Follow Us On

WhatsApp Group
Important
Trending

ಅಜ್ಜಿ ಮನೆಯಲ್ಲಿದ್ದಾಗ ನೇಣಿಗೆ ಶರಣಾದ ಯುವತಿ!

ಅಂಕೋಲಾ : 16ರ ವಯಸ್ಸು ,ಹುಚ್ಚು ಕೋಡಿ ಮನಸು ಎನ್ನುವ ಮಾತಿನಂತೆ,ಕೆಲವೊಮ್ಮೆ ಬಾಳಿ ಬದುಕಬೇಕಿರುವ ಯುವ ಜನತೆ,ತಮ್ಮ ಜೀವ ಮತ್ತು ಜೀವನವನ್ನು ಕಳೆದುಕೊಳ್ಳುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಅಂತಹುದೇ ಒಂದು ದುರ್ಘಟನೆ ತಾಲೂಕಿನ ಬಾಳೇಗುಳಿ ಬಳಿ ಸಂಭವಿಸಿದೆ. ಸುಮಾರು 16 ವರ್ಷದ ಯುವತಿ ಒಬ್ಬಳು, ಅನ್ಯ ಜಾತಿಯವನ ಪ್ರೀತಿ ಪ್ರೇಮದ ಬಲೆಯಲ್ಲಿ ಬಿದ್ದೋ ಅಥವಾ ಅದಾವುದೋ ಕಾರಣದಿಂದ ಮನನೊಂದು ಸಾವಿಗೆ ಶರಣಾಗಿದ್ದಾಳೆ.

ಪಕ್ಕದ ತಾಲೂಕಿನ ಈ ಯುವತಿ, ಅನ್ಯ ಜಾತಿಯ ಪರಿಚಿತ ಯುವಕನೊಂದಿಗೆ ಅತಿ ಸಲುಗೆಯಿಂದ ಇದ್ದವಳು, ನಂತರ ಆ ಪರಿಚಯವೇ ಪ್ರೀತಿ ಪ್ರೇಮಕ್ಕೆ ತಿರುಗಿ, ನಂತರ ಹೊಸ ತಿರುವು ಪಡೆದು ಇಲ್ಲವೇ ಬೇರೆ ಅದಾವುದೋ ಕಾರಣದಿಂದ ಮನನೊಂದು ತನ್ನ ಅಜ್ಜಿ ಮನೆಯಲ್ಲಿ ನೇಣಿಗೆ ಶರಣಾಗಿದ್ದಾಳೆ ಎನ್ನಲಾಗಿದ್ದು,ಪೊಲೀಸರಿಂದ ಈ ಕುರಿತು ಹೆಚ್ಚಿನ ಮತ್ತು ಅಧಿಕೃತ ಮಾಹಿತಿ ತಿಳಿದು ಬರಬೇಕಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button