Important
Trending

ಲಯನ್ಸ್ ಕ್ಲಬ್ ವತಿಯಿಂದ ಹಸಿವು ನಿವಾರಣಾ ಕಾರ್ಯಕ್ರಮ

ಹೊನ್ನಾವರ: ಲಯನ್ಸ್ ಕ್ಲಬ್ ವತಿಯಿಂದ ಹಸಿವು ನಿವಾರಣಾ ಕಾರ್ಯಕ್ರಮವನ್ನು ತಾಲೂಕಿನ ಸರಳಗಿಯಲ್ಲಿ ನಡೆಯಿತು. ಅಂತರಾಷ್ಟ್ರೀಯ ಸೇವಾ ಸಂಸ್ಥೆಯಾದ ಲಯನ್ಸ್ ಕ್ಲಬ್ ಗಳ ಹತ್ತು ಹಲವು ಧ್ಯೇಯೋಧ್ದೇಶಗಳಲ್ಲಿ,ಜಗತ್ತನ್ನು ಹಸಿವು ಮುಕ್ತಗೊಳಿಸುವ ಗುರಿಯು ಒಂದಾಗಿದೆ.ಜಗತ್ತಿನಲ್ಲಿ ಈಗಲೂ ಹಸಿವಿನಿಂದ ನರಳುತ್ತಿರುವವರ ಸಂಖ್ಯೆ ಹೇರಳವಾಗಿರುವುದು ವಿಷಾದದ ಸಂಗತಿಯಾಗಿದೆ.

ಹಾಗಾಗಿ ಹೊನ್ನಾವರ ಲಯನ್ಸ್ ಕ್ಲಬ್ ಕೂಡಾ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಜೊತೆಗೆ ಉಚಿತ ಕಣ್ಣಿನ ಶಸ್ತ್ರಚಿಕಿತ್ಸೆ,ಕಿಡ್ನಿ ಕಾಯಿಲೆಯಿಂದ ಬಳಲುವ ಬಡರೋಗಿಗಳಿಗೆ ಉಚಿತ ಡಯಾಲಿಸಿಸ್ ವ್ಯವಸ್ಥೆಯಂತಹ ಹತ್ತು ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ .ಇದರ ಪ್ರಯೋಜನವನ್ನು ಅರ್ಹರು ಪಡೆಯಿರಿ ಎಂದು ಲಯನ್ಸ್ ಕ್ಲಬ್ ಅಧ್ಯಕ್ಷ ಉದಯ ನಾಯ್ಕ ಕರೆ ನೀಡಿದರು.
ಇವರು ತಾಲೂಕಿನ ಸರಳಗಿಯಲ್ಲಿ ಹೊನ್ನಾವರ ಲಯನ್ಸ್ ಕ್ಲಬ್ ಅಡಿಯಲ್ಲಿ ಹಮ್ಮಿಕೊಂಡ ಹಸಿವು ನಿವಾರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಕ್ಲಬ್‌ನ ಹಿರಿಯ ಸದಸ್ಯರಾದ ಎಸ್.ಜೆ.ಕೈರನ್ನ ಮಾತನಾಡಿ ಲಯನ್ಸ್ ಕ್ಲಬ್ ಹಮ್ಮಿಕೊಳ್ಳುವ ಪ್ರತಿ ಕಾರ್ಯಕ್ರಮದ ಆರ್ಥಿಕ ಮೂಲ ಕ್ಲಬ್ಬಿನ ಸದಸ್ಯರ ಗಳಿಕೆಯ ಭಾಗವಾಗಿದೆ.ಉಳ್ಳವರು ಇಲ್ಲದವರಿಗೆ ಸಹಕರಿಸುವ ಮಾನವೀಯ ಮೌಲ್ಯವನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕಾಗಿದೆ ಎಂದರು. ವೇದಿಕೆಯಲ್ಲಿದ್ದ ಯೋಗೇಶ ರಾಯ್ಕರ್ ಮತ್ತು ವಿನೋದ ನಾಯ್ಕ ಮಾವಿನಹೊಳೆ ಮಾತನಾಡಿದರು.
ಲಯನ್ಸ್ ಕ್ಲಬ್ ಕಾರ್ಯದರ್ಶಿ ಎನ್.ಜಿ.ಭಟ್ ಸರ್ವರನ್ನು ಸ್ವಾಗತಿಸಿ,ಪ್ರಾಸ್ತಾವಿಕವಾಗಿ ಮಾತನಾಡಿದರು. ಎಂ.ಜಿ.ನಾಯ್ಕ ನಿರೂಪಿಸಿದರು.ಖಜಾಂಚಿ ಎಸ್.ಆರ್.ಹೆಗಡೆಕರ್ ವಂದಿಸಿದರು. ಕಾರ್ಯಕ್ರಮದಲ್ಲಿ ಡಾ.ಸುರೇಶ ಎಸ್,ರಾಜೇಶ ಸಾಳೇಹಿತ್ತಲ್,ಅಶೋಕ ಮಹಾಲೆ,ಡಿ.ಡಿ.ಮಡಿವಾಳ, ಕುಸುಮಾ ಎಸ್, ಸರಿತಾ ಮೇಸ್ತ ಇನ್ನಿತರರಿದ್ದರು.

ವಿಸ್ಮಯ ನ್ಯೂಸ್, ವಿವೇಕ್ ಶೇಟ್, ಹೊನ್ನಾವರ

Back to top button