ಸುಜ್ಞಾನನಿಧಿ ಕಾರ್ಯಕ್ರಮ: 131 ವಿದ್ಯಾರ್ಥಿಗಳಿಗೆ ಶಿಷ್ಯವೇತನದ ಮಂಜೂರು ಪತ್ರ

ಭಟ್ಕಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್‌ (ರಿ) ಭಟ್ಕಳ ತಾಲೂಕಿನಲ್ಲಿ ಸುಜ್ಞಾನನಿಧಿ ಕಾರ್ಯಕ್ರಮದಡಿ 131 ವಿದ್ಯಾರ್ಥಿಗಳಿಗೆ ಶಿಷ್ಯವೇತನದ ಮಂಜೂರು ಪತ್ರ ಹಾಗೂ ಜ್ಞಾನದೀಪ ಕಾರ್ಯಕ್ರಮದಡಿಯಲ್ಲಿ ಶಿಕ್ಷಕರ ಕೊರತೆ ಇರುವ 12 ಶಾಲೆಗಳಿಗೆ ಶಿಕ್ಷಕರ ಒದಗಿಸಿ ಮಂಜೂರಾತಿ ಪತ್ರವನ್ನು ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ ನಾಯ್ಕರವರ ಮೂಲಕ ವಿತರಿಸಿದರು.

ಭಟ್ಕಳ ಯೋಜನಾ ಕಚೇರಿಯಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ, ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಅವರು “ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಮುಖಾಂತರ ಪೂಜ್ಯರು ಬ್ಯಾಂಕ್‌ ಮೂಲಕ ಹಣಕಾಸಿನ ವ್ಯವಸ್ಥೆ ಅಷ್ಟೆ ಅಲ್ಲದೇ ಶಿಕ್ಷಣ, ಸಮಾಜ ಅಭಿವೃದ್ಧಿ, ಗ್ರಾಮೀಣ ಅಭಿವೃದ್ದಿಗೆ ಒತ್ತು ನೀಡಿ ಗ್ರಾಮೀಣ ಜನರ ಬದುಕನ್ನು ಹಸನುಗೊಳಿಸುವುದರ ಜೊತೆಗೆ ಮಹಿಳೆಯರ ಸ್ವಾವಲಂಬಿನೆ ಬದುಕಿಗೆ ಹತ್ತಾರು ಕಾರ್ಯಕ್ರಮಗಳ ಮೂಲಕ ಸಾಕಷ್ಟು ಅನುಕೂಲವಾಗಿದೆ. ಎಂದು ಧರ್ಮಾಧಿಕಾರಿಗಳ ಸಮಾಜಮುಖಿ ಕಾರ್ಯದ ಬಗ್ಗೆ ಶ್ಲಾಘಿಸಿದರು.

ಮುಖ್ಯ ಅತಿಥಿಗಳಾಗಿ ತಾಲೂಕು ಪತ್ರಕರ್ತ ಸಂಘದ ಅಧ್ಯಕ್ಷರಾದ ವಿಷ್ಣು ದೇವಾಡಿಗ ಮಾತನಾಡಿ,”ಗ್ರಾಮಾಭಿವೃದ್ಧಿ ಯೋಜನೆಯಿಂದ ಮಹಿಳೆಯರಲ್ಲಿ ಆರ್ಥಿಕ ಸ್ವಾವಲಂಬನೆ ಬಂದಿದ್ದು ಇದರಿಂದ ಗ್ರಾಮಿಣ ಮಹಿಳೆಯರ ಸಬಲೀಕರಣ ಆಗಿದೆ” ಗ್ರಾಮೀಣ ಮಟ್ಟದ ಎಷ್ಟೋ ಮಹಿಳೆಯರಿಗೆ ಯೋಜನೆ ದಾರಿ ದೀಪವಾಗಿದೆ ಎಂದರು.

ಉತ್ತರ ಕನ್ನಡ ಜಿಲ್ಲೆಯ ಸಂಸ್ಥೆ ನಿರ್ದೇಶಕರಾದ ಮಹೇಶ್ ಎಂ ಡಿ ಮಾತನಾಡಿ, ಭಟ್ಕಳ ತಾಲೂಕಿನಲ್ಲಿ ಒಟ್ಟು 243 ವಿದ್ಯಾರ್ಥಿಗಳಿಗೆ ರೂ 19.54 ಲಕ್ಷ ಮೊತ್ತ ವಿತರಣೆ ಆಗಿದ್ದು, ಇದೂವರೆಗೂ ಒಟ್ಟು 327 ವಿಧ್ಯಾರ್ಥಿಗಳಿಗೆ ರೂ 38.47 ಲಕ್ಷ ಮೊತ್ತದ ಸುಜ್ಞಾನನಿಧಿ ಶಿಷ್ಯ ವೇತನ ವಿತರಣೆ ಆಗಿರುತ್ತದೆ. ಅಲ್ಲದೆ ಜಿಲ್ಲೆಯಲ್ಲಿ ಸಂಘದ ಸದಸ್ಯರ ಮಕ್ಕಳ ಶೈಕ್ಷಣಿಕ ಉನ್ನತಿಗಾಗಿ 4982 ವಿದ್ಯಾರ್ಥಿಗಳಿಗೆ 5.77 ಕೋಟಿ ರೂ. ಮೊತ್ತದ ಸುಜ್ಞಾನನಿಧಿ ಶಿಷ್ಯವೇತನ ನೀಡಲಾಗಿದೆ.

ಇಷ್ಟೆ ಅಲ್ಲದೆ ತಾಲೂಕಿನ ತೀರಾ ಹಳ್ಳಿ ಪ್ರದೇಶದ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿಂದಾಗಿ ಶೈಕ್ಷಣಿಕ ಹಿನ್ನಡೆಯಾಗುವುದನ್ನು ತಪ್ಪಿಸಲು ಪೂಜ್ಯರು 12 ಶಾಲೆಗಳಿಗೆ ಶಿಕ್ಷಕರನ್ನು ಒದಗುಸಿದ್ದು, ಶೈಕ್ಷಣಿಕವಾಗಿ ಬಹಳ ಅನುಕೂಲವಾಗಿದೆ. ಎಂದರು ಯೋಜನೆಯಲ್ಲಿನ ಕಾರ್ಯಕ್ರಮಗಳ ಬಗ್ಗೆ ಪರಿಚಯಿಸುತ್ತಾ, ವಿದ್ಯಾರ್ಥಿಗಳು ವಿದ್ಯೆ ಸಂಪತ್ತಾಗಿಸಿಕೊಳ್ಳುವ ನಿಟ್ಟಿನಲ್ಲಿ ಶ್ರಮ ಹಾಕಬೇಕು. ನಮ್ಮ ಸಂಸ್ಕಾರ, ಸಂಸ್ಕೃತಿಯನ್ನು ಮಕ್ಕಳಿಗೆ ಕಲಿಸುವಂತಾಗಬೇಕು,” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಭಟ್ಕಳ ತಾಲೂಕಿನ ಯೊಜನಾಧಿಕಾರಿ ಗಣೆಶ್‌ ಡಿ ನಾಯ್ಕ ಸ್ವಾಗತಿಸಿದರು. ಮೇಲ್ವಿಚಾರಕರಾದ ಅಶೋಕ್‌ ಗೌಡ ನಿರೂಪಿಸಿದರು. ವಿದ್ಯಾರ್ಥಿಗಳು ಹಾಗೂ ಪಾಲಕರು ಉಪಸ್ಥಿತರಿದ್ದರು.

ವಿಸ್ಮಯ ನ್ಯೂಸ್, ಈಶ್ವರ್ ನಾಯ್ಕ, ಭಟ್ಕಳ

Exit mobile version