ಹಳದೀಪುರ,ಮುರ್ಡೇಶ್ವರ ದಲ್ಲಿ ನಡೆದ ಉಚಿತ ನೇತ್ರ ತಪಾಸಣಾ ಶಿಬಿರಉಚಿತ ಶಸ್ತ್ರಚಿಕಿತ್ಸೆ ಗೆ ಅರ್ಹ 15 ಜನರ ಆಯ್ಕೆ
ಕುಮಟಾ : ಇಲ್ಲಿನ ‘ಲಯನ್ಸ್ ರೇವಣಕರ ಚೆರಿಟೇಬಲ್ ಕಣ್ಣಿನ ಆಸ್ಪತ್ರೆ’ ಯು ಜುಲೈ 25 ಗುರುವಾರದಂದು ಜಿಲ್ಲಾ ಅಂಧತ್ವ ನಿಯಂತ್ರಣಾ ಸಂಸ್ಥೆಯ ಸಹಯೋಗದಲ್ಲಿ ಹೊನ್ನಾವರ ತಾಲೂಕು ಹಳದೀಪುರ ಮತ್ತು ಭಟ್ಕಳ ತಾಲೂಕಿನ ಮುರ್ಡೇಶ್ವರ ಸರಕಾರೀ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ ಹಮ್ಮಿಕೊಂಡಿತ್ತು.
ಈ ಶಿಬಿರದಲ್ಲಿ ಅರ್ಹ 15 ಶಿಬಿರಾರ್ಥಿಗಳು ಉಚಿತ ಶಸ್ತ್ರಚಿಕಿತ್ಸೆಗೆ ಆಯ್ಕೆಗೊಂಡರು. ಇವರನ್ನು ಕುಮಟಾದಲ್ಲಿನ ಆಸ್ಪತ್ರೆಗೆ ಕರೆತರಲಾಗಿದ್ದು,ನೇತ್ರತಜ್ಙರಾದ ಡಾ.ಮನೋಜ ಎಮ್.ಎನ್.ಮತ್ತು ಡಾ.ರಾಜಶೇಖರ ಡಿ.ಅವರು ಶುಕ್ರವಾರ ಇವರೆಲ್ಲರಿಗೆ ಕಣ್ಣುಪೊರೆ ಶಸ್ತ್ರಚಿಕಿತ್ಸೆ ನಡೆಸಲಿದ್ದಾರೆ. ಶನಿವಾರ ಈ ಫಲಾನುಭವಿಗಳನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಿ ಆಸ್ಪತ್ರೆಯ ವಾಹನದ ಮೂಲಕ ಹಳದೀಪುರ ಮತ್ತು ಮುರ್ಡೇಶ್ವರಕ್ಕೆ ಕರೆದೊಯ್ದು ಬಿಟ್ಟು ಬರಲಾಗುತ್ತದೆ.
ಕಣ್ಣುಪೊರೆ ಶಸ್ತ್ರಚಿಕಿತ್ಸೆ, ಔಷಧೋಪಚಾರ,ಕನ್ನಡಕ ನೀಡಿಕೆ,ಎರಡು ದಿನಗಳ ಕಾಲ ಆಸ್ಪತ್ರೆಯಲ್ಲಿ ಊಟೋಪಹಾರ ಸಹಿತ ವಸತಿ ವ್ಯವಸ್ಥೆ ಮತ್ತು ಸಾರಿಗೆ ವ್ಯವಸ್ಥೆಗಳನ್ನು ಸಂಪೂರ್ಣ ಉಚಿತವಾಗಿ ಕಲ್ಪಿಸಿಕೊಡಲಾಗುತ್ತದೆ. ಇದು ನಮ್ಮ ಆಸ್ಪತ್ರೆಯ ಪ್ರತಿ ಗುರುವಾರದ ಕಾರ್ಯವಾಗಿದ್ದು
ಈವರೆಗೂ 550 ಕ್ಕೂ ಹೆಚ್ಚು ಇಂತಹ ಶಿಬಿರಗಳನ್ನು ನಡೆಸಿ ಅವಶ್ಯವುಳ್ಳ 8500 ಕ್ಕೂ ಹೆಚ್ಚು ಜನರಿಗೆ ಉಚಿತವಾಗಿ ಕಣ್ಣು ಪೊರೆ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿಕೊಡಲಾಗಿದೆ.
ನೇತ್ರದಾನದ ಕುರಿತಾಗಿ ಜಾಗೃತಿ ಕಾರ್ಯಕ್ರಮಗಳು, ಮಕ್ಕಳಿಗೆ ನೇತ್ರ ರಕ್ಷಣೆಯ ಕುರಿತಾಗಿ ಮಾಹಿತಿ ಕಾರ್ಯಾಗಾರಗಳ ಜೊತೆಗೆ ಶಾಲೆಗಳಲ್ಲಿ ‘ಉಚಿತ ನೇತ್ರ ತಪಾಸಣಾ ಶಿಬಿರ’ ನಡೆಸಿಕೊಂಡು ಬರಲಾಗುತ್ತಿದ್ದು, ಇದುವರೆಗೂ 10000 ಕ್ಕೂ ಹೆಚ್ಚು ಮಕ್ಕಳ ನೇತ್ರ ತಪಾಸಣಾ ಕಾರ್ಯ ಕೈಕೊಳ್ಳಲಾಗಿದೆ.
ಕಣ್ಣುಪೊರೆ ಶಸ್ತ್ರಚಿಕಿತ್ಸೆ ಅವಶ್ಯವುಳ್ಳವರು ಆಸ್ಪತ್ರೆಯನ್ನು ಸಂಪರ್ಕಿಸಿ ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕಾಗಿ ‘ಲಯನ್ಸ್ ಹ್ಯುಮೆನಿಟೇರಿಯನ್ ಸರ್ವೀಸ್ ಟ್ರಸ್ಟ್’ ನ ಚೇರಮನ್ ಲಯನ್ ಮದನ ಡಿ.ನಾಯಕ ಅವರು ವಿನಂತಿಸಿ ಈ ಎಲ್ಲ ಮಾಹಿತಿ ನೀಡಿದ್ದಾರೆ. ಕುಮಟಾ ಲಯನ್ಸ್ ಕಣ್ಣಿನ ಆಸ್ಪತ್ರೆಯ ದೂರವಾಣಿ ಸಂಖ್ಯೆ 08386 224480 .
ವಿಸ್ಮಯ ನ್ಯೂಸ್, ಕುಮಟಾ