Important
Trending

ಎಸಿಪಿ ರವೀಶ ನಾಯಕರ ವರಿಗೆ ರಾಷ್ಟ್ರಪತಿಗಳ ಶ್ಲಾಘನೀಯ ಸೇವಾ ಪುರಸ್ಕಾರ

ಅಂಕೋಲಾ ಬಾಸಗೋಡ ಮೂಲದ ಕರಾವಳಿಯ ಕನ್ನಡಿಗನ ದಕ್ಷತೆಗೆ ಒಲಿದು ಬಂದ ಗೌರವ

ಅಂಕೋಲಾ : ತನ್ನ ದಕ್ಷತೆ ಮೂಲಕ ಪೋಲಿಸ್ ಇಲಾಖೆಯಲ್ಲಿ ಉತ್ತಮ ಅಧಿಕಾರಿಯಾಗಿ ಗುರುತಿಸಿಕೊಂಡು,ಸದ್ಯ ಮಂಗಳೂರಿನಲ್ಲಿ ಎಸಿಪಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ,ತಾಲೂಕಿನ ಬಾಸಗೋಡ ಮೂಲದ ರವೀಶ್ ಎಸ್ ನಾಯಕ ಅವರು,ರಾಷ್ಟ್ರಪತಿಗಳ ಶ್ಲಾಘನೀಯ ಸೇವಾ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ. 2001 ರ ಬ್ಯಾಚಿನ ಅಧಿಕಾರಿಯಾಗಿ ಬಿಜಾಪುರದಲ್ಲಿ ಪಿಎಸ್ಐ ಯಾಗಿ ಸೇವೆ ಆರಂಭಿಸಿದ್ದ ಇವರು, ತದ ನಂತರ ಗುಲ್ಬರ್ಗ, ಯಾದಗಿರಿ ಜಿಲ್ಲೆಗಳಲ್ಲಿ ಸೇವೆ ಸಲ್ಲಿಸಿ, ಬಳಿಕ ಮಂಗಳೂರಿನ ವಿವಿಧ ಠಾಣೆಗಳಲ್ಲಿಯೂ ಪೊಲೀಸ್ ನಿರೀಕ್ಷರಾಗಿ ಸೇವೆ ಸಲ್ಲಿಸಿದ್ದಲ್ಲದೇ, ಉಡುಪಿಯ ಕರಾವಳಿ ಕಾವಲು ಪಡೆ ಇನ್ಸ್ಪೆಕ್ಟರ್ ಆಗಿ ಸೇವೆ ಸಲ್ಲಿಸಿದ್ದರು.

ಕ್ಷೇತ್ರ ಶಿಕ್ಷಣಾಧಿಕಾರಿಯಾಗಿದ್ದ ಓರ್ವರಿಗೆ ಹಿಂಬಡ್ತಿ ನೀಡಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾಗಿ ಆದೇಶ!

ತದನಂತರ ಪೊಲೀಸ್ ಇಲಾಖೆಯಲ್ಲಿ ಡಿವೈಎಸ್ಪಿಯಾಗಿ, ಪದೋನ್ನತಿ ಪಡೆದು ಕರ್ತವ್ಯ ನಿರ್ವಹಿಸುತ್ತಿದ್ದಾರೆ.ತನ್ನ ಕಾಲೇಜು ದಿನಗಳಿಂದಲೇ ಬಹುಮುಖ ಪ್ರತಿಭೆ ಹೊಂದಿದ್ದ ರವಿ ನಾಯಕ, ಸ್ವಂತ ಪರಿಶ್ರಮ ಮತ್ತು ಛಲದಿಂದ ಬೆಳೆದು ಬಂದಿದ್ದು,ದಕ್ಷ ಅಧಿಕಾರಿಯ ಸೇವೆ ಗುರುತಿಸಿ ರಾಷ್ಟ್ರಪತಿಗಳ ಸೇವಾ ಪದಕ ಘೋಷಿಸಿರುವುದಕ್ಕೆ,ರವೀಶ್ ನಾಯಕ ಕುಟುಂಬ ವರ್ಗ, ಹಿತೈಷಿಗಳು, ಆಪ್ತರು, ಗೆಳೆಯರು ಹಾಗೂ ಊರ ನಾಗರಿಕರು ಸಂತಸ ವ್ಯಕ್ತಪಡಿಸಿದ್ದಾರೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button