ಲಾರಿಯ ಜೊತೆ ಇನ್ನು ಕೆಲ ವಾಹನಗಳು ಸಿಲುಕಿರುವ ಸುಳಿವು? ಹಾಲಿಕ್ಯಾಪ್ಟರ್ ಮೂಲಕವೂ ಶೋಧ ಕಾರ್ಯ

ಅಂಕೋಲಾ: ಶಿರೂರು ದುರ್ಘಟನೆಗೆ ಸಂಬoಧಿಸಿದoತೆ ಕಾರ್ಯಾಚರಣೆ ಮುಂದುವರಿದಿದೆ. ಈಗಾಗಲೇ ಎರಡು ಬೂಮರ್ ಯಂತ್ರಗಳು ಘಟನಾ ಸ್ಥಳದಲ್ಲಿ ಕೆಲಸ ಮಾಡುತ್ತಿವೆ. ಇದೀಗ ನಿವೃತ್ತ ಮೇಜರ್ ಇಂದ್ರಪಾಲ್ ನೇತೃತ್ವದಲ್ಲಿ ಐಬೋಡ್ ಎಂಬ ಹೆಸರಿನ ಅತ್ಯಾಧುನಿಕ ಡ್ರೋನ್ ಮೂಲಕ ಪತ್ತೆ ಕಾರ್ಯ ನಡೆದಿದೆ. ದ್ರೋಣ್ ಮೂಲಕ ಘಟನಾ ಸ್ಥಳದಲ್ಲಿ ಅಂಗಡಿ ಇರುವ ಗಂಗಾವಳಿ ನದಿಯಲ್ಲಿ ಸ್ಕ್ಯಾನಿಂಗ್ ಮಾಡಲಾಗುತ್ತಿದೆ.

ಇದನ್ನೂ ಓದಿ: ನಾಲ್ಕು ಕಡೆ ಮೆಟಲ್ ಅಂಶಪತ್ತೆ: ಅರ್ಜುನ ಇದ್ದ ಲಾರಿಯೂ ಶೋಧ? ಕಾರ್ಯಾಚರಣೆ ನೇತೃತ್ವ ವಹಿಸಿದ್ದ ಮೇಜರ್ ಜನರಲ್ ಹೇಳಿದ್ದೇನು?

ಒಂದು ಹಂತದಲ್ಲಿ ಕೇರಳದ ಅರ್ಜುನ್ ಇರುವ ಟ್ರಕ್ ಪತ್ತೆಯಾಗಿದೆ. ಇದರ ಜೊತೆಗೆ ಇನ್ನೂ ಮೂರು ವಾಹನಗಳು ಪತ್ತೆಯಾಗಿದೆ ಎನ್ನಲಾಗಿದೆ. ಈಗಾಗಲೇ ನೌಕಾಪಡೆ, ಭೂಸೇನೆ , ಎನ್‌ಡಿಆರ್‌ಎಫ್, ಎಸ್‌ಡಿ ಆರ್‌ಎಫ್ ಮತ್ತು ಪೊಲೀಸರು ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಅಲ್ಲದೆ, ಹೆಲಿಕಾಪ್ಟರ್ ಮೂಲಕವೂ ಶೋಧ ಕಾರ್ಯಾಚರಣೆ ಮುಂದುವರಿದಿದೆ.

ವಿಸ್ಮಯ ನ್ಯೂಸ್, ವಿಲಾಸ್ ನಾಯಕ, ಅಂಕೋಲಾ

Exit mobile version