ರಾಜ್ಯದ ಎಲ್ಲಾ ಗಡಿ ಮುಕ್ತ
ಗೋವಾ ಮುಖ್ಯಮಂತ್ರಿಗಳ ಹೇಳಿಕೆ
ಕಾರವಾರ : ಕೋವಿಡ್ ಟೆಸ್ಟ್ ಗೆ ಕಡ್ಡಾಯವಾಗಿ ಎರಡು ಸಾವಿರ ಹಣ ಪಡೆದು ಗೋವಾ ಗಡಿಯೊಳಗೆ ಪ್ರವೇಶ ಪಡೆಯಬೇಕಿದ್ದ ನಿರ್ಬಂಧಗಳನ್ನು ಗೋವಾ ಸರಕಾರ ಹಿಂಪಡೆದಿದೆ. ಕೇಂದ್ರ ಸರ್ಕಾರ ಅಂತರ್ ರಾಜ್ಯ ಗಡಿ ಮುಕ್ತಗೊಳಿಸುವಂತೆ ಸೂಚನೆ ನೀಡಿದರೂ ಗೋವಾ ಸರ್ಕಾರ ತನ್ನ ರಾಜ್ಯಕ್ಕೆ ಬರುವವರಿಗೆ ನಿರ್ಬಂಧ ಹೇರಿತ್ತು. ಇದೀಗ ಈ ಕುರಿತು ಪ್ರಸ್ತಾಪಿಸಿದ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಸೆಪ್ಪೆಂಬರ್ 1 ರಿಂದ ಗೋವಾ ರಾಜ್ಯದ ಎಲ್ಲಾ ಗಡಿಯನ್ನು ಮುಕ್ತಗೊಳಿಸುವುದಾಗಿ ತಿಳಿಸಿದ್ದಾರೆ.
ಈ ಹಿನ್ನಲೆಯಲ್ಲಿ ಕರ್ನಾಟಕ -ಗೋವಾ ಗಡಿ ಜಿಲ್ಲೆಯ ಜನರಿಗೆ ಗೋವಾ ರಾಜ್ಯಕ್ಕೆ ಕೆಲಸ ನಿಮಿತ್ತ ಹೋಗಿ ಬರಲು ಕಷ್ಟಕರವಾಗಿತ್ತು. ಪ್ರತಿ ವ್ಯಕ್ತಿಗೆ ಎರಡುಸಾವಿರ ಹಣ ನೀಡಿ ಗೋವಾ ಪ್ರವೇಶಿಸುವುದೇ ದೊಡ್ಡ ಸಮಸ್ಯೆಯಾಗಿತ್ತು. ಗೋವಾ ಗಡಿ ಭಾಗದ ಕಾರವಾರದ ವಾಟಳ್ ಪಕ್ಷದ ಜಿಲ್ಲಾಧ್ಯಕ್ಷ ರಾಘವನಾಯ್ಕ ಮತ್ತು ಕರವೇ ಜಿಲ್ಲಾಧ್ಯಕ್ಷ ಭಾಸ್ಕರ ಪಟಗಾರ ನೇತ್ರತ್ವದಲ್ಲಿ ಪ್ರತಿಭಟನೆ ನಡೆಸಿ ಗೋವಾ ಸರ್ಕಾರಕ್ಕೆ ಮನವಿ ಮೂಲಕ ಗಡುವು ನೀಡಲಾಗಿತ್ತು.
ಇದೇ ವೇಳೆ, ಕಾರವಾರ ಅಂಕೋಲಾ ಕ್ಷೇತ್ರದ ಶಾಸಕಿ ರೂಪಾಲಿ ನಾಯ್ಕ ರವರು ಗೋವಾ ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸಿದ್ದು ಈ ವೇಳೆ ಸೆಪ್ಟಂಬರ್ ಒಂದರಿAದ ಗೋವಾ -ಕರ್ನಾಟಕ ಗಡಿ ಮುಕ್ತಗೊಳಿಸುವ ಭರವಸೆ ನೀಡಿದ್ದರು. ಅದರಂತೆಯೇ ಈಗ ಗೋವಾ ಮುಖ್ಯಮಂತ್ರಿಗಳು ರಾಜ್ಯದ ಎಲ್ಲಾ ಗಡಿಯ್ನು ಮುಕ್ತಗೊಳಿಸಿದ್ದಾರೆ.
ವಿಸ್ಮಯ ನ್ಯೂಸ್, ಕಾರವಾರ
ನಿಮ್ಮ ಬಾಳಸಂಗಾತಿ ಆಯ್ಕೆಗೊಂದು ಸುವರ್ಣಾವಕಾಶ
ಮದುವೆಯಾಗಲು ಹುಡುಗಿ ಸಿಕ್ಕಿಲ್ಲ ಎಂಬ ಚಿಂತೆ ಬಿಡಿ
ಈ ಕೂಡಲೇ ನಮ್ಮನ್ನು ಸಂಪರ್ಕಿಸಿ
ದಿ ಭದ್ರಾ ವಧು-ವರರ ಮಾಹಿತಿ ಕೇಂದ್ರ
ಸರ್ವಧರ್ಮ ಜನರಿಗೆ ಉತ್ತಮ ಸಂಬoಧ ತೋರಿಸಲಾಗುವುದು
ಎರಡನೇಯ ಸಂಬoಧವನ್ನು ತೋರಿಸಲಾಗುವುದು
ಮೊಬೈಲ್: 784883356