Follow Us On

WhatsApp Group
Important
Trending

ದ.ಕ ಜಿಲ್ಲೆಯ ಬೆಳ್ಳಾರೆ ಪೊಲೀಸ್ ಠಾಣೆ ಉಪನಿರೀಕ್ಷಕರಾಗಿ ತಿಮ್ಮಪ್ಪ ಎಸ್: ಅಂಕೋಲಾದಲ್ಲಿ ASI ಆಗಿ ಕರ್ತವ್ಯ ನಿರ್ವಹಿಸುತ್ತಿದ್ದವರಿಗೆ PSI ಆಗಿ ಪ್ರಮೋಶನ್

ಅಂಕೋಲಾ : ಉ ಕ ಜಿಲ್ಲೆಯ ಅಂಕೋಲಾ ಪೋಲೀಸ್ ಠಾಣೆಯಲ್ಲಿ ASI ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ತಿಮ್ಮಪ್ಪ ಎಸ್ ಬೇಡುಮನೆ ಇವರು,ಪದೋನ್ನತಿ ಹೊಂದಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆ ಪೊಲೀಸ್ ಠಾಣೆಯ PSI ಆಗಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಶಿರಾಲಿಯವರಾದ ಇವರು 1996 ರಲ್ಲಿ ಪೊಲೀಸ್ ಇಲಾಖೆಗೆ ಸೇರಿ, ಜಿಲ್ಲೆಯ ದಾಂಡೇಲಿ ಗ್ರಾಮೀಣ ಠಾಣೆ, ಶಿರಸಿ ಮಾರುಕಟ್ಟೆ ಠಾಣೆ, ದಾಂಡೇಲಿ ಅರಣ್ಯ ಘಟಕ, ಗೋಕರ್ಣ ಪೊಲೀಸ್ ಠಾಣೆ ಮತ್ತಿತರೆಡೆ ಸೇವೆ ಸಲ್ಲಿಸಿ, ಕಳೆದ 3 ವರ್ಷಗಳಿಂದ ಅಂಕೋಲಾದಲ್ಲಿ ASI ಆಗಿ ಸೇವೆ ಸಲ್ಲಿಸುತ್ತಿದ್ದರು.

ತಮ್ಮ ಸುದೀರ್ಘ ಸೇವಾವಧಿಯಲ್ಲಿ, ಜನಪರ ಕಾಳಜಿಯೊಂದಿಗೆ ಇಲಾಖಾ ಕರ್ತವ್ಯವನ್ನು ಅಚ್ಚು ಕಟ್ಟಾಗಿ ನಿರ್ವಹಿಸಿ,ತಮ್ಮ ಕರ್ತವ್ಯ ದಕ್ಷತೆ ಹಾಗೂ ಪ್ರಾಮಾಣಿಕತೆಯಿಂದ ಗುರುತಿಸಿಕೊಂಡಿದ್ದು, ಹಲವರ ಪ್ರೀತಿ ವಿಶ್ವಾಸ ಗಳಿಸಿಕೊಂಡಿದ್ದಾರೆ. ಅಂಕೋಲಾದಲ್ಲಿ ಸೇವೆ ಸಲ್ಲಿಸುತ್ತಿರುವಾಗ ಪದೋನ್ನತಿಗೊಂಡು ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆ ಠಾಣೆಯ PSI ಆಗಿ ಕರ್ತವ್ಯಕ್ಕೆಹಾಜರಾಗಿದ್ದು, ತಿಮ್ಮಪ್ಪ ಎಸ್ ಕುಟುಂಬ ಸದಸ್ಯರು, ಆಪ್ತರು , ಹಿತೈಷಿಗಳು, ಅಂಕೋಲಾದ ಹಲವರು,ಇಲಾಖೆಯ ಸಹೋದ್ಯೋಗಿಗಳು ಸೇರಿದಂತೆ ಇತರರನೇಕರು,ಸಂತಸ ವ್ಯಕ್ತಪಡಿಸಿ,ತಿಮ್ಮಪ್ಪ ಎಸ್ ಅವರಿಗೆ ಶುಭಾಶಯ ಮತ್ತು ಅಭಿನಂದನೆ ತಿಳಿಸಿದ್ದಾರೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button