ಕುಮಟಾ: ಪುರಾಣ ಪ್ರಸಿದ್ಧ ಪ್ರವಾಸಿತಾಣವಾದ ಉತ್ತರಕನ್ನಡ ಜಿಲ್ಲೆಯ ಯಾಣದಲ್ಲೂ ಭೂಕುಸಿತವಾಗಿದೆ. ಹೌದು, ಸುಮಾರು ಅರ್ಧ ಎಕರೆಗೂ ಹೆಚ್ಚು ಗುಡ್ಡ ಕುಸಿದಿದ್ದು, ಭೈರವೇಶ್ವರ ದೇವಸ್ಥಾನದ ಆವಾರದಲ್ಲಿರುವ ಅಂಗಡಿಯನ್ನ ಕೆಡವಿದೆ. ಯಾಣದ ಪಾರ್ಕಿಂಗ್ ಸ್ಥಳದಿಂದ ಗಣಪತಿ ದೇವಸ್ಥಾನಕ್ಕೆ ಹೋಗುವ ರಸ್ತೆಯಲ್ಲಿ ಇರುವ ಸಿಡಿಗಳ ಪೈಪು ಮಣ್ಣಿನಿಂದ ಮುಚ್ಚಿ ಹೋಗಿ, ರಸ್ತೆಯಲ್ಲೇ ನೀರು ಹರಿಯುತ್ತಿದೆ. ಈ ಕುರಿತು ವಿಸ್ಮಯ ಟಿ.ವಿಯೊಂದಿಗೆ ದೇವಸ್ಥಾನದ ಮುಖ್ಯ ಅರ್ಚಕರಾದ ದಾಮೋದರ ಭಟ್ಟ ಮಾತಾಡಿದ್ದು, ದಿನನಿತ್ಯ ಪೂಜೆಗೆ ಬರುವುದಕ್ಕೆ ಕಷ್ಟವಾಗುತ್ತಿದೆ. ರಸ್ತೆಗಳು ಕೊಚ್ಚಿಹೋಗಿದೆ. ಇದಕ್ಕೆ ಶಾಶ್ವತ ಪರಿಹಾರ ಬೇಕು ಎಂದು ಹೇಳಿದರು.
ಅಳಕೋಡು ಗ್ರಾಮ ಪಂಚಾಯತ್ ಸದಸ್ಯರಾದ ರಾಜೀವ್ ಕುಪ್ಪ ಭಟ್ಟ ಮತ್ತು, ಉದಯಕುಮಾರ ಜೈನ್ ಮಾತನಾಡಿ, ಇಲ್ಲಿನ ದುಸ್ಥಿತಿ ಬಗ್ಗೆ ವಿವರಿಸಿದರು. ಕೂಡಲೇ ಗುಡ್ಡ ಕುಸಿತದ ಸ್ಥಳಕ್ಕೆ ಭೇಟಿ ಅಧಿಕಾರಿಗಳು ನೀಡಬೇಕು. ಮುಂದಿನ ದಿನಗಳಲ್ಲಿ ಗುಡ್ಡಕುಸಿತ ಮರುಕಳಿಸದಂತೆ ತಜ್ಞರ ಶಿಫಾರಸ್ಸಿನಂತೆ ಶಾಶ್ವತ ವಾದ ಪರಿವಾರ ಮಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ವಿಸ್ಮಯ ನ್ಯೂಸ್, ಕುಮಟಾ