Important
Trending

ಶಿರೂರು ಗುಡ್ದಕುಸಿತ ದುರಂತ : ಸ್ಮಶಾನದಲ್ಲಿ ಹೂತಿದ್ದ ಶವ ಹೊರತೆಗೆಸಿದ್ದೇಕೆ ?

ಡಿ. ಎನ್ ಎ ಪರೀಕ್ಷೆಯಿಂದ ಧೃಡಪಟ್ಟ ಅಸಲಿ ಅಂಶ

ಅಂಕೋಲಾ : ಶಿರೂರು ಗುಡ್ಡ ಕುಸಿತದ ದುರಂತದಲ್ಲಿ ಮೃತಪಟ್ಟಿರಬಹುದು ಎನ್ನಲಾದ ವ್ಯಕ್ತಿ ಒರ್ವರ ಮೃತ ದೇಹದ,ಸೊಂಟ ಮತ್ತು ಕಾಲುಗಳುಳ್ಳ ಅರ್ಧ ಭಾಗವಷ್ಟೇ ಬೆಳಂಬಾರ ಮಧ್ಯ ಖಾರ್ವಿವಾಡದಲ್ಲಿ ಇತ್ತೀಚೆಗೆ ಪತ್ತೆಯಾಗಿತ್ತು. ನಂತರ ಮೃತ ದೇಹದ ಈ ಭಾಗಗಳು ಅದೇ ದುರಂತದಲ್ಲಿ ನಾಪತ್ತೆಯಾಗಿರುವ ಮತ್ತು ಈವರೆಗೂ ಪತ್ತೆಯಾಗದ ಕೇರಳ ಮೂಲದ ಅರ್ಜುನ್,ತಮಿಳುನಾಡು ಮೂಲದ ಶರವಣನ್,ಗೋಕರ್ಣ ಗಂಗೆ ಕೊಳ್ಳದ ಲೋಕೇಶ್ ನಾಯ್ಕ ಮತ್ತು ಶಿರೂರು ಸ್ಥಳಿಯ ನಿವಾಸಿ ಜಗನ್ನಾಥ್ ನಾಯ್ಕ ಅವರದ್ದಾಗಿರಬಹುದೇ ಎಂಬ ಶಂಕೆಯ ವ್ಯಕ್ತವಾದ ನಡುವೆಯೇ, ಕೆಲ ತಕ್ಕಮಟ್ಟಿನ ಗುರುತು ಹಾಗೂ ಇನ್ನಿತರೆ ಕಾರಣಗಳಿಂದ ಡಿ ಎನ್ ಎ ಪರೀಕ್ಷೆಯ ಮೊರೆ ಹೋಗಲಾಗಿತ್ತು.

ಕಾರಿನ ಮೇಲೆ ಮರಬಿದ್ದು ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು

ಈ ವೇಳೆಗಾಗಲೇ ತಮಿಳುನಾಡು ಮೂಲದ ಟ್ಯಾಂಕರ್ ಚಾಲಕ ಶರವಣನ್ ತಂದೆ ಷಣ್ಮುಗಂ ಈತ ನಾಪತ್ತೆಯಾಗಿರುವ ಕುರಿತು ಆತನ ತಾಯಿ ಮೋಹನಾ ಷಣ್ಮುಗಂ ಅಂಕೋಲಾ ಪೊಲೀಸ್ ಠಾಣೆಯಲ್ಲಿ ನೀಡಿದ ದೂರು ನೀಡಿದ್ದರು.ಕಡಲ ತೀರದಲ್ಲಿ ಪತ್ತೆಯಾಗಿದ್ದ ದೇಹ ಒಂದರ ಅರ್ಧ ಭಾಗವನ್ನು,ಕೋಟೆವಾಡದ ಹಿಂದೂ ಸ್ಮಶಾನ ಭೂಮಿಯಲ್ಲಿ ಹೂತಿದ್ದ ಪೊಲೀಸರು, ಕಾನೂನು ಕ್ರಮ ಮುಂದುವರಿಸಿದ್ದರು. ಬೆಳಂಬಾರ ಕಡಲ ತೀರದ ಬಳಿ ದೊರೆತ ಮೃತ ವ್ಯಕ್ತಿಯ ಅಂಗಾಂಗಗಳು ಮತ್ತು ನಾಪತ್ತೆಯಾಗಿದ್ದ ಎನ್ನಲಾದ ಶರವಣನ್ ಕುಟುಂಬದವರ ಡಿ. ಎನ್ ಎ ಪರೀಕ್ಷೆ ನಡೆಸಿ ವರದಿಗಾಗಿ ಕಾಯಲಾಗುತ್ತಿತ್ತು.

ಈಗ ಡಿ ಎನ್ ಎ ಪರೀಕ್ಷಾ ವರದಿ ಬಂದಿದ್ದು ಈ ಹಿಂದೆ ಬೆಳಂಬಾರದಲ್ಲಿ ಪತ್ತೆಯಾಗಿದ್ದ ಎರಡು ಕಾಲುಗಳು ಮತ್ತು ಸೊಂಟದ ಭಾಗವುಳ್ಳ ಅಂಗಾಂಗಗಳು ಶರವಣನ್ ಅವರ ದ್ದೇ ಎಂದು ದೃಢಪಟ್ಟಿದೆ. ಹೀಗಾಗಿ ಅರ್ಧ ದೇಹ ಯಾರದ್ದಾಗಿರಬಹುದೆಂಬ ಕುತೂಹಲ ಮತ್ತು ಶಂಕೆಗೆ ಉತ್ತರ ದೊರೆತಂತಾಗಿದೆ.ಈ ವಿಷಯ ತಿಳಿದು ಶರ್ವಣನ್ ಕುಟುಂಬದವರು ಅಂಕೋಲಾಕ್ಕೆ ಬಂದು ಮೃತ ದೇಹದ ಅಂಗಾಂಗಗಳನ್ನು ತಮ್ಮೂರಿಗೆ ಕೊಂಡೊಯ್ದಿದ್ದಾರೆ.

ಈ ಮೊದಲು ಪುರಸಭೆ ವ್ಯಾಪ್ತಿಯ ಕೋಟೆ ವಾಡದ ಹಿಂದೂ ಸ್ಮಶಾನ ಭೂಮಿಯಲ್ಲಿ, ಈ ಅಂಗಾಂಗಗಳನ್ನು ಹೂಳಲಾಗಿತ್ತು.ಈಗ ಅದನ್ನು ಹೊರ ತೆಗೆದು ಶರವಣನ್ ಕುಟುಂಬಸ್ಥರಿಗೆ ಹತ್ತಾಂತರಿಸಲಾಗಿದೆ.ಕುಮಟಾ ಉಪ ವಿಭಾಗಾಧಿಕಾರಿ ಕಲ್ಯಾಣಿ ಕಾಂಬಳೆ,ಪಿಎಸ್ಐ ಉದ್ದಪ್ಪ ಧರೆ ಪ್ಪನವರ,ತಾಲೂಕ್ ಆಸ್ಪತ್ರೆ ವೈದ್ಯರು , ಹಾಗೂ ಸಂಬಂಧಿತ ಇಲಾಖೆಗಳ ಸಿಬ್ಬಂದಿಗಳು ಹಾಜರಿದ್ದು ಕರ್ತವ್ಯ ನಿರ್ವಹಿಸಿದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button