Follow Us On

WhatsApp Group
Important
Trending

ಕಳೆದ ಏಳು ವರ್ಷದಿಂದ ನಾಪತ್ತೆಯಾಗಿದ್ದ ವ್ಯಕ್ತಿ ಮರಳಿ ಕುಟುಂಬ ಸೇರಿದ: ಭಾವುಕ ಕ್ಷಣ

ಸಿದ್ದಾಪುರ: ಕಳೆದ ಏಳು ವರ್ಷಗಳಿಂದ ನಾಪತ್ತೆಯಾಗಿ, ನಾಲ್ಕು ವರ್ಷಗಳಿಂದ ತಾಲೂಕಿನ ಮುಗದುರಿನಲ್ಲಿರುವ ಪುನೀತ್ ರಾಜಕುಮಾರ ಅನಾಥಾಶ್ರಮದಲ್ಲಿ ಆಶ್ರಯ ಪಡೆದಿದ್ದ ಕೃಷ್ಣಕುಮಾರ ಎನ್ನುವ ಛತ್ತಿಸ್‌ಘಡದ ವ್ಯಕ್ತಿಯನ್ನು ಅವನ ಸಂಬoಧಿಗಳ ಜೊತೆ ಸಿದ್ದಾಪುರ ಪೊಲೀಸ್ ಠಾಣೆ ಪೊಲೀಸರ ಸಮಕ್ಷಮ ಕಳುಹಿಸಿ ಕೊಡಲಾಯಿತು.

ಇದನ್ನೂ ಓದಿ: ಇಲ್ಲಿದೆ ಬೃಹತ್ ಉದ್ಯೋಗಾವಕಾಶ: 1476 ಹುದ್ದೆಗಳಿಗೆ ನೇಮಕಾತಿ: SSLC ಆದವರು ಅರ್ಜಿ ಸಲ್ಲಿಸಿ

ಕಳೆದ ನಾಲ್ಕು ವರ್ಷಗಳ ಹಿಂದೆ ಭಟ್ಕಳ ತಾಲೂಕಿನ ಮುರುಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಬಸ್ತಿಮಕ್ಕಿಯಲ್ಲಿರುವ ರೂಪೇಶ ಲಂಚ್ ಹೋಮ್ ಎದುರುಗಡೆ ರಸ್ತೆಯ ಪಕ್ಕದಲ್ಲಿ ಅಸಹಾಯಕ, ಅನಾಥ ಸ್ಥಿತಿಯಲ್ಲಿ, ಊಟ ತಿಂಡಿ ಇಲ್ಲದೆ ಅಶಕ್ತನಾಗಿ ಹಸಿವೆಯಿಂದ ಈತ ಒದ್ದಾಡುತ್ತಿದ್ದ. ಈ ಕುರಿತು ಬೈಲೂರು ಗ್ರಾಮ ಪಂಚಾಯತ ಸದಸ್ಯ ವಾಸು ಎಮ್ ನಾಯ್ಕ ಹಾಗೂ ಬಿಜೆಪಿ ಮುಖಂಡ ಈಶ್ವರ ಎಲ್ ನಾಯ್ಕ ಬೈಲೂರು ಅವರು ಮುರುಡೇಶ್ವರ ಪೋಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ಮುರುಡೇಶ್ವರ ಪೊಲೀಸರು ಈ ವ್ಯಕ್ತಿಯನ್ನು ಆಶ್ರಮದಲ್ಲಿ ಸೇರಿಸಿಕೊಳ್ಳುವಂತೆ ಆಶ್ರಮದ ಮುಖ್ಯಸ್ಥ ನಾಗರಾಜ ನಾಯ್ಕ ಬಳಿ ಕೋರಿಕೊಂಡಿದ್ದರು.

ಆಶ್ರಮದಲ್ಲಿ ಆಶ್ರಯ ಪಡೆದ ಈತನ ಬಗ್ಗೆ ವಿಳಾಸ ಪತ್ತೆ ಹಚ್ಚಿ ಕುಟುಂಬಕ್ಕೆ ಸೇರಿಸಲಾಯಿತು. ಛತ್ತಿಸ್‌ಘಡ ಪೋಲಿಸರು ಹಾಗೂ ಕೃಷ್ಣ ಕುಮಾರನ ಸಂಬoಧಿಗಳು ಕರ್ನಾಟಕದ ಜನತೆಗೆ, ಕರ್ನಾಟಕ ಪೋಲೀಸರಿಗೆ ಹಾಗೂ ಆತನನ್ನು ನಾಲ್ಕು ವರ್ಷಗಳಿಂದ ಚಿಕಿತ್ಸೆ ನೀಡಿ ಆರೈಕೆಮಾಡಿ ಕುಟುಂಬಕ್ಕೆ ಸೇರಿಸಿದ ಆಶ್ರಮದವರಿಗೆ ಅಭಿನಂದನೆಗಳನ್ನು ತಿಳಿಸಿದರು.

ವಿಸ್ಮಯ ನ್ಯೂಸ್ ದಿವಾಕರ್ ಸಂಪಖoಡ ಸಿದ್ದಾಪುರ

Back to top button