Follow Us On

WhatsApp Group
Focus News
Trending

ಐಎಮ್‌ಎ ಕರೆ ನೀಡಿರುವ ಬಂದ್‌ಗೆ ಉತ್ತಮ ಪ್ರತಿಕ್ರಿಯೆ: ಕಪ್ಪುಪಟ್ಟಿ ಧರಿಸಿ ಪ್ರತಿಭಟಿಸಿದ ಸರಕಾರಿ ಆಸ್ಪತ್ರೆ ವೈದ್ಯರು

ಕುಮಟಾ: ಟ್ರೈನಿ ವೈದ್ಯೆಯ ಕೊಲೆ ಪ್ರಕರಣ ಇಡೀ ದೇಶಾದ್ಯಂತ ಸದ್ದು ಮಾಡುತ್ತಿದೆ. ಕೊಲೆ ಪ್ರಕರಣ ಖಂಡಿಸಿ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಕರೆ ನೀಡಿರುವ ಬಂದ್‌ಗೆ ಕುಮಟಾದಲ್ಲಿಯೂ ಕೂಡ ಸರಕಾರಿ ಆಸ್ಪತ್ರೆ ವೈದ್ಯರುಗಳು ಹಾಗೂ ಸಿಬ್ಬಂದಿಗಳು ಕೈಗೆ ಕಪ್ಪು ಪಟ್ಟಿ ಧರಿಸುವ ಮೂಲಕ ಬೆಂಬಲ ನೀಡಿದರು. ಈ ವೇಳೆ ತುರ್ತು ಚಿಕಿತ್ಸೆ ಹೊರತು ಪಡೆಸಿ ಉಳಿದೆಲ್ಲಾ ಸೇವೆಗಳು ಬಂದ್ ಆಗಿದ್ದವು.

ಈ ಕುರಿತು ಹೆರಿಗೆ ತಜ್ಞರಾದ ಕೃಷ್ಣಾನಂದ ಟಿ.ಎಸ್ ಅವರು ಮಾತನಾಡಿ, ಐ.ಎಮ್.ಎ ರವರು ಕರೆಕೊಟ್ಟಂತೆ ಕಪ್ಪುಪಟ್ಟಿಯನ್ನು ಧರಿಸಿ ಬಂದ್‌ಗೆ ಬೆಂಬಲವನ್ನು ನೀಡಿದ್ದೇವೆ. ತುರ್ತು ಸೇವೆಗಗಳನ್ನು ಮಾತ್ರ ಒದಗಿಸುತ್ತಿದ್ದೇವೆ. ಈ ಒಂದು ಘಟನೆ ದುರಾದ್ರಷ್ಟಕರ. ವೈದ್ಯರು ಎಲ್ಲರಿಗೂ ಒಳ್ಳೆಯದನ್ನು ಮಾಡುವ ಭಾವನೆಯನ್ನು ಹೊಂದಿರುತ್ತಾರೆ. ಈ ರೀತಿಯಲ್ಲಿ ದುಷ್ಕರ್ಮಿಗಳು ಅವರ ಮೇಲೆ ಹಲ್ಲೆಯನ್ನು ಮಾಡಿರುವುದು ಸರಿಯಲ್ಲ. ಇದರ ಬಗ್ಗೆ ಎಲ್ಲರೂ ಕೂಡ ಎಚ್ಚೆತ್ತುಕೊಳ್ಳಬೇಕು. ಈ ಘಟನೆಗೆ ಕಾರಣಿಕರ್ತರಾದವರಿಗೆ ಶಿಕ್ಷೆಯಾಗಲೇ ಬೇಕು.

ವೈದ್ಯರು ಸಮಾಜಕ್ಕೆ ಆಧಾರ ಸ್ಥಂಭವಿದ್ದAತೆ ಆದರೆ ಈಗ ಅವರೇ ಹೆದರಿಕೊಂಡು ಕೆಲಸಮಾಡುವಂತ ಸ್ಥಿತಿ ಬಂದೊದಗಿದೆ ಎಂದು ಈ ಕೃತ್ಯದ ಕುರಿತು ಬೇಸರ ವ್ಯಕ್ತ ಪಡಿಸಿದರು. ಈ ವೇಳೆ ಖ್ಯಾತ ವೈದ್ಯರಾಶ ಡಾ|| ಶ್ರೀನಿವಾಸ ನಾಯಕ, ಡಾ|| ಕೃಷ್ಣಾನಂದ ಟಿ.ಎಸ್ ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿಗಳು ಹಾಜರಿದ್ದರು.

ವಿಸ್ಮಯ ನ್ಯೂಸ್, ನಾಗೇಶ ದೀವಗಿ, ಕುಮಟಾ

Back to top button