ಯಕ್ಷೀ ಚೌಡೇಶ್ವರಿ ದೇವಸ್ಥಾನದಲ್ಲಿ ಅಮಾವಾಸ್ಯೆ ನಿಮಿತ್ತ ವಿಶೇಷ ತೀರ್ಥಸ್ನಾನ: ರಾಜ್ಯದ ವಿವಿಧೆಡೆಯಿಂದ ಅಪಾರ ಸಂಖ್ಯೆಯ ಭಕ್ತರ ಆಗಮನ
ಹೊನ್ನಾವರ: ರಾಜ್ಯದ ಪ್ರಸಿದ್ಧ ಶಕ್ತಿ ಕ್ಷೇತ್ರದಲ್ಲಿ ಒಂದಾದ ಹೊನ್ನಾವರ ತಾಲೂಕಿನ ನೀಲಗೋಡ ಶ್ರೀ ಯಕ್ಷೀ ಚೌಡೇಶ್ವರಿ ದೇವಸ್ಥಾನದಲ್ಲಿ ಅಮಾವಾಸ್ಯೆ ನಿಮಿತ್ತ ವಿಶೇಷ ಪೂಜೆ ನೇರವೇರಿತು. ರಾಜ್ಯದ ವಿವಿಧೆಡೆಯಿಂದ ಅಪಾರ ಸಂಖ್ಯೆ ಭಕ್ತರು ಆಗಮಿಸಿದ್ದರು.
ಇಲ್ಲಿನ ಯಕ್ಷೀ ಚೌಡೇಶ್ವರಿ ದೇವಸ್ಥಾನದಲ್ಲಿ ಪ್ರತಿ ಅಮಾವಾಸ್ಯೆಯಂದು ನಡೆಯುವ ವಿಶೇಷ ಪೂಜೆಗೆ ರಾಜ್ಯದ ಮೂಲೆ-ಮೂಲೆಗಳಿಂದ ಅಪಾರ ಭಕ್ತರು ಆಗಮಿಸುತ್ತಿದ್ದು, ವಿವಿಧ ಸೇವೆಗಳನ್ನ ಮಾಡಿ ಶ್ರೀದೇವಿಗೆ ಹರಕೆ ಸಮರ್ಪಿಸುತ್ತಾರೆ. ವಿಶೇಷ ಪೂಜೆ, ತುಪ್ಪ ದೀಪದ ಆರತಿಯನ್ನು ಬೆಳಗಿಸಿದರೇ ದೇವಿ ಕಷ್ಟಗಳನ್ನು ನಿವಾರಿಸಿ ನಮ್ಮ ಇಷ್ಟಾರ್ಥಗಳನ್ನು ನೇರವೇರಿಸುತ್ತಾರೆ ಎನ್ನುವ ನಂಬಿಕೆ.. ಇಲ್ಲಿ ತೀರ್ಥ ಸ್ನಾನಕ್ಕೂ ಅಷ್ಟೇ ಮಹತ್ವವಿದ್ದು ಎಡಬಿಡದೇ ಬಿಳುತ್ತಿರುವ ಮಳೆಯಲ್ಲೂ ಭಕ್ತರು ಆಗಮಿಸಿ ತಮ್ಮ ಸೇವೆಗಳನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ನಮ್ಮ ವಿಸ್ಮಯ ಟಿ.ವಿಯೊಂದಿಗೆ ದೇವಸ್ಥಾನದ ಧರ್ಮದರ್ಶಿಗಳಾದ ಮಾದೇವ ಸ್ವಾಮಿಗಳು ಮಾತನಾಡಿ ದಿನೇ ದಿನೇ ಅಪಾರ ಭಕ್ತರು ಈ ಸನ್ನಿಧಾನಕ್ಕೆ ಬರುತ್ತಿದ್ದಾರೆ. ಪ್ರತಿ ಅಮವಾಸ್ಯೆಯಂದು ವಿಶೇಷ ಪೂಜೆಯ ಜೊತೆಗೆ ಹಣ್ಣಿನ ಅಲಂಕಾರ, ಭಜನೆಗಳು ನಡೆಯುತ್ತಿದ್ದು ರಾಜ್ಯದ ಮೂಲೆ-ಮೂಲೆಗಳಿಂದ ಭಕ್ತರು ಆಗಮಿಸುತ್ತಿದ್ದು 9 ಅಮವಾಸ್ಯೆಯನ್ನು ನಿರಂತರವಾಗಿ ಮಾಡಿದರೇ ಅವರ ಕಷ್ಟಗಳನ್ನು ತಾಯಿ ನೀವಾರಿಸುತ್ತಾರೆ ಎಂಬ ನಂಬಿಕೆಯಿದೆ ಎಂದರು.
ರಾಜ್ಯದ ಮೂಲೆ ಮೂಲೆಯಿಂದ ಭಕ್ತರ ದಂಡೆ ಹರಿದುಬಂದಿತ್ತು. ವಿಶೇಷವಾಗಿ ಹೂವಿನ ಅಲಂಕಾರ ಸೇವೆ, ಹಣ್ಣುಕಾಯಿ ಸೇವೆ, ಅನ್ನದಾನ ಸೇವೆ, ಸಲ್ಲಿಸಿದರು. ದೇವಾಲಯದಲ್ಲಿ ವಿವದ ದಾರ್ಮಿಕ ಕಾರ್ಯಕ್ರಮಗಳು ,ಪ್ರಸಾದವಿತರಣೆ ಅನ್ನಸಂತರ್ಪಣೆ ನಡೆದವು, ಸಾವಿರಾರು ಸಂಖೆಯಲ್ಲಿ ಆಗಮಿಸಿದ ಭಕ್ತರು ಸರತಿ ಸಾಲಿನಲ್ಲಿ ನಿಂತು ತೀರ್ಥ ಸ್ನಾನದಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆದರು.
ವಿಸ್ಮಯ ನ್ಯೂಸ್, ವಿವೇಕ್ ಶೇಟ್, ಹೊನ್ನಾವರ