳಪಡಿಸುವ ಮಾಹಿತಿ ಇದೆ.


ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

ಇಂದಿನ ಪ್ರಮುಖ ಸುದ್ದಿಗಳ ಲಿಂಕ್ ಈ ಕೆಳಗಿದೆ

ನಿಮ್ಮ ಬಾಳಸಂಗಾತಿ ಆಯ್ಕೆಗೊಂದು ಸುವರ್ಣಾವಕಾಶ

ಮದುವೆಯಾಗಲು ಹುಡುಗಿ ಸಿಕ್ಕಿಲ್ಲ ಎಂಬ ಚಿಂತೆ ಬಿಡಿ
ಈ ಕೂಡಲೇ ನಮ್ಮನ್ನು ಸಂಪರ್ಕಿಸಿ
ದಿ ಭದ್ರಾ ವಧು-ವರರ ಮಾಹಿತಿ ಕೇಂದ್ರ
ಸರ್ವಧರ್ಮ ಜನರಿಗೆ ಉತ್ತಮ ಸಂಬoಧ ತೋರಿಸಲಾಗುವುದು
ಎರಡನೇಯ ಸಂಬoಧವನ್ನು ತೋರಿಸಲಾಗುವುದು
ಮೊಬೈಲ್: 784883356

Back to top button