Big News
Trending

ರಾತ್ರಿ ವೇಳೆ ಬೀಸಿದ ಭಾರಿ ಸುಳಿ ಗಾಳಿಯಿಂದ 13 ಮನೆಗಳಿಗೆ ಹಾನಿ

ತಹಶೀಲ್ದಾರ ಕುಂಬಾರ ಪರಿಶೀಲನೆ
ಅಂಕೋಲಾ ತಾಲೂಕಿನ ಕೇಣಿ-ದೇಶನ್‍ಭಾಗದಲ್ಲಿ ನಡೆದ ಘಟನೆ

[sliders_pack id=”3491″]

ಅಂಕೋಲಾ : ಭಾವಿಕೇರಿ ಗ್ರಾಮ ಪಂಚಾಯತ ವ್ಯಾಪ್ತಿಯ ಕೇಣಿ-ದೇಶನಭಾಗ್ ಸಮುದ್ರ ತೀರದಂಚಿನ ಪ್ರದೇಶದಲ್ಲಿ ಕಳೆದೆರಡು ದಿನಗಳ ಹಿಂದೆ ರಾತ್ರಿ ವೇಳೆಯಲ್ಲಿ ಹಠಾತ್ತನೆ ಬೀಸಿದ ಭಾರಿ ಸುಳಿಗಾಳಿ ಹಾಗೂ ಮಳೆಯ ಆರ್ಭಟಕ್ಕೆ ಸುತ್ತ-ಮುತ್ತಲಿನ ಹತ್ತಾರು ಮನೆಗಳ ಮೇಲ್ಛಾವಣಿ ಮತ್ತಿತರ ಹಾನಿಯಾಗಿದ್ದು ತಹಶೀಲ್ದಾರ ಉದಯ ಕುಂಬಾರ ಸ್ಥಳ ಪರಿಶೀಲನೆ ನಡೆಸಿದರು.

ಕೇಣಿ ದೇಶನಭಾಗದ ಸಮುದ್ರ ತೀರಕ್ಕೆ ಹೊಂದಿಕೊಂಡಿರುವ ಪ್ರದೇಶದಲ್ಲಿ ಭಾರಿ ಪ್ರಮಾಣದ ಸುಳಿಗಾಳಿ ಏರ್ಪಟ್ಟು ಒಮ್ಮೆಲೆಯೇ ಪಕ್ಕದ ಜನವಸತಿ ಪ್ರದೇಶಕ್ಕೆ ನುಗ್ಗಿತ್ತು ಎಂದು ಹೇಳಲಾಗಿದೆ. ಗಾಳಿಯ ರಭಸಕ್ಕೆ ಹಲವು ಮನೆಗಳ ಮೇಲ್ಛಾವಣಿ ಸೀಟ್, ಹೆಂಚುಗಳು ಮತ್ತಿತರ ಹೊದಿಕೆಯೂ ಹಾರಿ ಹೋಗಿದ್ದು ಅಲ್ಲಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ. ರಾತ್ರಿ ವೇಳೆಯಲ್ಲಿ ನಡೆದ ಈ ಅಚಾನಕ ಘಟನೆಯಿಂದ ಕೆಲವು ಕುಟುಂಬಗಳಿಗೆ ತೀವ್ರ ತೊಂದರೆ ಮತ್ತು ಆತಂಕವಾಗಿತ್ತು ಎನ್ನಲಾಗಿದೆ. ಇದೇ ವೇಳೆ ಸುರಿದ ಭಾರಿ ಮಳೆಯು ಜನಜೀವನಕ್ಕೆ ತೊಂದರೆಪಡಿಸಿತ್ತು. ತಹಶೀಲ್ದಾರ ಉದಯ ಕುಂಬಾರ ಸ್ಥಳಕ್ಕೆ ತೆರಳಿ ಹಾನಿಗೊಳಗಾದ ಪ್ರದೇಶ ಪರಿಶೀಲಿಸಿದರು.

ಪಾಶ್ರ್ವವಾಯು ಪೀಡಿತ ವ್ಯಕ್ತಿಯೋರ್ವರು ಸೇರಿದಂತೆ ಕೆಲವರು ತಮ್ಮ ನಾನಾ ಸಮಸ್ಯೆಗಳನ್ನು ಅಧಿಕಾರಿಗಳ ಬಳಿ ತೋಡಿಕೊಂಡರು. ಸ್ಥಳೀಯರ ಸಮಸ್ಯೆಗಳನ್ನು ಶಾಂತ ಚಿತ್ತರಾಗಿ ಆಲಿಸಿದ ತಹಶೀಲ್ದಾರ, ನೊಂದವರಿಗೆ ಸಾಂತ್ವನ ಹೇಳಿ ಸರ್ಕಾರದಿಂದಾಗುವ ಎಲ್ಲಾ ರೀತಿಯ ನೆರವು ಮತ್ತು ಪರಿಹಾರ ನೀಡುವುದಾಗಿ ಭರವಸೆ ನೀಡಿದರು.

ಸ್ಥಳದಲ್ಲೇ ಹಾಜರಿದ್ದ ಕಂದಾಯ ನಿರೀಕ್ಷಕ ಸಂತೋಷ ಯೆಳಗದ್ದೆ, ಗ್ರಾಮಲೆಕ್ಕಾಧಿಕಾರಿ ಮಹೇಶ ಬಣಕಾರ್, ಗ್ರಾಮ ಸಹಾಯಕ ರಾಮಕೃಷ್ಣ ನಾಯಕ, ಅವರಿಗೆ ಹಾನಿಯ ಸರಿಯಾದ ಅಂದಾಜು ಪಟ್ಟಿ ಸಿದ್ಧಪಡಿಸಿ ವರದಿ ನೀಡುವಂತೆ ಸೂಚಿಸಿದರು. ಒಟ್ಟೂ 13ಮನೆಗಳಿಗೆ ಹಾನಿಯಾಗಿದ್ದು, ಅವುಗಳಲ್ಲಿ 3ಮನೆಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಮತ್ತು 10ಮನೆಗಳಿಗೆ ಭಾಗಶಃ ಹಾನಿ ಅಂದಾಜಿಸಲಾಗಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

ಚಿಂತಿಸುವ ಅವಶ್ಯಕತೆ ಇಲ್ಲ, ಒಂದು ಕರೆ ನಿಮ್ಮ ಜೀವನವನ್ನೇ ಬದಲಾಯಿಸುತ್ತದೆ

ಶ್ರೀ ಕೇರಳ, ಕರಾವಳಿ ಮತ್ತು ತುಳುನಾಡಿನ ಪ್ರಖ್ಯಾತ ದೈವ ಶಕ್ತಿ ಜ್ಯೋತಿಷ್ಯರು.
ಸರ್ವ ಸಮಸ್ಯೆಗಳಿಗೂ ಪರಿಹಾರ ಇವರಲ್ಲಿ ಮಾತ್ರ ಸಾಧ್ಯ. ನಿಮ್ಮ ಸಮಸ್ಯೆಗಳಾದ: ಗಂಡ ಹೆಂಡತಿಯ ಸಮಸ್ಯೆ, ಡೈವೋರ್ಸ್, ಕೋರ್ಟ್ ಕೇಸ್, ವಿದ್ಯೆ, ಉದ್ಯೋಗ, ಮದುವೆ ವಿಳಂಬ, ಇಷ್ಟಪಟ್ಟವರು ನಿಮ್ಮಂತೆ ಆಗಲು, ಬಿಸಿನೆಸ್ ನಲ್ಲಿ ಲಾಭ – ನಷ್ಟ, ರಾಜಕೀಯ, ವಿದೇಶ ಪ್ರಯಾಣ, ಸಾಲಬಾಧೆ, ಶತ್ರು ಪೀಡೆ, ಎಷ್ಟೇ ಸಂಪತ್ತಿದ್ದರೂ ಮನಶಾಂತಿಯ ಕೊರತೆ, ಎಷ್ಟೇ ಪ್ರಯತ್ನ ಪಟ್ಟರೂ ಜೀವನದಲ್ಲಿ ಅಭಿವೃದ್ಧಿ ಮತ್ತು ಏಳಿಗೆ ಆಗದೇ ನೊಂದಿದ್ದರೆ, ಇನ್ನು ನಿಮ್ಮ ಜೀವನದ ಯಾವುದೇ ಗುಪ್ತ ಹಾಗೂ ಕಠಿಣ ಸಮಸ್ಯೆಗಳೇನೆ ಇದ್ದರೂ ಅದರ ಮೂಲವನ್ನು ಶೋಧಿಸಿ ಶೀಘ್ರ ಹಾಗೂ ಶಾಶ್ಟತ ಪರಿಹಾರ ಮಾಡಿಕೊಡುತ್ತಾರೆ. ಪಂಡಿತ ಶ್ರೀ ಶ್ರೀ ಬ್ರಹ್ಮ ಕುಮಾರ ಗುರೂಜಿ:-8884997762
( ಜಾಹೀರಾತು )

Back to top button