ಜಲಾಶಯದಿಂದ ನೀರು ಬಿಡುವ ಮುನ್ಸೂಚನೆ: ನದಿದಡದ ಜನರು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳ್ಳುವಂತೆ ಮಾಹಿತಿ

ಹೊನ್ನಾವರ: ಗೇರುಸೊಪ್ಪಾ ಜಲಾಶಯದಿಂದ ನೀರು ಬಿಡುವ ಕುರಿತು ಹೊನ್ನಾವರ ತಹಶೀಲ್ದಾರ್ ಕಾರ್ಯಾಲಯ ಪ್ರಕಟಣೆ ಮೂಲಕ ಮಾಹಿತಿ ನೀಡಿದೆ. ಆಗಸ್ಟ್ 1, 2024 ರಂದು ಗೇರುಸೊಪ್ಪಾ ಜಲಾಶಯದಿಂದ 50 ಸಾವಿರ ಕ್ಯೂಸೆಕ್ ನೀರನ್ನು ಹೊರಬಿಡುವ ಮೂನ್ಸೂಚನೆ ಇರುವುದಾಗಿ ಭಟ್ಕಳ ಸಹಾಯಕ ಆಯುಕ್ತರು ದೂರವಾಣಿ ಮೂಲಕ ತಿಳಿಸಿದ್ದಾರೆ.

ಇದನ್ನೂ ಓದಿ: ಕಾಲೇಜಿಗೆ ಎಂದು ಹೋದ ವಿದ್ಯಾರ್ಥಿ ನಾಪತ್ತೆ: ಈತನ ಸುಳಿವು ಸಿಕ್ಕರೆ ಮಾಹಿತಿ ನೀಡುವಂತೆ ಮನವಿ

ಹೀಗಾಗಿ ಜುಲೈ 31, 2024ರ ಸಂಜೆ ವೇಳೆಗೆ ನದಿದಡದ ಜನರು ಜನ-ಜಾನುವಾರು, ಅಮೂಲ್ಯ ವಸ್ತುಗಳೊಂದಿಗೆ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳ್ಳಬೇಕು. ಸ್ಥಳೀಯ ಮಟ್ಟದಲ್ಲಿ/ಗ್ರಾಮ ಪಂಚಾಯತ ಮಟ್ಟದಲ್ಲಿ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಸಂಬAಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ವಿಸ್ಮಯ ನ್ಯೂಸ್, ವಿವೇಕ್ ಶೇಟ್, ಹೊನ್ನಾವರ

Exit mobile version