ಅಂಕೋಲಾ : ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ಕರ್ತವ್ಯ ನಿರತ ವೈದ್ಯೆಯ ಮೇಲೆ ನಡೆದ ಅತ್ಯಾಚಾರ ಮತ್ತು ಕ್ರೂರ ಹತ್ಯೆಯನ್ನು ಖಂಡಿಸಿ, ಭಾರತೀಯ ವೈದ್ಯಕೀಯ ಸಂಘ,ಭಾರತೀಯ ದಂತ ವೈದ್ಯರ ಸಂಘ ಹಾಗೂ ಸರಕಾರಿ ವೈದ್ಯರ ಸಂಘದ ಅಂಕೋಲಾ ತಾಲೂಕಾ ಘಟಕವು ಶನಿವಾರದಂದು ಪ್ರತಿಭಟನೆ ನಡೆಸಿ,ತಹಶೀಲ್ದಾರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು .
ಈ ಸಂದರ್ಭದಲ್ಲಿ ಮಾತನಾಡಿದ ಐಎಂಎ(IMA) ಅಧ್ಯಕ್ಷರಾದ ಡಾ.ಜಯಶ್ರೀ ನಾಯಕ ಇದೊಂದು ಹೀನ ಕೃತ್ಯ ವಾಗಿದ್ದು,ಇದನ್ನು ನಾವೆಲ್ಲ ಖಂಡಿಸುತ್ತೇವೆ .ಮಹಿಳಾ ವೈದ್ಯೆಯರಿಗೆ ಹಾಗು ಸಿಬ್ಬಂದಿಗಳಿಗೆ ಕೆಲಸದ ಸ್ಥಳದಲ್ಲಿ ಸೂಕ್ತ ಭದ್ರತೆ ಒದಗಿಸಬೇಕು .ಅಲ್ಲದೆ ಭವಿಷ್ಯದಲ್ಲಿ ಇಂತ ಘಟನೆ ನಡೆಯದಂತೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಐಎಂಎ ಕಾರ್ಯದರ್ಶಿ ಡಾ.ಅರ್ಚನಾ ನಾಯಕ ಮಾತನಾಡಿ ಸದರಿ ಪ್ರಕರಣದ ಸೂಕ್ತ ತನಿಖೆ ಆಗಿ,ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ,ಮಹಿಳೆಯರ ಸುರಕ್ಷತೆ ಬಗ್ಗೆ ಸೂಕ್ತ ಕ್ರಮ ಹಾಗು ಜಾಗೃತಿ ಅಭಿಯಾನ ಆಗಬೇಕು ಎಂದು ತಿಳಿಸಿದರು . ಈ ಸಂದರ್ಭದಲ್ಲಿ ಡಾ. ಫರ್ನಾಂಡಿಸ್, ಡಾ ಸಂತೋಷ್ ಕುಮಾರ್, ಡಾ.ರಮೇಶ್, ಡಾ ಮನೋಜ್, ಡಾ. ಸೌಮ್ಯ, ಡಾ.ಅಕ್ಷರ ದುಗ್ಗಾಣಿ , ಡಾ.ಮಹೇಶ್, ಡಾ. ನೂತನ, ಡಾ. ಐಶ್ವರ್ಯ, ಡಾ. ಮಾಧುರಿ,ದಂತ ವೈದ್ಯರಾದ ಡಾ. ಸಂಜು ನಾಯಕ, ಡಾ. ಕೃಷ್ಣ ಪ್ರಭು, ಡಾ.ರವಿ ಗೌಡ, ಡಾ,ಸರ್ವೇಶ್ ನಾಯ್ಕ, ಡಾ.ಕರುಣಾಕರ ನಾಯ್ಕ ಹಾಗೂ ಶುಶ್ರೂಷಕ ಸಿಬ್ಬಂದಿಗಳು ಹಾಜರಿದ್ದರು .